ಗುರುವೇ ನಮಃ
ಕವನ
ಓ....ಎನ್ನ ಗುರುವೆ
ನಾ ನಿನಗೆ ಮಣಿವೆ
ನಿನ್ನ ಪಾದದ ಬಳಿಯೆ
ನಾ ಕುಳಿತು ಕಲಿವೆ ॥
ಬಾಂದಳದ ರವಿಯಂತೆ
ನೀ ಭುವಿಯ ಬೆಳಕು
ಮನದ ಕತ್ತಲೆ ಕಳೆವ
ಸುಜ್ಞಾನದ ಹೊಳಪು ॥
ಶ್ರೀಗಂಧ ಕೊರಡಂತೆ
ಬುದ್ಧಿಯನು ತೀಡಿ
ಸಿದ್ಧಗೊಳಿಸಿದೆ ಮನವ
ತಿಳುವಳಕೆ ನೀಡಿ |
ಹರಿ ಮುನಿಯೆ ಗುರು ಕಾಯ್ದ
ಎಂಬ ನುಡಿ ದಿಟವು
ಮೂರು ಮೂರ್ತಿಗಳಿರವು
ಗುಣದೊಳು ಸ್ಪುಟವು ॥
ಜಗವೆಲ್ಲ ಅರಿತಿಹುದು
ಕಾಯಕದ ಹಿರಿಮೆ
ಬಣ್ಣಿಸಲು ಅಸದಳವು
ಗುರು ನಿನ್ನ ಘರಿಮೆ ||
-ರಾಮಕೃಷ್ಣ ರಾವ್ ಎರ್ಮಾಳು.
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
