ಗುರು-ಶಿಷ್ಯ ಪರಂಪರೆ - ಪ್ರೊ. ಎಚ್. ಆರ್. ರಾಮಕೃಷ್ಣರಾವ್, ತಮ್ಮ ಪೂಜ್ಯ ಗುರು, ಪ್ರೊ. ಜಿ. ಪಿ. ರಾಜರತ್ನಂ ರವರನ್ನು ನೆನೆಸಿಕೊಳ್ಳುತ್ತಾರೆ !

ಗುರು-ಶಿಷ್ಯ ಪರಂಪರೆ - ಪ್ರೊ. ಎಚ್. ಆರ್. ರಾಮಕೃಷ್ಣರಾವ್, ತಮ್ಮ ಪೂಜ್ಯ ಗುರು, ಪ್ರೊ. ಜಿ. ಪಿ. ರಾಜರತ್ನಂ ರವರನ್ನು ನೆನೆಸಿಕೊಳ್ಳುತ್ತಾರೆ !

ಬರಹ

ಪ್ರೊ. ಎಚ್. ಆರ್. ರಾಮಕೃಷ್ಣರಾವ್, ಒಬ್ಬ ಸಮರ್ಥ, ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ದುಡಿದು ನಿವೃತ್ತರಾದವರು. ಅವರು ಸೆಂಟ್ರೆಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ, ಕರ್ನಾಟಕಸಂಘದ ಕಾರ್ಯದರ್ಶಿಯಾಗಿ, ಪ್ರೊ. ಜಿ. ಪಿ. ರಾಜರತ್ನಂ, ಮತ್ತು ಪ್ರೊ. ವಿ. ಸೀ. ರವರ ಜೊತೆ ಅತ್ಯಂತ ನಿಕಟವಾಗಿ ಕೆಲಸಮಾಡಿದ್ದರು. ಇವರಿಬ್ಬರ ಕನ್ನಡಭಾಷೆಯ ಪ್ರಾವೀಣ್ಯತೆ, ಅದರಮೇಲಿನ ದಟ್ಟಒಲವು, ಹಾಗೂ ಕನ್ನಡ ಭಾಷೆಯಲ್ಲಿನ ಸ್ಪಸ್ಟ ಉಚ್ಚಾರಣೆ, ಮತ್ತು ಮಾತಿನ ವೈಖರಿಗಳಂದ ಪ್ರಭಾವಿತರಾಗಿ, ತಮಗೆ ಗೊತ್ತಿಲ್ಲದಂತೆ, ಆ ಎಲ್ಲ ವೈಚಾರಿಕ ಸದ್ಗುಣಗಳನ್ನೂ ತಮ್ಮ ಜೀವನದುದ್ದಕ್ಕೂ ಮೈಗೂಡಿಸಿಕೊಂಡಿದ್ದಾರೆ. ಪರಂಪರಾಗತ ಸತ್ಪುರುಷರ ಮನೆತನದಲ್ಲಿ ಜನಿಸಿದ್ದ ಇವರಿಗೆ, ಸ್ವಾಭಾವಿಕವಾಗಿ, ಇಂತಹ ಮಹಾಉಪಾಧ್ಯಾಯರುಗಳು, ಹಾಗೂ ದೇಶಭಕ್ತರೂ ಅವರ ಜೀವನದಲ್ಲಿ ವಿಜೃಂಭಿಸಿದ್ದು ಆಚ್ಚರಿಯೇನಲ್ಲ !

ಸ್ವತಃ ಕನ್ನಡಭಾಷೆಯಲ್ಲಿ ಅನೇಕ ಪಠ್ಯಪುಸ್ತಕಗಳನ್ನು ಬರೆದು ಕನಿಷ್ಟಬೆಲೆಯಲ್ಲಿ ವಿದ್ಯಾರ್ಥಿಗಳಿಗೆ ಒದಗಿಸಿದ ಹೆಗ್ಗಳಿಕೆ ಇವರದು. ಮಾಜಿ. ಪ್ರೆಸಿಡೆಂಟ್, ಎ. ಪಿ. ಜೆ. ಅಬ್ದುಲ್ ಕಲಾಂರವರ ಬಗ್ಗೆ ಇವರಿಗೆ ಬಹಳ ಗೌರವ. ’ಕಲಾಂಮೇಸ್ಟ್ರು”, ಇವರ ಬತ್ತಳಿಕೆಯಿಂದ ಮೂಡಿಬಂದ ಅತ್ಯಂತ ಜನಪ್ರಿಯ ಪುಸ್ತಕಗಳಲ್ಲೊಂದು. ವಿಜ್ಞಾನವನ್ನು ಜನಪ್ರಿಯಗೊಳಿಸಲು ದಶಕಗಳಿಂದ ದುಡಿಯುತ್ತಿದ್ದಾರೆ. ದಿವಂಗತ, ಪ್ರೊ. ಜಿ. ಟಿ. ನಾರಾಯಣರಾಯರನ್ನು ಕಂಡರೆ ಇವರಿಗೆ ಎಲ್ಲಿಲ್ಲದ ಆದರ !

ಪ್ರೊ. ಜಿ. ಪಿ. ರಾಜರತ್ನಂ ರವರ ನೂರನೆಯ ಹುಟ್ಟುಹಬ್ಬದ ಪ್ರಯುಕ್ತ, ತಮ್ಮ ಅನಿಸಿಕೆಗಳನ್ನೂ ಹಾಗೂ ಆ ದಿನಗಳ ಸುಮಧುರ ಕ್ಷಣಗಳನ್ನು ನಮ್ಮೊಡನೆ ಹಂಚಿಕೊಂಡಿದ್ದಾರೆ. ಈಗ ಅವರು, ಅಮೆರಿಕದಲ್ಲಿ ಸಂಚರಿಸುತ್ತಿದ್ದಾರೆ. ನಾನು ಅವರನ್ನು ಇ-ಮೇಲ್ ಮುಖಾಂತರ ಭೆಟ್ಟಿಯಾಗಿ ಇವೆಲ್ಲದರ ಬಗ್ಗೆ ತಮ್ಮ ಅನಿಸಿಕೆಗಳನ್ನು ಹೇಳಿರೆಂದು ಬಿನ್ನವಿಸಿಕೊಂಡಾಗ, ಒಪ್ಪಿ ಸಹಕರಿಸಿದ್ದಾರೆ. ಅವರಿಗೆ ಸಂಪದೀಯರೆಲ್ಲರ ಪರವಾಗಿ ಅಭಿನಂದನೆಗಳು.

ವಿಶೇಷವೆಂದರೆ, ರಾಮಕೃಷ್ಭರಾಯರ ಮುತ್ತಿನಂತಹ ಕನ್ನಡ ಅಕ್ಷರಗಳನ್ನು ನೋಡಿ ಕೆಲವರು ಈರ್ಷೆಪಟ್ಟುಕೊಂಡದ್ದೂ ಉಂಟು. ಸ್ಪುಟವಾದ, ಸುಂದರ ಲಿಪಿ. ಎಲ್ಲೂ ಅಪ್ಪಿತಪ್ಪಿ ತಪ್ಪುಗಳು ಕಾಣಿಸುವುದಿಲ್ಲ. ಸುಂದರ ಅಕ್ಷರಗಳಿಗೆ ಅತಿಹೆಸರಾದವರು ಇವರು. 'ಇವೆಲ್ಲಾ ತಮ್ಮ ತಂದೆಯವರಿಂದ ಪಡೆದ ಬಳುವಳಿ,' ಎನ್ನುತ್ತಾರೆ, ಅವರು. ತಾಯಿಯವರಿಂದ ಬಂದದ್ದು, ಅಪಾರ ಜ್ಞಾಪಕ ಶಕ್ತಿ ! ಅವರ ಮಾತುಗಳಲ್ಲಿ ಧನ್ಯತಾಭಾವ ಎದ್ದು ಕಾಣಿಸುತ್ತದೆ !

* ಚಿತ್ರದಲ್ಲಿ, ಪ್ರೊ. ಜಿ. ಪಿ. ರಾಜರತ್ನಂ ರವರ ಬಲಭಾಗದಲ್ಲಿ ವಿರಮಿಸಿರುವವರೇ, ಪ್ರೊ. ಎಚ್. ಆರ್. ರಾಮಕೃಷ್ಣರಾವ್ ರವರು.

ಪುಟ-೧ :

http://mail.google.com/mail/?ui=2&ik=5652908393&view=att&th=11e23392afa9fa5c&attid=0.1&disp=inline&realattid=file0&zw

ಪುಟ- ೨ :

http://mail.google.com/mail/?ui=2&ik=5652908393&view=att&th=11e2339af325ebe1&attid=0.1&disp=inline&realattid=file0&zw

ಪುಟ -೩ :

http://mail.google.com/mail/?ui=2&ik=5652908393&view=att&th=11e233a4ab312d6a&attid=0.1&disp=inline&realattid=file0&zw