ಗೂಗಲ್ ಕ್ರೋಮ್ ಎಷ್ಟು ಸುರಕ್ಷಿತ?

ಗೂಗಲ್ ಕ್ರೋಮ್ ಎಷ್ಟು ಸುರಕ್ಷಿತ?

ಬರಹ

ಗೂಗಲ್ ಕ್ರೋಮ್ ಎಷ್ಟು ಸುರಕ್ಷಿತ?

ಕ್ರೋಮ್ ಬಿಡುಗಡೆಯಾಗಿ ಇನ್ನೂ ೨೪ ಗಂಟೆಯಾಗಿರಲಿಲ್ಲ. ನನ್ನ ಗೆಳೆಯರ ಗುಂಪೊಂದು ನನಗೆ ಸುದ್ದಿಯೊಂದನ್ನ ತಲುಪಿಸಿತು. ಅದನ್ನ ಬರೀಲಿಕ್ಕಾಗಿದ್ದು ಈಗಲೆ.  

ಇನ್ನೂ ಪರೀಕ್ಷಾರ್ಥ ಲಭ್ಯವಿರುವ ಗೂಗಲ್ ಕ್ರೋಮ್ ಮೇಲೆ ಆಗಲೇ ಸೆಕ್ಯೂರಿಟಿ ಎಕ್ಸ್ಪರ್ಟ್ಗಳ ಕಣ್ಣು. ಇವರ ಮೂಲ ಉದ್ದೇಶ ಹೊಸದೊಂದು ತಂತ್ರಜ್ಞಾನ ಚೆನ್ನಿದೆಯೆ? ಸುರಕ್ಷಿತವೇ ? ಎಷ್ಟು ಸುರಕ್ಷಿತ ಅನ್ನೋದನ್ನ ಅರಹುವುದು. ಅವಿವ್ ರಾಫ್ ಎಂಬ ಸೆಕ್ಯೂರಿಟಿ ತಂತ್ರಜ್ಞ ಕ್ರೋಮ್ ಸಫಾರೊ ಕಾರ್ಪೆಟ್ಬಾಂಬಿಂಗ್ ದೋಷವನ್ನ ಹೊಂದಿದೆ. ಆಪಲ್ ಸಫಾರಿ ವೆಬ್ ಕಿಟ್ ಮತ್ತು ಜಾವಾ ಸೆಕ್ಯೂರಿಟಿಯ ದೋಷ ಎರಡೂ ಇದರಲ್ಲಿ ಸೇರಿದೆ ಅಂತಾರೆ ಸೆಕ್ಯೂರಿಟಿ ಬ್ಲಾಗರ್ ರೆಯಾನ್ ನರೈನೆ.

ಈ ಒಂದು ದೋಷದಿಂದಾಗಿ ವಿಂಡೋಸ್ ಉಪಯೋಗಿಸುತ್ತಿರುವ ಬಳಕೆದಾರನಿಗೆ ಮೋಸಗೈದು, ವೈರಸ್ ಇತ್ಯಾದಿ ಫೈಲ್ಗಳನ್ನ ಡೌನ್ ಲೋಡ್ ಮಾಡಿಕೊಳ್ಳುವಂತೆ ಮಾಡಬಹುದು. ರಾಫ್ ಇದಕ್ಕೆ  ಸಾಕ್ಷಿಯನ್ನೂ ನಿಮಗೆ ತನ್ನ ವೆಬ್ ಸೈಟಿನಲ್ಲಿ ಕೊಟ್ಟಿದ್ದಾನೆ.  

ಆಪಲ್  ಸಫಾರಿ ಆವೃತ್ತಿ ೩.೧.೨ ರಲ್ಲಿ ಈ ಒಂದು ದೋಷವನ್ನ ಸರಿಪಡಿಸಿದರೂ , ಕ್ರೋಮ್ ನಲ್ಲಿ ಉಪಯೋಗಿಸಿರುವ ಕೋಡ್ ಹಳೆಯದಾಗಿದ್ದು ಮುಂದೆ ಇನ್ನೂ ಹೆಚ್ಚಿನ ದೋಷಗಳು ಹೊರಬಿದ್ದರೆ ಆಶ್ಚರ್ಯವಿಲ್ಲ ಅಂತಾರೆ ಸೆಕ್ಯೂರಿಟಿ ವೀಕ್ಷಕರು. ಇದೆಲ್ಲಾ ಎನಿದ್ದರೂ ಅನೇಕರು ಕ್ರೋಮ್ ನ ಸ್ಪೀಡ್ಗೆ ವಿಶ್ವದಾಧ್ಯಂತ ಮರುಳಾಗಿದ್ದಾರೆ.