ಗುಬ್ಬಿ ಹಬ್ಬದ ನೆನಪಿನಲ್ಲಿ ಕವನಗಳು

ಗುಬ್ಬಿ ಹಬ್ಬದ ನೆನಪಿನಲ್ಲಿ ಕವನಗಳು

ಕವನ

ಪುಟ್ಟ ಗುಬ್ಬಚ್ಚಿ

ಪುಟ್ಟ ಗುಬ್ಬಿ ಪುಟಾಣಿ ಗುಬ್ಬಿ

ಎಲ್ಲಿ ಹೋದೆ ನೀನು?

ನೀರು ಕಾಳು ಎರಡನಿಟ್ಟು

ಕಾಯುತಿರುವೆ ನಾನು

 

ಮನೆಯ ಜಂತಿಯಲ್ಲಿ

ಗೂಡನೊಂದ ಇಟ್ಟಿಹೆ

ಚೆಂದದಿಂದ ಅದರಲಿದ್ದು

ಸಂಸಾರವ ನಡೆಸೆ

 

ಅಲ್ಲಿ ಇಲ್ಲಿ ಹಾರಿ ಹೋಗಿ

ಚೀಂವ್ ಚೀಂವ್ ಎನುವೆಯಾ

ಕಾಳುಕಡ್ಡಿ ಕಚ್ಚಿ ತಂದು

ಗೂಡಿನಲ್ಲಿ ಇಡುವೆಯಾ

 

ಮನೆಯ ಸುತ್ತ ಮುತ್ತ ಇರುವ

ಬಳಗವೆಲ್ಲ ಕರೆದೆಯಾ

ನಮ್ಮ ಮನೆಯ ಪುಟ್ಟಿ ಜೊತೆಗೆ

ನೀನು ಇಂದು ಆಡೆಯಾ

 

ನಿನ್ನ ಕಣ್ಣ ನೋಟ ನೋಡೆ

ನನಗೆ ತುಂಬ ಕಳಕಳಿ

ನನ್ನ ಬಳಿಗೆ ಹಾರಿ ಬಾ

ಸುತ್ತಮುತ್ತ ಸುಳಿಸುಳಿ

***

ಗಝಲ್

ಚೀಂವ್ ಚೀಂವ್ ಗುಬ್ಬಿಮರಿಗೆ ನೀರಿಡು ಮನುಜ

ಸುತ್ತ ಮುತ್ತ ಹಾರುವ ಪಾಪಚ್ಚಿಗೆ ಕಾಳಿಡು ಮನುಜ

 

ಜೀವ ಉಳಿಸಿಕೊಳ್ಳಲು ಹೆಣಗಾಡುವ ಪರಿಸ್ಥಿತಿ ತಂದೊಡ್ಡಿದೆಯಲ್ಲ

ಭಾವಕೆ ನೆಲೆಬೆಲೆಯಿಲ್ಲದೆ ಕೊರಗಿ ಘೋಳಿಡು ಮನುಜ

 

ಪ್ರಕೃತಿ ನಾಶ ಸಂತಾನಕ್ಕೆ ಕೊಳ್ಳಿ ಇಟ್ಟಿತಲ್ಲ

ವಿಕೃತಿ ಮನಸಿನಲಿ ಉಸಿರು ಹಿಡಿದಿಡು ಮನುಜ

 

ತಂತ್ರಜ್ಞಾನದ ಹೆಸರಿನಲಿ ನಶಿಸುವುದ ನೋಡುತ್ತಿರುವೆ

ಮಂತ್ರಕ್ಕೆ ಮಾವಿನಕಾಯಿ ಉದುರದು ಅರಿತಿಡು ಮನುಜ

 

ರತುನಳ ಸುಂದರ ಕನಸು ನನಸಾಗುವುದೆಂತು

ಕತ್ತಿಯ ಅಲಗಿನ ಹರಿತ ತಿಳಿದಿಡು ಮನುಜ

-ರತ್ನಾ ಕೆ.ಭಟ್ ತಲಂಜೇರಿ

***

ಗುಬ್ಬಿ ಗುಬ್ಬಿ ಎಲ್ಲಿದ್ದೆ 

ಗುಬ್ಬಿ ಗುಬ್ಬಿ ಎಲ್ಲಿದ್ದೆ ?

ಗೂಡಿನ ಒಳವೆ ಕೂದಿತ್ತೆ

ಗೂಡಿನ ಒಳವೆ ಕೂದೊಂಡೆ

ಗೂಡಿನ ಕಾದೊಂಡು ಇತ್ತೆ !

 

ಗೂಡಿನ ಒಳವೆ ಮೊಟ್ಟೆಯಿದ್ದು

ಕಾವಿನ ಕೊಟ್ಟೊಂಡುಹೆಂಡತಿಯಿದ್ದು

ತಿಂಬಲೆ ಹುಳುವಿನ ತೆಕ್ಕೊಂಡು ಬೈಂದು

ಒಪ್ಪಕ್ಕ ಕೂಸು ತಿನ್ತಾ ಇದ್ದು

 

ಬದುಕಲೆ ಈಗ ಇಡ್ತಿಲ್ಲೆ

ಕರೆಂಟಿನ ಹೊಡೆತ ಆವುತ್ತಿಲ್ಲೆ

ಎಂಗಳ ಜೀವಕೆ ಬೆಲೆ ಇಲ್ಲೆ

ಎಂತರ ಮಾಡ್ವುದು ಗೊಂತಿಲ್ಲೆ

 

ಗುಬ್ಬಿಯ ಸಂತಾನ ಕಡಮೆ ಆಯ್ದು

ಉಳಿಸಲೆ ಬೇಕು ಹೇಳಿ ಆಯ್ದು

ಎಂತರ ಮಾಡ್ತವ ಜನಯಿಂದು

ಅವರ ಕೈಲೆ ಬದ್ಕಿಂದು

-ಹಾ ಮ ಸತೀಶ

(ವಿಶ್ವ ಗುಬ್ಬಚ್ಚಿ ದಿನಕ್ಕೆ ಅರ್ಪಣೆ )

 

ಚಿತ್ರ್