ಗುರುತಿಸಲಾರೆ....ಗುರುತಿಸಲಾರೆಯಾ.? ......ಗುರುತಿಸು !

ಗುರುತಿಸಲಾರೆ....ಗುರುತಿಸಲಾರೆಯಾ.? ......ಗುರುತಿಸು !

ಕವನ

  

 

   ಗುರುತಿಸಲಾರೆ ನೀ..

  

   ನಭದಿ ಹಾರುವ ಹಕ್ಕಿಗಳು....ಕ್ರಮಿಸಿದದೂರ.!

   ನೀರಿನಲ್ಲಿ ಸಲೀಸಾಗಿ  ಈಜುವ

   ಮೀನುಗಳ ಗುಂಪಿನ ಹೆಜ್ಜೆಮೂಡದ ಹಾರ !

   ವೃಕ್ಷದ ಮೈತುಂಬ ಅಂಟಿರುವ..

   ಎಲೆಗಳ  ಉಸಿರಾಟದ   ಸಾರ.!

   

   ಗುರುತಿಸಲಾರೆಯಾ ಗೆಳೆಯಾ ?

 

   ನಿನ್ನೊಳಗೆ ನಯವಾಗಿ ಜಾರಿ  ಬರುವ

   ವಿಚಾರಗಳ ಜಾಡು..!

   ನವಿರು ನವಿರಾಗಿ ಎದೆಯೊಳಗೆ ಬಂದು

   ಕುಳಿತುಕೊಳ್ಳುವ  ವಾತ್ಸಲ್ಯದ ಹಾಡು !

   ಎದೆಯ ತುಂಬ .... ಬಿಚ್ಚಿಡದೇ ಬಚ್ಚಿಟ್ಟುಕೊಂಡ

   ನವಿಲುಗರಿಯಂತಹ  ನಾಜೂಕು ಪ್ರೀತಿ !

 

  ಗುರುತಿಸು....ನೀ

 

  ನಿನ್ನೊಳಗೆ..ಅಡಗಿಕುಳಿತಿರುವ

  ನೂರಾರು ಅಶ್ವಬಲಗಳ ತಾಕತ್ತು !

  ನೀನು.ಈಗ..ಆಕಾಶವನ್ನೇ  ಅಲುಗಿಸಿ

  ನಕ್ಷತ್ರಗಳನ್ನು  ಉದುರಿಸಬಲ್ಲೆ !

 

   ಒಮ್ಮೆ...ಪ್ರಯತ್ನಿಸು.

 

 

Comments