ಗೂಡು

ಗೂಡು

ಕವನ

ಸಂಗಾತಿ ಸಂಪ್ರೀತಿಯ ಗೂಡು

ಹಾರುವ ಬಾನಾಡಿಗಳ ನೆಲೆವೀಡು

ನಾಗರಿಕತೆಯ ನೊಗಕೆ ಸಿಕ್ಕದಿರಲಿ ಜೀವ

ಬೆಚ್ಚಗಿನ ಗೂಡು ದೇವನೆಮ್ಮ ಕಾವ.

 

ಓಡುವ ಜೀವಕೆ ಕ್ಷಣಿಕ ಸುಖದ ಶಾಂತಿ

ಬೆಚ್ಚಗಿನ ಗೂಡಲಿ ಸಿಗುವ ವಿಶ್ರಾಂತಿ

ಹರಸಿ ಕರುಣಿಹ ದೇವ ಈ ನೆಲೆಯು

ಸಂಗಾತಿ ಬಳಿಯಲಿ ಬತ್ತದು ಒಲವ ಸೆಲೆಯು.

 

ಒಲವ ಜೀವ ಕೂಡಿ ಸಂಕಲನ

ಹೊಸ ಚಿಗುರ ಬಯಸಿ ಸಮ್ಮಿಲನ

ಗೂಡಲಿ ಮೂಡಲಿ ಹೊಸ ಕಿರಣ

ಚಿಲಿಪಿಲಿ ಗಾನವೇ ಕನಸ ಹೊಂಗಿರಣ.

 

ಹೊಸ ದಿಗಂತದ ಕಡೆಗೆ ಹಾರುವ

ಹೊಸ ಉಲ್ಲಾಸ ಹೊತ್ತು ತರುವ

ಗೂಡ ಬೆಳಗುತಿದೆ ನವ ಜೀವದ ಉಸಿರು

ಪ್ರೀತಿಯೇ ಅದನು ಕಾಯುವ ಹೆಸರು.

-ನಿರಂಜನ ಕೇಶವ ನಾಯಕ, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್