ಗೆಳೆಯನಿಗೊಂದು ಪತ್ರ...

ಗೆಳೆಯನಿಗೊಂದು ಪತ್ರ...

ಕವನ

ಮುಖವಾಡಗಳು

ಕಳಚುವವು

ಕೆಲವೊಮ್ಮೆ ಇಲ್ಲಿ 

 

ಎಚ್ಚರವಾಗಿರು

ಗೆಳೆಯ ಈ

ಬಯಲಾಟದ

ಬದುಕಲ್ಲಿ...!

 

ಬೂದಿ ಮುಚ್ಚಿದ ಕೆಂಡ

ಮಾತುಮಾತುಗಳಲ್ಲಿ 

ಕೆನೆ ಬೆಣ್ಣೆಯನು

ತೋರಿ ಸುಣ್ಣ

ಎರಚುವರಿಲ್ಲಿ

 

ಬಾಯಿ ಬಿಡಬೇಡ

ಬಿಟ್ಟರೇ ಕೆಟ್ಟೆ...! 

ಮೌನವಾದರೂ ಸಾಕು

ಕಟ್ಟುವರು ಕಟ್ಟೆ

 

ಮಾತು ಮಾತಿನ

ನಡುವೆ ತೂತು

ಹುಡುಕುವರು 

ಗಾಸಿಗೊಳಿಸಿದೆ 

ಎಂದು ಕುಣಿದು

ಕುಪ್ಪಳಿಸುವರು...!

 

ಗೀತೆ ಬಲ್ಲವರೆಂದು 

ನಂಬಿ ಕೆಡಬೇಡ..

ಬಲೆಯ ಉದ್ದಕ್ಕೆ

ನೇಯ್ದು ನಕ್ಕು

ಕರೆಯುವ ಜೇಡ 

 

ನಿನಗೆ ನೀನೇ ಎಂಬ

ಸತ್ಯವನು ಕಾಣು 

ಹುಟ್ಟಿಸಿದ ದೇವನಿಗೆ

ನೀನೋರ್ವ ಮಾತ್ರ

ಭಾರವೇನು...!?

 

ನಿನ್ನದೇ ಬದುಕನ್ನು 

ಖುಷಿಯಿಂದ ಬದುಕು 

ನಿನ್ನೊಳಗವಿತಿರುವ 

ನೈಜ ಖುಷಿಯನ್ನು 

ನೀನೇ ಹುಡುಕು...!!!

-ಗಣೇಶ್ ವೈದ್ಯ

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್