ಗುಲ್ಜಾರ್ ಕಾವ್ಯಕಲರವ! (ಭಾಗ 3)
ಇನ್ನಷ್ಟು ಗುಲ್ಜಾರ್ ಕಾವ್ಯಗಳನ್ನು ಕನ್ನಡೀಕರಣ ಮಾಡಿರುವೆ. ನಿಮಗದು ಇಷ್ಟಾವಾಗುತ್ತದೆ ಎನ್ನುವ ಭಾವ ನನ್ನದು...
1. ಕವಿತೆ!
ಕವಿತೆಯೊಂದು ಕೊಂಡಿದೆ ನನ್ನ ಮನಸ್ಸಿನಲ್ಲಿ;
ಪಂಕ್ತಿಗಳು ಅಂಟಿಕೊಂಡಿವೆ ತುಟಿಗಳಲ್ಲಿ ;
ಪದಗಳು ಹಾಳೆಗಳಲ್ಲಿ ಕೂರಲು ನಿರಾಕರಿಸುತ್ತಿವೆ;
ಚಿಟ್ಟೆಗಳಂತೆ ಅವು ಅಲ್ಲಲ್ಲಿ ಹಾರಾಡುತ್ತಿವೆ;
ಪ್ರತೀಕ್ಷಿಸುತ್ತಿದೆ ಬಹಳ ಸಮಯದಿಂದ, ಅಣುಗು!
ಖಾಲಿ ಹಾಳೆಯ ಮೇಲೆ ಬರೆದು ಹೆಸರು ನೀನು!
ನಿನ್ನ ಹೆಸರೇ ಬಹಳವಾಗಿದೆ!
ಇದಕ್ಕಿಂತ ಉನ್ನತವಾದ ಕಟೋರೆಯರಿಮೆ ಇದೆಯೇ??
***
2. ಚಿತ್ರಕಲೆ
ಕ್ಷಿತಿಜದಿಂದ ಅದಿರಾಡುತ್ತ ಗಗನಮಣಿಯು ಉಗಮಿಸಿತು.
ಯಾರೊಬ್ಬರಿಂದ ತಳ್ಳಲ್ಪಟ್ಟ ಕೊಚ್ಚಿನಲ್ಲಿ ಸಿಕ್ಕಿಬಿದ್ದ ಗಾಲಿಯಂತೆ.
ಅದರ ತುದಿಗಳು ನೆರಳಿನ ದಿಣ್ಣೆಗಳಿಂದ ಹೊದಿಸಲಾಗಿತ್ತು;
ಪ್ರತಿದಿನದಂತೆ, ಅದು ದುಂಡನಾಗಿರಲಿಲ್ಲ.
ತೇಜಸ್ಸು ಅದರ ಶರೀರದ ಮೇಲೆ ಚಿಂದಿಚಿಂದಿಯಾಗಿತ್ತು
ಮತ್ತು ಅದರ ಮೊರೆ ಕೆರೆಯುತ್ತಿತ್ತು!!
***
3. ನೆನಪುಗಳು
ನೆನಪುಗಳು ಹೇಗೆ ನಂದಿಸಲ್ಪಟ್ಟವು ಎಂದು ನಾ ಹೇಗೆ ವಿವರಿಸಲಿ?
ನೆರಳೊಂದು ಮುಳುಗಿತು ಜಲದೊಳಗೆ ಮತ್ತು ಕೊನೆಯುಸಿರೆಳೆಯಿತು.
ಬಹಳಾಳವಾಗಿ ಹರಿಯುತ್ತೆ ಈ ನಿಂತ ನೀರುಗಳು!!
***
ಆಕರ ಗ್ರಂಥ :
Gulzar. *'Selected Poems'.*
Haryana: Penguin Random House India, 2008.
ISBN : 9780 14341 8214
ಉರ್ದು ಮೂಲ : ಗುಲ್ಝಾರ್
ಕನ್ನಡಿಕರಣ : ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು