ಗೆಳತಿಯ ನೆರಳು

ಗೆಳತಿಯ ನೆರಳು

ಬರಹ

ನೀ ಇಲ್ಲದೆ ಗೆಳತಿ ನಾನೇನು ಬರೆಯಲಿ, ನಾನೇನು ಹಾಡಲಿ
ನೀನಿಲ್ಲದೆ ನನ್ನ ಹೃದಯ ನೀರಿಲ್ಲದ ಮರಭುಮಿ,
ನೀರಾಗಿ ನೀ ಬಂದು ನಿರಲ್ಲೇ ನನ್ನ ನೆಂದು
ನನ್ನ ಈ ಹೃದಯಕ್ಕೆ ಓಯಸಿಸ್ ನೀನಾಗ ಬಾರದೆ?
ನೀ ಇಲ್ಲದೆ ಗೆಳತಿ ನಾನೇನು ಬರೆಯಲಿ, ನಾನೇನು ಹಾಡಲಿ.

ನಿನ್ನ ನೆರಳಲ್ಲೇ ನಿನ್ನ ಕಾಣುವ ಕನಸಿಗೆ
ಕೊನೆ ಹಾಡುವೆಯ ಗೆಳತಿ ಕೊನೆ ಹಾಡುವೆಯಾ?
ನನ್ನ ಕನಸಿನ ಹಕ್ಕಿಗೆ ರೆಕ್ಕೆ ಕಟ್ಟುವೆಯಾ ಗೆಳತಿ ?
ರೆಕ್ಕೆಗೆ ಪುಕ್ಕ ಬರುವ ಮುನ್ನ ನೀ ಮರೆಯಾಗದಿರು ಗೆಳತಿ!
ನೀ ಇಲ್ಲದೆ ಗೆಳತಿ ನಾನೇನು ಬರೆಯಲಿ, ನಾನೇನು ಹಾಡಲಿ.

ಈ ನನ್ನ ಒಂಟಿ ಜೀವನಕೆ ಅರ್ಥ ಕೊಡುವೆಯಾ ಗೆಳತಿ
ಅರ್ಥವಾಗದ ಈ ಜೀವನ ವ್ಯರ್ಥವಾಗುವ ಮುನ್ನ
ಅರ್ಥಮಾಡಿಸು ಬಾ ಗೆಳತಿ.
ನೀನಿಲ್ಲದೆ ಕವಿಯಾಗುವ ಮೊದಲು ಕೈ ಹಿಡಿಯುವೆಯಾ ಗೆಳತಿ?
ನೀ ಇಲ್ಲದೆ ಗೆಳತಿ ನಾನೇನು ಬರೆಯಲಿ, ನಾನೇನು ಹಾಡಲಿ.