ಗುಡಿ...
ಕವನ
ಕಟ್ಟಬೇಕಿದೆ ಗುಡಿಯೊಂದ
ಕರುಣೆಯ ಬೆಳಕ ಹಚ್ಚುತಾ
ಸಹಕಾರದ ದೂಪವ ಪಸರಿಸುತಾ
ಬಡವನ ಹಸಿವಿಗೆ ಅನ್ನವಾಗುತಾ.
ಕಟ್ಟೋಣ ಗುಡಿಯನು
ಜಾತಿ,ಮತದ ಗೋಡೆಯ ಕೆಡವುತಾ
ಸಮಾನತೆಯನು ಎತ್ತಿಹಿಡಿಯುತಾ
ಮೂಢ ಭಕ್ತಿಯ ಅಳಿಸುತಾ.
ಕಟ್ಟಬೇಕಿದೆ ಆ ಗುಡಿಯನು..!
ತಾಯಿಯೆಂಬ ದೇವರನು ಪೂಜಿಸುತಾ
ಸಮಸ್ತ ಹೆಣ್ಣುಕುಲವನ್ನು ಗೌರವಿಸುತಾ
ಅಸ್ಪ್ರಶ್ಯತೆಯನು ತ್ಯಜಿಸುತಾ
ಕಟ್ಟಬೇಕಿದೆ ಗುಡಿಯ
ಆಸರೆಯೊಳು ಬೆಳಕಾಗುತಾ
ರಕ್ಷೆಯಾಗಿ ನಂಬಿಕೆಯಾಗುತಾ
ಅದುವೇ ಬದುಕಿಗೆ ಪವಿತ್ರ ಪಥವಾಗುತಾ.
-ಆಕಾಶ್ ಪೂಜಾರಿ ಗೇರುಕಟ್ಟೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್