ಗೃಹ - ಸಂಭ್ರಮ

ಗೃಹ - ಸಂಭ್ರಮ

ಕವನ

                                               ಗೃಹ - ಸಂಭ್ರಮ

ಬಾಡಿಗೆ ಕಟ್ಟಿ ಕಟ್ಟಿ ರೋಸಿತು ಮನವು ,

ಸ್ವಂತ ಸೂರು ಮಾಡಿಕೊಳಬೇಕೆಂಬ ಕನಸಾಯಿತು ,

ಕನಸು ಹಂಬಲವಾಯಿತು,

ಕನಸನ ನನಸು ಮಾಡಿಕೊಳೋ ಮನಸ್ಸು ಆಯಿತು ,

 

ಬಾಳ ಸಂಗಾತಿಯೊಂದಿಗೆ ವರುಷಗಳು ಕಷ್ಟ ಪಟ್ಟಿದು ಆಯಿತು,

ಬಿಗಿ ಹಿಡಿತದ ಜೀವನ ಸಾಗಿಸಬೇಕಾಯಿತು ,

ಈ ಶ್ರಮದ ಫಲವೇ ಸ್ವಂತ ಸೂರು ಮಾಡಿಕೊಳುವಂತೆ  ಆಯಿತು,

ಏನೋ ಸಾದಿಸಿದಂತೆ ಅನಿಸಿತು ,

ಆಕಾಶದಲ್ಲಿ ತೇಲಾಡುವಂತೆ ಆಯಿತು,

ಹೇಳಲಾಗದ ಸಂತೋಷವಾಯಿತು,

ಸಂಗತಿಯ ಮೊಗದಲ್ಲಿ ಸಂತಸದ ನಗೆ ಮೂಡಿತ್ತು ,

ನಾನೇ ಧನ್ಯ ಅನಿಸಿತು ,

 

ಇದನೆಲ್ಲ ಸ್ನೇಹಿತರ ಜೊತೆ ಹಂಚಿಕೊಳಬೇಕೆಂದು ಅನಿಸಿತು ,

ಸ್ನೇಹಿತರೊಂದಿಗೆ ಸಂತೋಷ ಕೂಟ ಏರ್ಪಡಿಸಿದೆನು,

ನಗೆ ಹನಿಗಳೊಂದಿಗೆ ಸಂತೋಷ ಕೂಟ  ನಡಿಯಿತು

ಅವರೆಲ್ಲರ ಆಶೀರ್ವಾದದೊಂದಿಗೆ ನನ್ನ ಸಂತೋಷ ಇಮಡಿಸಿತ್ತು

 

ಸದಾ ಈ ನಗು ಹೀಗೆ ಇರಲಿ ಅಂತ ಆಶಿಸುವ ಸ್ನೇಹಿತರ ತಂಡ..

Comments

Submitted by venkatb83 Wed, 03/27/2013 - 19:11

ಅಂತೂ ಬಾಡಿಗೆ ಮನೆಯಿಂದ ಆ ಕಿರಿಕಿರಿಯಿಂದ ಪಾರಾದಿರಿ....ನಿಮಂ ಸಂತೋಷದಲ್ಲಿ ನಾವೂ ಭಾಗಿ...!!
ಬಾಡಿಗೆ ಮನೆಗಳಲ್ಲಿ ಇದ್ದು ಈಗಲೂ ಇರುವ ನಮಗೆ ಅಲ್ಲಿಯ ತರಹ ತರವೇರಿ ಅನುಭವಗಳು ಆಗಿವೆ..
ಈಗಿನ ಓನರ್ ದೇವ್ರನ್ತವರು ಸೊ ಸಮಸ್ಯೆ ಇಲ್ಲ..!!

ಶುಭವಾಗಲಿ..

\।