"ಗುಲಾಬಿ ಟಾಕೀಸ್" ನೋಡಿದ್ರಾ?
ಬರಹ
ಕಳೆದ ವಾರ ಬಿಡುಗಡೆಯಾದ ವೈದೇಹಿಯವರ ಸಣ್ಣ ಕಥೆಯಾಧಾರಿತ ಗುಲಾಬಿ ಟಾಕೀಸ್ ಚಿತ್ರ, ಹತ್ತನೇ Osian cinefan ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿತಲ್ಲದೇ, ಹಿರಿಯ ನಟಿ ಉಮಾಶ್ರೀಯವರಿಗೆ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಂದು ಕೊಟ್ಟಿದೆ.
ಕನ್ನಡ ಚಿತ್ರರಂಗಕ್ಕೆ ಗಿರೀಶ್ ಕಾಸರವಳ್ಳಿಯವರ ಮತ್ತೊಂದು ಅತ್ಯಮೂಲ್ಯ ಕಾಣಿಕೆ "ಗುಲಾಬಿ ಟಾಕೀಸ್".
ಚಿತ್ರ ನೋಡಿದ್ರಾ?
ಹೇಗನ್ನಿಸ್ತು?
rediff.com ನಲ್ಲಿ ಇದರ ವಿಮರ್ಶೆ ಯನ್ನ ನೋಡಿದೆ.. ೫ ಸ್ಟಾರ್ ರೇಟಿಂಗ್..
http://www.rediff.com/movies/2008/sep/08ssg.htm
ಮರೆಯದೇ ನೋಡಿ....
ನಮ್ಮ ದುರದೃಷ್ಟ ಅಂದ್ರೆ ಇಂತಹ ಅತ್ಯುತ್ತಮ ಚಿತ್ರಕ್ಕೆ ಎಲ್ಲಾ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಅವಕಾಶ ಸಿಗದಿರುವುದು.. ಇದ್ರಿಂದ ಕಲಾತ್ಮಕ ಚಿತ್ರಗಳಲ್ಲಿ ಹೆಚ್ಚು ಆಸಕ್ತಿಯುವಳ್ಳರಿಗೆ ನೋಡಲು ಪ್ರಯಾಸ ಪಡಬೇಕು.
ಇಂತಿ
ರಾಘವೇಂದ್ರ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: "ಗುಲಾಬಿ ಟಾಕೀಸ್" ನೋಡಿದ್ರಾ?