ಗೆಜ್ಜೆ ಹೆಜ್ಜೆ- ರಂಗಭೂಮಿ ಪತ್ರಿಕೆ - ರಘೋತ್ತಮ್ ಕೊಪ್ಪರ

ಗೆಜ್ಜೆ ಹೆಜ್ಜೆ- ರಂಗಭೂಮಿ ಪತ್ರಿಕೆ - ರಘೋತ್ತಮ್ ಕೊಪ್ಪರ

ಬರಹ

ಗೆಜ್ಜೆ ಹೆಜ್ಜೆ- ರಂಗಭೂಮಿ ಪತ್ರಿಕೆ

ಚಲನಚಿತ್ರಗಳ ಬಗ್ಗೆ, ರಾಜಕೀಯದ ಬಗ್ಗೆ ಹತ್ತಾರು ಪತ್ರಿಕೆಗಳು ಬಂದಿವೆ. ಆದರೆ ರಂಗಭೂಮಿಯ ಬಗ್ಗೆ ಇರುವ ಪತ್ರಿಕೆಗಳು ತೀರಾ ವಿರಳ. ಅದಕ್ಕೆಂದೆ ಚಲನಚಿತ್ರ ನಟ ಮತ್ತು ರಂಗಭೂಮಿ ಕಲಾವಿದ ಮೈಸೂರು ರಮಾನಂದ ಅವರು ’ಗೆಜ್ಜೆ ಹೆಜ್ಜೆ’ ಎಂಬ ಪತ್ರಿಕೆಯನ್ನು ಆರಂಭಿಸಿದ್ದಾರೆ. ಕಲಾವಿದರ ಪರಿಚಯ, ನಾಟಕಗಳ ಬಗ್ಗೆ ಲೇಖನಗಳು, ಮುಖಾಮುಖಿ ಎಂಬ ಹಾಸ್ಯ ಅಂಕಣ ಮುಂತಾದ ಲೇಖನಗಳು ಇದರಲ್ಲುಂಟು. ನೂರಾರು ವಾಹಿನಿಗಳು, ಮತ್ತು ಸಿನಿಮಾಗಳಿಂದ ಜನರನ್ನು ರಂಗಭೂಮಿಯತ್ತ ಸೆಳೆಯಲು ಇದೊಂದು ಚಿಕ್ಕ ಪ್ರಯತ್ನ ಎಂಬುದು ರಮಾನಂದ ಅಂಬೋಣ.

ರಮಾನಂದ ಬಗ್ಗೆ: ಮೈಸೂರು ರಮಾನಂದ ಅವರು ಚಲನಚಿತ್ರ ನಟರು ಮತ್ತು ನಾಟಕಕಾರರು. ಸುಮಾರು ೯೫ ಚಿತ್ರಗಳಲ್ಲಿ ನಟಿಸಿದ್ದಾರೆ. ಕರ್ನಾಟಕದಾದ್ಯಂತ ೬೦೦೦ ಕ್ಕೂ ಹೆಚ್ಚು ನಾಟಕಗಳನ್ನು ಮಾಡಿದ್ದಾರೆ. ಬೀದಿ ನಾಟಕಗಳಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡವರು. ಕನ್ನಡ ಸಂಸ್ಕ್ರತಿ ಇಲಾಖೆ ಮತ್ತು ಸರಕಾರದ ವಿವಿಧ ಸಂಸ್ಠೆಗಳಲ್ಲಿ ನಾಟಕ ಪ್ರದರ್ಶನ ನೀಡುತ್ತಾರೆ. ಮೊಬೈಲಾಯಣ ನಾಟಕ ಹಲವುಬಾರಿ ದೂರದರ್ಶನದಲ್ಲಿ ಪ್ರಸಾರವಾಗಿದೆ. ನೀವೂ ರಂಗಾಸಕ್ತರಾಗಿದ್ದರೆ ಲೇಖನಗಳನ್ನು ಬರೆಯಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ೯೪೪೮೦ ೭೦೪೮೪.
- ರಘೋತ್ತಮ್ ಕೊಪ್ಪರ