ಗೆಳೆಯ
ಮುತ್ತಿನವಳ ಮತ್ತಲ್ಲಿ ತುತ್ತಿನವಳ(ರ)ಕತ್ತಿನಮೇಲೆ ಕಾಲಿಕ್ಕಿ
ನೆಚ್ಚಿನವರಕೈಗೆ ನಂಜನ್ನು ಇಕ್ಕಿ ಹೋದೆಯಾ ನೀ ಗಂಡು ಹಕ್ಕಿ(ಗೆಳೆಯ)
ಒಂದಲ್ಲಾ ಒಂದುಲ್ಲಾ ಒಂದು ದಿನ ನೀ ಅಳಲೇಬೇಕು ಬಿಕ್ಕಿ ಬಿಕ್ಕಿ
ಒಲವು,ನಲಿವು,ಮಮತೆ,ಘನತೆ ನೆಕ್ಕಿ(ನೆನೆದು)
ಮೋಹದ ಮನೆಯಲ್ಲಿ ಮೋಸವಿಹುದು ಬಲ್ಲೆಯಾ ?
ಮೋಹದಾ ಬಲೆಯೊಳಗೆ ನೀ ಬಿದ್ದೆಯಾ?
ಹೆಣ್ಣು,ಹೆಂಡ,ಜೂಜು ನಂಬಿದವರಾರೂ ಉಳಿದಿಲ್ಲ
ಕಣ್ಣಿದ್ದೂ ಕುರುಡ ನೀನಾಗಿ ಹೋದೆಯಲ್ಲ
ರಾತ್ರಿ ಕಂಡ ಬಾವಿಯಲ್ಲಿ ಹಗಲಲ್ಲೇ ಬಿದ್ದೆಯಲ್ಲ
ಒಂದಗುಳ ಕಂಡೊಡನೆ ಕೂಗುವುದು ಕಾಗೆ
ಒಂದೂ ಇರಲಿಲ್ಲ ನಿನಗೆ ಯಾರಲ್ಲೂ ಹಗೆ
ಆದರೂ ಮರೆತು ಎಲ್ಲವ,ಮರೆತು ಎಲ್ಲರ ಇರುವೆ ಹೇಗೆ
ತಂದೆಗಿಂತ,ತಾಯಿಗಿಂತ,ಬಂಧುಗಿಂತ,ಸ್ನೇಹಕ್ಕಿಂತ
ಹೆಚ್ಚಾಯಿತೇ ಪ್ರೇಮ(ಕಾಮ)ರಾಮ ರಾಮ ರಾಮ
ಎಂದುಕೊಂಡ ನೀ ಆದೆಯಾ ಶಾಮ
ಜಲವ ಬಿಟ್ಟ ಮೀನು,ಕುಲವ ಬಿಟ್ಟ ನೀನು
ವನವ ಬಿಟ್ಟ ಹಕ್ಕಿ,ಗಗನ ಬಿಟ್ಟ ಚುಕ್ಕಿ
ಉಳಿಯಲಾರದು ಬದುಕಿ
ರಾಮಾಯಣ ಮಹಾಭಾರತಕ್ಕೆ ಕಾರಣವು ನಾರಿ
ಆದ್ದರಿಂದಲೇ ಹೇಳುತ್ತಿದ್ದೇನೆ ನಿನಗೆ ಹಲವು ಬಾರಿ
ನೀ ಹೆಣ್ಣಿಂದ ದೂರ ಸರಿ ಮೋಹ ಮರಿ
ಮನದಲ್ಲಿರಲಿ ಒಂದು ಗುರಿ
ಅದ ಸಾಧಿಸುವವರೆಗೆ ಬೇರೆಲ್ಲವ ತೊರಿ.