ಗೆಲುವು ಗೆದ್ದವರಿಗೆ ಮಾತ್ರ ಅಲ್ಲ...
ಕವನ
ಸಿರಿತನ ಐತಿ ಅಂತ ಮೆರೆದು,
ಸಂಬಂಧಿಕರ ಪ್ರೀತಿ ತೊರೆದು,
ಸೋತೆ ಹಣ್ಣಿನಂತೆ ಬಿರಿದು,
ಆಗಿಬಿಟ್ಟಿದೆ ಮಾನವನ ಬದುಕು ಜರಿದು.
ನಗು ಎಲ್ಲರಿಗೂ ಶಾಶ್ವತವಲ್ಲ,
ಅಳು ಬಡವರಿಗೆ ಮಾತ್ರವಲ್ಲ,
ಗೆಲುವು ಗೆದ್ದವರಿಗೆ ಮಾತ್ರ ಅಲ್ಲ,
ಅದೂ ಸೋತು ಗೆದ್ದವರಿಗೂ ಇದೆಯಲ್ಲಾ.
ಸೋಲು ಇವತ್ತು ಇರಬಹುದು
ಗೆಲುವು ನಾಳೆ ಬರಬಹುದು
ಇವತ್ತು ಬರಬಹುದು
ಅಥವಾ ನಾಳೆಯೂ ಬರಬಹುದು
ಅದು ಬಂದಾಗ ಬಿಗಬಾರದು
ಸಿಗದೆ ಇದ್ದಾಗ ಬಿಡಬಾರದು
ಕನಸು ಕಾಣಬಾರದು
ಕಂಡರೆ ನೆನಸು ಮಾಡದೆ ಬಿಡಬಾರದು
ಮೆರೆದವರ ಸೊಕ್ಕು ಮುರಿದು
ಉರಿದವರಿಗೆ ನೀರು ಕುಡಿಸಿ
ನಾ ಅಂದವರನ್ನು ಬಗ್ಗುಬಡಿದು
ನಡೆದು ಬಿಡು ನಿನ್ನ ಸಾಧನೆ ಹಾದಿಯಲ್ಲಿ.
-ಹುಚ್ಚೀರಪ್ಪ ವೀರಪ್ಪ ಈಟಿ, ಶಿಕ್ಷಕರು, ಸಾ ನರೇಗಲ್ಲ, ಜಿಲ್ಲಾ ಗದಗ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್