ಗೃಹಭಂಗ

ಗೃಹಭಂಗ

ಬೈರಪ್ಪನವರ  ಗೃಹಭಂಗ ದ ಓದುವಿಕೆಯ ಅನುಭೂತಿ ಪಡೆದುಕೊಂಡೆ, 

ಸರಳ ಆಡು ಭಾಷೆಯಲ್ಲಿ, ನಮ್ಮ ಸುತ್ತಲೇ ನಡೆದ ಘಟನೆಗಳು ಎನಿಸುತ್ತದೆ, ಬ್ರೀಟಿಷರ ಕಾಲದ ಹಳ್ಳಿಗಳು, ಹಾಗು ಹಳ್ಳಿಯ ಸೊಗಡು ಕಾದಂಬರಿಯಲ್ಲಿ ನೈಜವಾಗಿ ಮೂಡಿ ಬಂದಿದೆ, ಅನೇಕ ಪಾತ್ರಗಳಲ್ಲಿ ಕಥೆಗೆ ಆಧಾರ ಪಾತ್ರ ಎಂದು ಹೇಳಬಹುದಾದ "ನಂಜಮ್ಮ" ಬದುಕನ್ನು ಸ್ವೀಕರಿಸುವ ರೀತಿ, ಆಕೆ ಅನುಸರಿಸಿದ ನೈತಿಕ ಪದ್ದತಿಗಳು, ಅನ್ಯಾಯದ ವಿರುದ್ದ ಸಿಡಿದು ಬೀಳುವ ಪರಿ ಎಲ್ಲವೂ ಸುಂದರವಾಗಿ ಮೂಡಿದೆ, 

ಬೈರಪ್ಪ ಏನೇ ಬರೆದರೂ ಅದು ಅವರ ಅನುಭವದ ಮೂಸೆಯಿಂದಾ ಬಂದದ್ದು ಎಂದು ಅವರೇ ಅನೇಕ ಕಡೆ ಹೇಳಿದ್ದಾರೆ, ಆದ್ದರಿಂದ ಬೈರಪ್ಪನವರು ನೇರ ನುಡಿಗಳ ಮೂಲಕ ಬಹಳ ಹತ್ತಿರವಾಗುತ್ತಾರೆ,

 ಅತ್ತೆ, ಸೊಸೆ ಹಾಗು ಮಗಳಿನ ಮೂಲಕ ಮೂರು ತಲೆಮಾರುಗಳ ಹೆಣ್ಣಿನ ಸಂವೇದನೆಯನ್ನು, ಕಾದಂಬರಿಯಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದಾರೆ, ಜೊತೆಗೆ ಮಾದೇವಯ್ಯ ನವರ ಪಾತ್ರ, ಅಲೆಮಾರಿ ಬದುಕಿನಲ್ಲೂ ಸಂಸ್ಕೃತಿ ಹೇಗೆ ಕಾಪಾಡಿಕೊಂಡರು ಎಂದು ಬಿಂಬಿತವಾಗುತ್ತದೆ, ಅದಲ್ಲದೆ ಒಬ್ಬ ತಾಯಿ (ಗಂಗಮ್ಮ) ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದೆ, ಸರ್ವಾಧಿಕಾರಿ ದೋರಣೆಯಿಂದಾ ಬದುಕಿದರೆ, ಮಕ್ಕಳು ಹೇಗೆ ಹದಗೆಡುತ್ತಾರೆ ಎನ್ನುವುದೂ ಕೂಡ ಸಾರ ಸಗಾಟಾಗಿ ಸಾಬೀತಾಗುತ್ತದೆ, ಆದರೆ ಪೇಟೆಯಲ್ಲಿ ಬೆಳೆದು, ಹಳ್ಳಿಗೆ ಮಾಡುವೆ ಆಗಿ, ಹಳ್ಳಿಯ ಸಂಸ್ಕೃತಿಗೆ ಒಗ್ಗದೆ, ಪೇಟೆಯ ಧ್ಯಾನದಲ್ಲೇ ದಿನಕಳೆಯುವ ಹೆಣ್ಣಿನ ಇನ್ನೊಂದು ಮುಖ ಚಿತ್ರಿತವಾಗಿದೆ, ಇದರಿಂದಾ ಕುಟುಂಬದ ಮೇಲಾಗುವ ಪರಿಣಾಮವೂ ಚಿತ್ರಿತವಾಗಿದೆ,,, 

ಸಾವಿನ ದವಡೆಯಲ್ಲಿ, ಸಿಕ್ಕಿದ ಮಕ್ಕಳನ್ನು ಕಂಡು ನಂಜಮ್ಮ ಕೊರಗುವ ಸ್ಥಿತಿ, ಹಾಗು ಸಾವು ಸಾರ್ವಕಾಲಿಕ ಸತ್ಯ ಎಂದು ನಂಬಿ ಮತ್ತೆ ಬದುಕಿಗೆ ಮುಖ ಮಾಡುವ ರೀತಿ, ಮಾನವತೆಯ ಗುಣವನ್ನು ಬಿಂಬಿಸುತ್ತದೆ, 

ನಂಜಮ್ಮನ ಕುಟುಂಬ ನಾಶವಾಗಿ, ನಂಜಮ್ಮನ ಕೊನೆ ಮಗ "ವಿಶ್ವ" ನನ್ನು ಮಾದೆವಯ್ಯನವರು ಕರೆದುಕೊಂಡು ಊರು ಬಿಟ್ಟು ಹೋಗುವಾಗ, ವಿಶ್ವನ ಅಪ್ಪನ ನಿರ್ಲಿಪ್ತತೆ, ಅವನ ಉದಾಸೀನತೆಯನ್ನು ತೋರಿಸುತ್ತದೆ,,,,

ಒಮ್ಮೆ ಓದಿ, ಅದರ ಅನುಭೂತಿಯಲ್ಲಿ ತೇಲಲೇ ಬೇಕಾದ ಕಾದಂಬರಿ,,

ಚಿತ್ರ ಕೃಪೆ : ಅಂತರ್ಜಾಲ 

Comments

Submitted by VeerendraC Wed, 08/06/2014 - 11:35

ನಿಮ್ಮ‌ ಅನಿಸಿಕೆಯನ್ನು ಓದಿ ಮತ್ತೆ ಗೃಹಭಂಗದ‌ ಅನುಭೂತಿಯನ್ನು ತರಿಸುತ್ತದೆ.
ಗೃಹಭಂಗವನ್ನು ಓದಿದರೆ ಅದರ‌ ಗುಂಗಿನಿಂದ‌ ಹೊರಬರಲು ತುಂಬಾ ಕಷ್ಟವಾಗುತದೆ. ಅದರಲ್ಲಿ ಬರುವಷ್ಟು ದುಖ, ನೋವುಗಳು ಎಲ್ಲೂ ನೋಡಲು ಸಿಗುವುದಿಲ್ಲ. ಆ ಕಾಲದಲ್ಲಿ ಬರುವ‌ ಬರಗಾಲ‌, ಪ್ಲೇಗ್ ಮುಂತಾದ‌ ಮಹಾಮಾರಿಗಳು , ಬಡತನಗಳು, ಗಂಡನೆಂಬ‌ ನಿಷ್ಪ್ರಯೊಗ‌ ವ್ಯಕ್ತಿಯು .. ಇಂತಹ‌ ಕಥೆಗಳು ಕೇವಲ‌ ಆ ಕಾಲಘಟ್ಟದಲ್ಲಿ ಮಾತ್ರ‌ ಸಂಭವಿಸಲು ಸಾಧ್ಯ‌.
ಎಲ್ಲರೂ ಓದಬೇಕಾದ‌ ಕಾದಂಬರಿ ಇದು. ಜೊತೆಗೆ ಇದು ಬೈರಪ್ಪನವರ‌ ಬಾಲ್ಯ‌ಜೀವ‌ನಕೆ ಸಮೀಪವಾಗಿದೆ ಎನಿಸುತ್ತದೆ ..

Submitted by kavinagaraj Thu, 08/07/2014 - 09:02

ಇದು ನನಗೂ ಇಷ್ಟವಾದ ಕೃತಿಯಾಗಿದೆ. ಈಗ ಅವರ 'ಯಾನ' ಓದುತ್ತಿರುವೆ.