ಗೆಳೆತನ

ಗೆಳೆತನ

ಬರಹ

ಈ ನಮ್ಮ ಸ್ನೇಹದ ಮನನ
ನಾ ಮಾಡುವೆ ಪ್ರತಿದಿನ
ನಮ್ಮ ಸ್ನೇಹದ ಕುರುಹು ಈ ಕವನ

ಆಗಾಗ್ಗೆ ನಮ್ಮಿಬ್ಬರ ಕಲಹ
ಹೆಚ್ಚಿಸಲಿ ನಮ್ಮಿಬ್ಬರ ಸ್ನೇಹ
ಎಂದಿಗೂ ನೀ ಇರು, ನನ್ನೀ ಹೃದಯದ ಸನಿಹ

ತುಂಡಾಗಲು ನಿನ್ನ ಸ್ನೇಹವು
ಬದುಕಲು ಬಯಸದು ಈ ಜೀವವು
ಎಂದೆಂದಿಗೂ ಬಯಸುವೆ, ಆ ನಿನ್ನ ಸ್ನೇಹದ ಒಲವು

ಕಷ್ಟದಿ ಆಗುವ ಗೆಳೆಯ
ಕಟ್ಟಲಾಗದು ಈ ನಿನ್ನ ಸ್ನೇಹಕೆ ಬೆಲೆಯ
ಆದರಿಸು, ಸ್ವೀಕರಿಸು, ಮರೆಯದಿರು ಈ ನನ್ನ ಕೋರಿಕೆಯ

ಕರುಣೆಯು ಸ್ನೇಹದ ಬಿಂಬ
ಬಂದಿದೆ ಈ ಮಾತು ಮನದಾಳದಿಂದ
ಎಂದಾದರೂ ತಪ್ಪಾದರೆ ನನ್ನಿಂದ, ಮನ್ನಿಸು ಸ್ನೇಹದಿಂದ

ನನ್ನ ಮನಕ್ಕಿಲ್ಲ ಭಯ, ದಿಗಿಲು
ಏಕೆಂದರೆ ನನಗಿದೆ ನಿನ್ನೀ ಸ್ನೇಹದ ಕಾವಲು
ಎಂದೆದೀಗೂ ಇರಲಿ, ಆ ನಿನ್ನ ಶುಭ ಹರೈಕೆಯು ನನಗೇ ಮೀಸಲು

ಎಂದಿಗೂ ಆರದಿರಲಿ ಈ ಸ್ನೇಹದ ಜ್ಯೋತಿ
ನನ ಮೈ ಮನಕೆ ನೀಡುವುದು ಅದು ಕಾಂತಿ
ಓ ದೇವರೆ ಈ ನನ್ನ ಸ್ನೇಹಿತನಿಗೆ ಆ ಜ್ಯೋತಿಯ ಆರಿಸದಂತೆ ಕೊಡು ಮತಿ.......ಮತಿ.........ಮತಿ