ಗುಬ್ಬಣ್ಣನ ಸ್ವಗತಗಳು
ಕವನ
ಗುಬ್ಬಣ್ಣನ ಸ್ವಗತಗಳು
ಆಫೀಸಿನ ಕೆಲಸ
ಆಫೀಸಿನ ಕೆಲಸ ಆಫೀಸಲೆ ಹೂತು
ಮನೆಯಲಾಡಿರೆ ಬರಿ ಮನೆ ಮಾತು
ಮನೆಮಡದಿಮಕ್ಕಳ ಸೌಖ್ಯ ಗುಬ್ಬಣ್ಣ!
ಬಾಸು ಮೆಚ್ಚಿದರೆ
ಆಫೀಸಲಿ ಬಾಸು ಮೆಚ್ಚಿದರೆ ಬಲು ಲೇಸು
ಮೆಚ್ಚದಿರೆ ಹೆಚ್ಚು ಕೆಲಸದ ಜತೆ ಬಿಡಿಗಾಸು
ಮೆಚ್ಚು ಕುಚ್ಚಾಗೆ ಬಡ್ತಿಗೂ ಸೊಗಸು ಗುಬ್ಬಣ್ಣ!
ಬಾಸುಗಳ ಸಹವಾಸ
ಬಾಸುಗಳ ಸಹವಾಸ ಮೋಸದ ತವರಂತೆ
ಮಾಡಿದ್ದೆಲ್ಲಾ ಮಾಡೂ ಹೆಸರೆಲ್ಲಾ ಅವರಂತೆ
ಬಿಸಿತುಪ್ಪ ನುಂಗದುಗುಳದ ಪಾಡು ಗುಬ್ಬಣ್ಣ!
(ಆಫೀಸು / ಬಾಸುಗಳ ಕ್ಷಮೆ ಕೋರಿ)
ನಾಗೇಶ ಮೈಸೂರು, ಸಿಂಗಾಪುರದಿಂದ