ಗೂಗಲ್ ಕ್ರೋಮ್ ನತ್ತ ಮೊದಲ ನೋಟ

ಗೂಗಲ್ ಕ್ರೋಮ್ ನತ್ತ ಮೊದಲ ನೋಟ

ಬರಹ

 ಗೂಗಲ್ ತನ್ನ ಬ್ರೌಸರ್ ಬಿಡುಗಡೆ ಮಾಡುತ್ತಿದ್ದ ಹಾಗೆ, ಅದನ್ನ ಡೌನ್ ಲೋಡ್ ಮಾಡಿ ನೋಡಿದ್ದಾಯಿತು. ಬೇಸರದ ಸಂಗತಿಯೆಂದರೆ, ಇದು ಮ್ಯಾಕ್ ಮತ್ತು ಲಿನಕ್ಸ್ ಗೆ ಇನ್ನೂ ಬಿಡುಗಡೆಯಾಗಿಲ್ಲ. ಒಂದು ಸಮಾಧಾನದ ಸಂಗತಿಯೆಂದರೆ, ಈ ತಂತ್ರಾಂಶ ಸ್ವತಂತ್ರ ತಂತ್ರಾಂಶವಾಗಿರುವುದು. ಸಂಪದ ತುಂಬಾ ಸುಂದರವಾಗಿ ಮೂಡಿ ಬಂದಿದೆ ನೋಡಿ.

 

ಇದೆಲ್ಲದರ ಜೊತೆಗೆ, ಈ ಬ್ರೌಸರಿನ ಮೊದಲ ಕೆಲ ತೊಂದರೆಗಳು ಎದ್ದು ಕಾಣಿಸಿದವು ಕೂಡ. ವಿಂಡೋಸ್ ಎಕ್ಸ್ ಪಿ ನಲ್ಲಿ ಫ್ಲಾಶ್ ಪ್ಲಗಿನ್ ಬ್ರೌಸರ್ ನ ಮೂಲಕ ಇನ್ಸ್ಟಾಲ್ ಆಗಲ್ಲ, ಬೇರೆ ಇನ್ಸ್ಟಾಲ್ ಮಾಡಿ ಕೊಂಡರೆ, ಅಥವಾ ಮೊದಲೇ ಇನ್ಸ್ಟಾಲ್ ಆಗಿದ್ದರೆ ಸರಿಯಾಗಿ ಕೆಲಸ ಮಾಡತ್ತೆ. 

ಮೈಕ್ರೋಸಾಫ್ಟ್ ನ ಸಿಲ್ವರ್ ಲೈಟ್ (ಫ್ಲಾಶ್ ನಂತಹದ್ದೇ)  ಪ್ಲಗಿನ್ ಕೂಡ ಇನ್ನೂ ಕೆಲಸ ಮಾಡ್ತಿಲ್ಲ. ಅದನ್ನ ಬೇರೆ ಇನ್ಸ್ಟಾಲ್ ಮಾಡಿ ಕೊಂಡರೂ ಕ್ರೋಮ್ ನಲ್ಲಿ ಕೆಲಸ ಮಾಡಲ್ಲ. 

 ಗೂಗಲ್, ಇದನ್ನ ಲಿನಕ್ಸ್ ಗೆ ಎಂದು ಬಿಡುಗಡೆ ಮಾಡ್ತದೆ ಅಂತ ಕಾಯುತ್ತಿದ್ದೇನೆ. ವೈನ್ ಉಪಯೋಗಿಸಿ ಲಿನಕ್ಸ್ ನಲ್ಲಿ ಇನ್ಸ್ಟಾಲ್ ಮಾಡ್ಲಿಕ್ಕೆ  ಪ್ರಯತ್ನಿಸಿದೆನಾದರೂ ಪ್ರಯೋಜನವಿಲ್ಲ.