ಗುಲ್ಜಾರ್ ಕಾವ್ಯಕಲರವ!
1. ಬ್ರಹ್ಮಾಂಡ
ಕೆಲವು ಶತಕೋಟಿ ವರುಷಗಳ ತದನಂತರ,
ಗಗನಮಣಿಯೂ ಆರಿದು ಹೋದಾಗ,
ಹಾಗು ಭಸ್ಮವೂ ಅದರ ಮೇಲ್ಮೈಯಲ್ಲಿ ಬೀಸಿದಾಗ;
ಚಂದ್ರನು ಇನ್ನು ಮುಂದೆ ಕ್ಷಯಿಸುವುದಿಲ್ಲವೆಂದಾಗ
ಹಾಗು ಜಮೀನಿನ ಸಸ್ಯಾಸಂಪತ್ತು ಉಗಮಿಸುವುದಿಲ್ಲವೆಂದಾಗ;
ಶೀತಲ, ಸುಟ್ಟು ಹೊದ ಕಲ್ಲಿದ್ದಲಿನಂತಿರುವ
ಈ ಪೃಥ್ವಿಯು, ತನ್ನ ಕಕ್ಷೆಯನು ಮರೆತು, ಪರಿಭ್ರಮಿಸುತ್ತಾ
ನಸು ಕಂದುವರ್ಣದಲ್ಲಿ ಮಂದಗೋಳ್ಳುತ್ತ ಸಾವನ್ನಪ್ಪುವುದು!
ಭಾವಿಸುತ್ತೇನೆ ನಾನು,
ಕವಿತೆಯೊಂದು ರಚಿಸಲ್ಪಟ್ಟ ಹಾಳೆಯು
ಗಾಳಿಯಲ್ಲಿ ತೆಳುತ್ತ
ಅಕಸ್ಮಾತ್ತಾಗಿ ಸೂರ್ಯನ ಮೇಲ್ಮೈ ಮುತ್ತಿದೊಡೆ,
ಸೂರ್ಯನು ಪುನಃ ಉರಿಯಲಾರಂಭಗೊಳ್ಳುವುದು!
***
2. ಪರಮಾತ್ಮ
ನೋವಾಗಿರಬೇಕು ನಿಮಗೆ, ಓ ಪರಮಾತ್ಮನೇ
ನಿನ್ನಲ್ಲಿ ಪ್ರಾರ್ಥಿಸುತ್ತಿದ್ದಾಗ ಆಕಳಿಸಿದೆ ನಾನು!
ಪ್ರಾರ್ಥನೆಯಲ್ಲಿ ಹುದುಗಿರುವ ಈ ಆಲೋಚನೆಯಿಂದ ಬೆಸುತ್ತಿದ್ದೇನೆ ನಾನು!
ನೋಡುವ ಮತ್ತು ಕೇಳುವ ಸಾಧ್ಯವಾದಾಗಿನಿಂದ
ನನಗೆ ಹೇಳಿಕೊಟ್ಟಿದ್ದು ನೆನಪಿದೆ,
ಅದೇ, ಹಗಲಿರುಳು ಅವನ ಕೃಪೆಯಿಂದಲೇ
ಹಾಗು ಅವನ ಕೈಯಲ್ಲಿ ಎಲ್ಲವೂ ಇದೆ-
ಅವನಲ್ಲಿ ಬೇಡಿಕೊಂಡಿರಿ!
ಈ ಪರಿಕಲ್ಪನೆಯು ಆಶ್ಚರ್ಯಕರವಾಗಿದೆ!
ಈ ವ್ಯರ್ಥ, ಏಕಪಕ್ಷಿಯ ಜಿಜ್ಞಾಸೆಯು
ಅದೂ, ಕಾಣದ-ಕಲ್ಪಿಸಿಕೊಂಡ ಮೊಗದವನೊಂದಿಗೆ
ಅವನ ಇರುವಿಕೆಯ ಋಜುವಾತು ಅಂತೆ!
***
3. ಉಡುಪುಗಳು
ನನ್ನ ಉಡುಪುಗಳು ಮೇಲೆ ತೂಗುಹಾಕಲಾಗಿದೆ ನಿನ್ನ ವರ್ಣರಂಜಿತ ಉಡುಪುಗಳು,
ನಿವಾಸದಲ್ಲಿ ನಾ ನಿತ್ಯ ತೊಳೆಯುತ್ತೇನೆ ಅವುಗಳನ್ನು, ಮತ್ತೇ ಒಣಗಿಸುತ್ತೇನೆ ಅವುಗಳನ್ನು,
ಸತಃ ಕೈಗಳಿಂದ ಅವುಗಳನ್ನು ಇಸತರಿ ಮಾಡುತ್ತೇನೆ. ಆದರೆ,
ಸುಕ್ಕಾಗಿರುವುದನ್ನು ಇಸತರಿ ಮಾಡುವುದರಿಂದ ಹೊರಹಾಕಲು ಸಾಧ್ಯವಿಲ್ಲ,
ಮತ್ತು ತೊಳೆಯುವುದರಿಂದ ಭೂತದ ಪೀಡನೆಗಳು ಮಾಯವಾಗದು!
ಬದುಕು ಎಷ್ಟು ಸರಳಗೊಳ್ಳುತ್ತಿತ್ತು
ವೇಳೆ, ಈ ಸಂಬಂಧಗಳು ಉಡುಪುಗಳಂತೆ ಇರುತ್ತಿದ್ದರೆ-
ಮತ್ತು ಬದಲಾಯಿಸುತ್ತೇವೆ ಕುರ್ತಾಗಳಂತೆ!
***
4. ಭಸ್ಮ
ಕಂಬಿಗಳ ಹಿಂಬದಿರುವ ಬಂಡಾಯಗಾರನ ಕಣ್ಣುಗಳಲ್ಲೂ
ಭಸ್ಮ ನ್ನೆಲೆಗೊಳಿಸಲು ಪ್ರಾರಂಭಗೊಂಡಿದೆ.
ಸುಡುವ ಕಲ್ಲಿದ್ದಲನ್ನೂ ದೀರ್ಘಕಾಲದವರೆಗೆ ಪಂಖಿಸದಿದ್ದರೆ,
ಉರಿಯುವ ಕೆಂಡದ ಕಣ್ಣುಗಳಲ್ಲೂ
ಪೊರೆಯ ಬಿಳುಪು ಬೀಳುವುದು!
***
5. ತಂತಿ
ಹಿಂಬದಿ, ಅರುಣಾಸ್ತದ ಅರಿಶಿನ ವರ್ಣದ ಗಗನದ ಹೊದಿಕೆಯು
ಮುಂಬದಿ, ಎರಡು ಉದ್ದ ವಿದ್ಯುತ್-ತಂತಿಗಳು ಎಳೆಯಲಾಗಿದೆ,
ಅವುಗಳ, ಮೇಲೆ ಶ್ಯಾಮಲ ವರ್ಣದ ಖಗಗಳು-
ಧ್ಯಾನದಲ್ಲಿ ಮಗ್ನರಾಗಿ ಕುಳಿತುಕೊಳ್ಳುವರು
ಯಾರಾದರೂ ಹಿಂದಿ ಅಕ್ಷರಗಳನ್ನು ತಂದು ಇಟ್ಟುಕೊಂಡಂತೆ!
ಪ್ರತ್ಯಾಯನ ಹೊತ್ತು ಬೀಳುತ್ತಿದ್ದಂತೆ,
ಪ್ರತಿದಿನ, ರಾಜಕವಿಯೊಬ್ಬರು ಇದೇ ತಂತಿಗಳ ಮೇಲೆ,
ಒಂದೆರಡು, ದೋಹಾಗಳನ್ನು ಬರೆದು, ಹೋಗುವನು!
***
ಉರ್ದು ಮೂಲ : ಗುಲ್ಜಾರ್
ಕನ್ನಡಿಕರಣ : ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು.
ಗ್ರಂಥಋಣ:
1. Gulzar. Selected Poems.
Haryana: Penguin Random House Indi, 2008