ಗುಣಾತ್ಮಕ ಶಿಕ್ಷಣಕ್ಕಾಗಿ ಸಂಪನ್ಮೂಲ ಡೈರಕ್ಟರಿ

ಗುಣಾತ್ಮಕ ಶಿಕ್ಷಣಕ್ಕಾಗಿ ಸಂಪನ್ಮೂಲ ಡೈರಕ್ಟರಿ

ಗುಣಾತ್ಮಕ ಶಿಕ್ಷಣಕ್ಕಾಗಿ ಸಂಪನ್ಮೂಲ ಡೈರಕ್ಟರಿ
ಯಾವುದೇ ದೇಶದ ಅಭಿವೃದ್ದಿಯ ಮೇಲೆ ಆ ದೇಶದ ಸಂಪನ್ಮೂಲಗಳು ಹೇಗೆ ಪ್ರಭಾವ ಬೀರುತ್ತವೆಯೋ ಹಾಗೆಯೇ ಶಿಕ್ಷಣದ ಅಭಿವೃದ್ದಿ ಹಾಗೂ ಸಾಕಾರದಲ್ಲಿ ಆಯಾ ಶಾಲೆಗಳು ಹೊಂದಿರುವ ಸಂಪನ್ಮೂಲಗಳು ಪ್ರಬಾವ ಬೀರುತ್ತವೆ. ದೇಶದ ಅಭಿವೃದ್ದಿಯನ್ನು ಆ ದೇಶವು ಹೊಂದಿರುವ ಸಂಪನ್ಮೂಲಗಳು ಹಾಗೂ ತಲಾದಾಯ, ಜನರ ಜೀವನಮಟ್ಟದ ಮೂಲಕ ಅಳತೆ ಮಾಡಿದರೆ  ಹಾಗೆ ಒಂದು ಶಾಲೆಯ ಶಿಕ್ಷಣದ ಗುಣಮಟ್ಟದ ಬಗ್ಗೆ ಆ ಶಾಲೆ ಹೊಂದಿರುವ ಸಂಪನ್ಮೂಲಗಳು ಹಾಗೂ ಮಕ್ಕಳ ಕಲಿಕಾ ಪ್ರಗತಿಯನ್ನು ಅವಲಂಬಿಸಿದೆ. ಒಟ್ಟಿನಲ್ಲಿ ಒಂದು ದೇಶ/ರಾಜ್ಯ,  ಹಾಗೂ ಶಾಲೆಯಾಗಲಿ ಅಭಿವೃದ್ದಿ ಪಥದಡಗೆ ಸಾಗುವಲ್ಲಿ  ಸಂಪನ್ಮೂಲಗಳು ತೀರಾ ಅಗತ್ಯವಾಗಿದೆ.
ಶಿಕ್ಷಣದಲ್ಲಿ ಸಂಪನ್ಮೂಲ ಡೈರಕ್ಟರಿಯ ಪಾತ್ರದ ಕುರಿತು ಚರ್ಚಿಸುವುದು ಇಂದು ತುಂಬಾ ಅಗತ್ಯವಾಗಿದೆ. ಸಂಪನ್ಮೂಲಗಳನ್ನು ನಾವು ಭೌತಿಕ ಸಂಪನ್ಮೂಲ ಹಾಗೂ ಮಾನವ ಸಂಪನ್ಮೂಲಗಳೆಂದು ವಿಂಗಡಿಸುತ್ತೆವೆ . ಭೌತಿಕ ಸಂಪನ್ಮೂಲಗಳು ಕಲಿಕಾ ಪೂರಕ ಸನ್ನಿವೇಶವನ್ನು ನಿರ್ಮಿಸುವಲ್ಲಿ ಸಹಕಾರಿಯಾದರೇ ಮಾನವ ಸಂಪನ್ಮೂಲ ಕಲಿಕೆಯನ್ನು ಗಟ್ಟಿಗೊಳಿಸುವಲ್ಲಿ ಅರ್ಥವತ್ತಗೊಳಿಸುವಲ್ಲಿ ಸಹಕಾರಿಯಾಗಿದೆ.
ಶಿಕ್ಷಣತಜ್ಞರ ಪ್ರಕಾರ ಪರಿಣಾಮಕಾರಿ ಕಲಿಕೆಯು ಮೂರ್ತದಿಂದ ಅಮೂರ್ತದಡೆಗೆ ಸಾಗುತ್ತದೆ ಎಂದು ಹೇಳಿರುವುದು ಹಾಗೂ ಮನಗೆದ್ದು, ಮಾರು ಗೆಲ್ಲು ಎಂಬ ನಾಣ್ನುಡಿಯು ವ್ಯಕ್ತಿ ವೊದಲು ತನ್ನ ಸುತ್ತಮುತ್ತಲಿನ ಪರಿಸರವನ್ನು  ಅರ್ಥೈಯಿಸಿಕೊಳ್ಳುವುದು ಮುಖ್ಯ ಎಂದು ಹೇಳುತ್ತದೆ. ಈ ಹಿನ್ನೆಲೆಯಲ್ಲಿ ಅವಲೋಕಿಸಿದಾಗ ಕಲಿಕಾ ಸಿದ್ದಾಂತವು ಕೂಡಾ ಅನುಭವದ ಕಲಿಕೆಗೆ ಹೆಚ್ಚಿನ ಒತ್ತು ನೀಡಿದೆ.
ತರಗತಿಯಲ್ಲಿ ಶಿಕ್ಷಕರು ಮಗುವಿಗೆ ಪರಿಚಯವಿರುವ ಹಾಗೂ ಮಗುವಿನ ಅನುಭವಕ್ಕೆ ಬಂದಿರುವ ವಿಷಯಗಳನ್ನು ಕಲಿಕಾ ಪ್ರಕ್ರಿಯೆ ಬಳಸಿಕೊಂಡಿದ್ದೆ ಆದರೆ  ಮಕ್ಕಳ ಕಲಿಕೆಯ ವೇಗ ಹೆಚ್ಚಾಗುವುದರ ಜೊತೆಗೆ ಪರಿಣಾಮಕಾರಿ ಕಲಿಕೆಯನ್ನು ಕಾಣಲು ಸಾದ್ಯ. ತರಗತಿ ಪ್ರಕ್ರಿಯೆಗಳು ಪರಿಣಾಮಕಾರಿಗೆ ಸಂಪನ್ಮೂಲಗಳ ಬಳಕೆ ಅಗತ್ಯವಾಗಿದೆ ಹಾಗಾಗಿ ಪೂರ್ವಬಾವಿಯಾಗಿ ಶಿಕ್ಷಕರು ಸಂಪನ್ಮೂಲ ಡೈರೆಕ್ಟರಿಯನ್ನು ಹೊಂದಿರುವುದು ಅಗತ್ಯವೆನಿಸುತ್ತದೆ.
ಇಲಾಖೆಯು ಸ್ಥಳಿಯ ಸಂಪನ್ಮೂಲಗಳ ಸದ್ಬಳಕೆಯಾಗಬೆಂಕೆಂಬ ಹಿನ್ನಲೆಯಲ್ಲಿ ಸಮುದಾಯ ದೀಪ ಕಾರ್ಯಕ್ರಮವನ್ನು ಜಾರಿಗೆ ತಂದಿದೆ ಆದರೇ ಈ ಕಾರ್ಯಕ್ರಮವು ಅನುಷ್ಟಾನ ದಿಸೆಯಲಿ ಮಂದಗತಿಯಲ್ಲಿ ಸಾಗುತ್ತಿದೆ.  ಸಂಪನ್ಮೂಲ ಡೈರಕ್ಟರಿಯು ಗ್ರಾಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಂಪನ್ಮೂಲಗಳನ್ನು ಒಳಗೊಂಡಿರುತ್ತದೆ. ಸ್ಥಳಿಯ ಕುಶಲಕರ್ಮಿಗಳು, ಗುಡಿಕೈಗಾರಿಕೆಗಳು, ಕೈಗಾರಿಕೆಗಳು, ವೈದ್ಯರು, ನಾಟಿ ವೈದ್ಯರು, ಯುವಕ/ತಿ ಮಂಡಳಿಗಳು, ಸ್ವಸಹಾಯ ಗುಂಪುಗಳು, ಐತಿಹಾಸಿಕ ಸ್ಮಾರಕಗಳು ಹಾಗೂ ಶಾಸನಗಳು, ಕೊಟೆ ಕೊತ್ತಲುಗಳು, ದೇವಸ್ಥಾನ, ಮಸೀದಿ, ಚರ್ಚ, ಮದರಸಾ, ಬಸದಿ ಹಾಗೂ ನೀರಾವರಿ, ನೈಸರ್ಗಿಕ ಸಂಪನ್ಮೂಲಗಳು ಸಂಪರ್ಕಿಸಬೇಕಾದ ವ್ಯಕ್ತಿಗಳ ಬಗ್ಗೆ ಪೂರ್ವಬಾಗಿಯಾಗಿ ಮಾಹಿತಿ ಇದ್ದರೆ, ಪಠ್ಯವಿಷಯಕ್ಕನುಗುಣವಾಗಿ ತರಗತಿ ಪ್ರಕ್ರಿಯೆಯಲ್ಲಿ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ.
ಪರಿಸರ ಅಧ್ಯಯನ ಹಾಗೂ ಭಾಷಾ ವಿಷಯಗಳಲ್ಲಿ ಸ್ಥಳೀಯ ಸಂಪನ್ಮೂಲಗಳನ್ನು ಹೇರಳವಾಗಿ ಬಳಸಿಕೊಳ್ಳಲು ಅವಕಾಶಗಳಿವೆ. ಎನ್.ಸಿ.ಎಪ್ – 2005 ಕೂಡಾ ತರಗತಿಯ ಪ್ರಕ್ರಿಯೆಯಲ್ಲಿ ಸ್ಥಳೀಯ ಸಂಪನ್ಮೂಲಗಳು ಬಳಸಿಕೊಳ್ಳುವ ಕುರಿತು ಪ್ರಸ್ತಾಪಿಸಿದೆ.  ಪ್ರತಿಯೊಂದು ಶಾಲೆಯು ತನ್ನ ವ್ಯಾಪ್ತಿಯಲ್ಲಿ ಇರುವ ಸಂಪನ್ಮೂಲಗಳ ಡೈರೆಕ್ಟರಿಯನ್ನು ಹೊಂದುವುದು ಅವಶ್ಯವೆನಿಸುತ್ತದೆ. ಈ ದಿಸೆಯಲ್ಲಿ ಶಿಕ್ಷಕರು ಕಾರ್ಯಪ್ರವೃತ್ತರಾಗುವುದು ತುಂಬಾ ಅಪೇಕ್ಷಣಿಯವಾಗಿದೆ.
ಶೈಕ್ಷಣಿಕ ಆಡಳಿತದ ಪರಿಣಾಮಕಾರಿ ವೀಕೆಂದ್ರಿಕರಣ ಹಿನ್ನಲೆಯಲ್ಲಿ ಜಾರಿ ಬಂದ ಸಮೂಹ ಸಂಪನ್ಮೂಲ ಕೇಂದ್ರಗಳು ಕೂಡಾ ತನ್ನ ವ್ಯಾಪ್ತಿಯ ಸಂಪನ್ಮೂಲಗಳ ಡೈರಕ್ಟರಿಯನ್ನು ಹೊಂದಿದ್ದೆ ಆದರೆ ಸಂಪನ್ಮೂಲಗಳ ಅಸಮಾನ ಹಂಚಿಕೆಯನ್ನು ಹೊಗಲಾಡಿಸುವ ಮೂಲಕ ಸಮರ್ಪಕವಾಗಿ ಬಳಸಿಕೊಳ್ಳಬಹುದು. ತಮ್ಮ ವ್ಯಾಪ್ತಿಯ ವಿವಿಧ ಶಾಲೆಗಳ ಮಧ್ಯ ಸಮನ್ವಯತೆಯನ್ನು ಸಾಧಿಸುವ ಮೂಲಕ ಸಮುದಾಯದ ಬಾಗವಹಿಸುವಿಕೆಯನ್ನು ಹೆಚ್ಚಿಸಬಹುದಾಗಿದೆ.


 

Comments