ಗುರು ಪೂರ್ಣಿಮೆಯ ಮಹತ್ವ

ಗುರು ಪೂರ್ಣಿಮೆಯ ಮಹತ್ವ

ವ್ಯಾಸ ಮಹರ್ಷಿಗಳನ್ನು ಸ್ಮರಿಸುವ ಈ ದಿನವನ್ನು ಗುರು ಪೂರ್ಣಿಮೆಯಾಗಿ ಆಚರಿಸಲಾಗುತ್ತಿದೆ. ವೇದಗಳ ಸಾರವನ್ನು ಜನ ಸಾಮಾನ್ಯರಿಗೆ ತಲುಪಿಸುವ ದೃಷ್ಟಿಯಿಂದ ನಾಲ್ಕು ಭಾಗಗಳಾಗಿ ವಿಂಗಡಿಸಿದ ವ್ಯಾಸ ಮಹರ್ಷಿಗಳನ್ನು ಸ್ಮರಿಸುವ ಈ ದಿನವನ್ನು ಗುರು ಪೂರ್ಣಿಮೆಯಾಗಿ ಆಚರಿಸಲಾಗುತ್ತಿದೆ. ಯಾವುದೇ ಸ್ವಾರ್ಥ ಬಯಸದೆ ಗುರುಪರಂಪರೆಯಲ್ಲಿ ಸಾಮಾನ್ಯ ವ್ಯಕ್ತಿಗಳು ಅಸಾಮಾನ್ಯರಾಗಿ ಪ್ರಕಾಶಿಸು ವಂತೆ ಮಾಡಿದ ಗುರುಗಳ ಪುಣ್ಯ ಸ್ಮರಣೆಯೇ ಗುರು ವ್ಯಾಸ ಪೂರ್ಣಿಮಾ.

ಶ್ರದ್ಧಾಭಕ್ತಿಯಿಂದ ಇಂತಹ ಗುರು ಪರಂಪರೆ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯಕರ್ತವ್ಯ. ಗುರು ನಮ್ಮ ಬಾಹ್ಯಕಣ್ಣಿಗೆ ನಿಲುಕದ ಯೋಗಿ. ತ್ಯಾಗ, ಸಹನೆ, ಪ್ರೀತಿ, ಕ್ಷಮಾಗುಣಗಳು ಗುರು ವಿಗೆ ದೈವತ್ವದ ಸ್ಥಾನ ಕಲ್ಪಿಸಿದೆ. ನಮ್ಮ ಸಮಾಜವು ಇಂದಿನವರೆಗೂ ಗುರು ಪರಂಪರೆ ಅಳವಡಿಸಿಕೊಂಡು ಬಂದಿದೆ.

ಗುರು ಪೂರ್ಣಿಮಾ ಒಂದು ಧರ್ಮವನ್ನು ಮೀರಿದ ಆಚರಣೆ ಎಂದು ಹೇಳಬಹುದು. ಆ ಆಚರಣೆ ಮಾನವೀಯ ಮೌಲ್ಯವನ್ನು ತುಂಬುವ ಕಾರ್ಯವನ್ನು ಮಾಡುತ್ತವೆ.

ಒಂದು ಶಿಕ್ಷಣ ನಿಜವಾದ ಅರ್ಥ ಪಡೆಯಬೇಕೆಂದರೆ ಗುರು ಶಿಷ್ಯರ ಸಂಬಂಧ ಉತ್ತಮವಾಗಿರಬೇಕು. ವಿದ್ಯಾರ್ಥಿ ಮಣ್ಣಿನಂತೆ, ಆ ಮಣ್ಣನ್ನು ಚೆನ್ನಾಗಿ ಕಲೆಸಿ ಉತ್ತಮ ಮೂರ್ತಿ ಮಾಡುವ ಕಾರ್ಯ ಗುರುವಿನದ್ದಾಗಿರುತ್ತದೆ. ಈ ಕೆಲಸವನ್ನು ಗುರು ಯಾವುದೇ ಸ್ವಾರ್ಥ ಬಯಸಿ ಮಾಡಬಾರದು.

ಒಂದು ಉತ್ತಮ ಸಮಾಜವನ್ನು ಕಟ್ಟುವಲ್ಲಿ ಗುರುವಿನ ಪಾತ್ರ ಮುಖ್ಯವಾದದ್ದು. ಭ್ರಷ್ಟಾಚಾರ, ಬಡತನ ನಿರ್ಮೂಲನೆ, ಸಾಮಾಜಿಕ ಪಿಡುಗುಗಳನ್ನು ದೂರ ಮಾಡುವಲ್ಲಿ ಈ ಗುರುಗಳ ಪಾತ್ರ 

ಮಹತ್ವವಾದದ್ದು...!

ಚಿತ್ರ ಕೃಪೆ: ಇಂಟರ್ನೆಟ್ ತಾಣ