ಗೂಗಲ್ ಕ್ರೋಮ್ - ಲಿನಕ್ ಮತ್ತು ಮ್ಯಾಕ್ ಒ.ಎಸ್ ನಲ್ಲಿ

ಗೂಗಲ್ ಕ್ರೋಮ್ - ಲಿನಕ್ ಮತ್ತು ಮ್ಯಾಕ್ ಒ.ಎಸ್ ನಲ್ಲಿ

ಬರಹ

ಲಿನಕ್ಸ್ ಮತ್ತು ಮ್ಯಾಕ್ ನಲ್ಲಿ ಕೂಡ ಗೂಗಲ್ ಕ್ರೋಮನ್ನ ಬಿಡುಗಡೆ ಮಾಡದೇ ಇದ್ದದ್ದು ಎಲ್ಲ ಲಿನಕ್ಸ್ ಗೆಳೆಯರಿಗೆ ನಿರಾಸೆಯನ್ನ ತಂದಿತ್ತು. ಲಿನಕ್ಸ್ ನಲ್ಲಿ ಅದನ್ನ ವೈನಾದರೂ ಬಳಸಿ ಉಪಯೋಗಿಸ ಬೇಕು ಅಂತ ಟ್ರೈ ಮಾಡಿ, ಸಮಯವಿಲ್ಲದೆ ಅರ್ಧಕ್ಕೆ ಆ ಕೆಲಸವನ್ನ ಸ್ವಲ್ಪ ದಿನಗಳ ಹಿಂದೆ ನಿಲ್ಲಿಸಿದ್ದೆ. ಇಂದು ಮತ್ತದೇ ಸಾಹಸಕ್ಕೆ ಕೈ ಹಾಕಿ,  ಬೆಳಗ್ಗಿನಿಂದ ಕೂತು ಗೂಗಲ್ ಕ್ರೋಮನ್ನ ಲಿನಕ್ಸ್ ನಲ್ಲಿ ಇನ್ಸ್ಟಾಲ್ ಮಾಡೇ ಬಿಡೋಣ ಹ್ಯಾಕ್ ಮಾಡಿ ಅಂತ ಕೂತ್ಕೊಂಡು, ಅದನ್ನ ಸಾಧ್ಯವಾಗಿಸಿದ್ದೂ ಆಯ್ತು.ಅದನ್ನ ನನ್ನ ಇಂಗ್ಲೀಷ್ ಬ್ಲಾಗ್ ನಲ್ಲಿ ಬರೆದು ಸಬ್ಮಿಟ್ ಮಾಡಿ, ಇನ್ನೇನನ್ನೋ ಗೂಗಲ್ ನಲ್ಲಿ ಕೆದಕುತ್ತಿರುವಾಗ ನನ್ನ ಕಣ್ಣಿಗೆ ಬಿದ್ದದ್ದೇನು ಅಂದ್ರೆ ,"ಕೋಡ್ ವೀವರ್ಸ್ ಅನ್ನೋ ಕಂಪೆನಿಯವರು ನಾನು ಬಳಸಿದ ವೈನ್ ನನ್ನೇ ಇಟ್ಕೊಂಡು ಕ್ರೋಮನ್ನ ಲಿನಕ್ಸ್ ನಲ್ಲಿ ಕೆಲಸ ಮಾಡೋ ಹಾಗೆ ಮಾಡಿದ್ದಾರೆ" ಅನ್ನೋ ವಿಷಯ. ಅದರ ಬಗೆಗಿನ ಹೆಚ್ಚಿನ ಮಾಹಿತಿಯನ್ನ ಈ ಕೊಂಡಿಯಲ್ಲಿ ನೋಡಿ. ಅವರಿಗೆಲ್ಲ ಹ್ಯಾಟ್ಸ್ ಆಫ್.

ಲಿನಕ್ಸ್ ನಲ್ಲಿ ಗೂಗಲ್ ಕ್ರೋಮ್

 

ಮ್ಯಾಕ ನಲ್ಲಿ ಕ್ರೋಮ್

 ಇನ್ಸ್ಟಾಲ್ ಹ್ಯಾಗೆ ಮಾಡೋದು ಲಿನಕ್ಸ್ ನಲ್ಲಿ?

 ತುಂಬಾ ಸುಲಭ.ನೀವು ಉಬುಂಟು ಉಪಯೋಗಿಸ್ತಿದ್ರೆ ಇದನ್ನ ಕನ್ಸೋಲಿನಲ್ಲಿ ಟೈಪಿಸಿ (ಹಾ! ಇಂಟರ್ನೆಟ್ ಕನೆಕ್ಷನ್ ಇರಬೇಕು) :

sudo dpkg -i http://media.codeweavers.com/pub/crossover/chromium/cxchromium_0.9.0-1_i386.deb

ಅಷ್ಟೆ. 

ಈಗ ಕ್ರೋಮ್ ನೊಂದಿಗೆ ಮಜಾ ಮಾಡಿ. ಆದ್ರೆ ಹುಷಾರು, ಇದು ಇನ್ನೂ ಸುರಕ್ಷಿತ ಅಂತ ಗೊತ್ತಾಗಿಲ್ಲ. ನಾನು ಚೆಕ್ ಮಾಡ್ತಿದ್ದೇನೆ. ಇಂಟರ್ನೆಟ್ ತಾಣಗಳನ್ನ ಚೆಕ ಮಾಡ್ಲಿಕ್ಕೆ ಬಳಸ ಬಹುದು. ಆನ್ಲೈನ್ ಟ್ರಾನ್ಜಾಕ್ಷನ್ ಮಾಡ್ಬೆಡಿ. ಸೆಕ್ಯೂರ್ ಕನೆಕ್ಷನ್ಗೆ ಸಂಬಂದ ಪಟ್ಟ ಒಂದು ತೊಂದರೆಯೂ ಇದೆ. ಅದರ ಬಗ್ಗೆ ಮತ್ತೆ ಬರೀತೇನೆ. ಹಬ್ಬ ಮುಗಿದ ನಂತರ :)