ಗುಲಾಬಿ ಟಾಕೀಸ್!!!

ಗುಲಾಬಿ ಟಾಕೀಸ್!!!

ಬರಹ

ಹಲವಾರು ದಿನಗಳ ನಂತರ ಒಂದು ಉತ್ತಮ ಚಿತ್ರ ನೋಡಿದ ಖುಷಿ ಇವತ್ತು. ನಾವು ಚಿಕ್ಕಂದಿನಲ್ಲಿದ್ದಾಗ ನೋಡಿದ, ಮಾಡಿದ, ಕೇಳಿದ್ದನ್ನು ತೆರೆಯ ಮೇಲೆ ನೋಡಿ ಮನಸ್ಸು ತುಂಬಿ ಬಂತು. ನಮ್ಮ ಬಾಲ್ಯದ ನೆನಪನ್ನು ಮೆಲಕು ಹಾಕುವಂತೆ ಮಾಡಿದೆ ಗಿರೀಶ್ ಕಾಸರವಳ್ಳಿಯವರಿಗೆ ಅನಂತ ಧನ್ಯವಾದಗಳು. ಮದ್ಯಂತರದವರೆಗೂ ತಿಳಿಹಾಸ್ಯ ಬೆರೆತ ಸಂಭಾಷಣೆ ಮನಸ್ಸಿಗೆ ಮುದ ಕೊಟ್ಟಿತು. ದ್ವಿತೀಯಾರ್ಧ ಸ್ವಲ್ಪ ಗಂಬೀರವಾಗಿದ್ದರೂ ಉತ್ತಮವಾಗಿ ಮೂಡಿಬಂದಿದೆ.
ಇದು ವೈದೇಹಿಯವರು ಬರೆದ ಸಣ್ಣಕತೆಯನ್ನು ಆದರಿಸಿದ್ದು. ೧೯೯೦ ರ ದಶಕದಲ್ಲಿ ಕರಾವಳಿಯಲ್ಲಿ ನಡೆದಿದೆ ಎನ್ನಲಾದ communal voilance ಮತ್ತು fishering lisenceಅನ್ನು ಬೇಕಾಬಿಟ್ಟಿ ಹಂಚಲಾಯಿತು ಎಂಬ ಘಟನೆ ಬಗ್ಗೆ.
ಈ ಕಥಾ ಹಂದರವನ್ನು ಕರಾವಳಿ ಭಾಷೆಯಲ್ಲಿ , ಅದೂ ತಿಳಿಹಾಸ್ಯದ ಸಂಭಾಷಣೆ ಮೂಲಕ ನಿರೂಪಿಸಿದ ಶೈಲಿ ಮಾತ್ರ ಅದ್ಭುತ. ಉಮಾಶ್ರಿಯವರ ಅಭಿನಯದ ಬಗ್ಗೆ ಎರಡು ಮಾತಿಲ್ಲ.ಕಥಾನಾಯಕಿಯಾಗಿ ತುಂಬಾ ಮನೋಜ್ಞವಾಗಿ ಅಭಿನಯಿಸಿ ಕಥೆಗೆ ಜೀವ ತುಂಬಿದ್ದಾರೆ. ಹಾಗೆಯೇ ಎಂ.ಡಿ ಪಲ್ಲವಿ ಕೂಡ ನೇತ್ರು ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಚಿತ್ರಕಥೆ, ಸಂಭಾಷಣೆ, ಛಾಯಗ್ರಹಣ ಉತ್ತಮವಾಗಿದೆ. ಗಿರೀಶ್ ಕಾಸರವಳ್ಳಿಯವರು ಮತ್ತೊಮ್ಮೆ ತಮ್ಮ ಅದ್ಭುತ ಪ್ರತಿಭೆಯನ್ನು ಇಲ್ಲಿ ತೋರಿಸಿದ್ದಾರೆ.
ಇದು 10th Osian's Cinefan festivalನಲ್ಲಿ ಉತ್ತಮ ಭಾರತೀಯ ಚಿತ್ರ ಎಂದು ಗುರುತಿಸಲ್ಪಟ್ಟು ಉಮಾಶ್ರೀಯವರಿಗೆ "ಉತ್ತಮ ನಟಿ" ಪ್ರಶಸ್ತಿಯನ್ನು ತಂದುಕೊಟ್ಟಿದೆ.
ನಮ್ಮ ಚಿಕ್ಕಂದಿನ ನೆನಪನ್ನು ತೆರೆಯ ಮೇಲೆ ತೋರಿಸಿಕೊಟ್ಟಿದ್ದಕ್ಕೆ ಮತ್ತೊಮ್ಮೆ hats off!!!

-ಸುಧೀಂದ್ರ