ಗೆಳೆಯನ ವಿವಾಹದ ಸುದ್ದಿ

ಗೆಳೆಯನ ವಿವಾಹದ ಸುದ್ದಿ

ಬರಹ

ಗೆಳೆಯನ ವಿವಾಹದ ಸುದ್ದಿ


ಸೋಮವಾರ ಬಂದೆ ನಾ ಕಚೇರಿಗೆ
ರಾಮ ಅಂಟಿಕೊಂಡು ಕೂತಿದ್ದ ಚೇರಿಗೆ


ಏನೋ ರಾಮ ಮುಖದಲ್ಲಿ ಈ ಕಳೆ
ಕೈಗೆ ಸಿಕ್ಕಿತೇನೊ ಹುಡುಗಿಯ ಬಳೆ


ಸಣ್ಣಗೆ ಮುಗುಳ್ನಗೆ ಬೀರಿದ ಗೆಳೆಯ
ಸ್ವಲ್ಪ ದಿನದಲ್ಲಿ ಆಗುವೆನೆಂದ ಅಳಿಯ


ಹಂಚಿದೆನು ಸಿಹಿ ಸುದ್ದಿಯನು ನಮ್ಮ ತಂಡಕೆ
ಬೀಳುವನು ರಾಮ ಮದುವೆಯೆಂಬ ಹೊಂಡಕೆ


ಸಂಭ್ರಮಿಸಿದರು ಅವಿವಾಹಿತ ಮಿತ್ರರು
ವಿವಾಹಿತರು ಒಳಗೆ ಮುಸು ಮುಸು ನಕ್ಕರು


ದುಂಬಾಲು ಬಿದ್ದೆವೆಲ್ಲ ವಿವಾಹ ಔತಣ ಕೂಟಕೆ
ಕಾರ್ಡ್ ಉಜ್ಜಲು ಒಪ್ಪಿದ ರಾಮ ನಮ್ಮ ಕಾಟಕೆ


ಕಲಿಸಿದೆವು ಹಣ ವ್ಯಯಿಸುವ ಹೊಸ ಪಾಠ
ರೂಡಿಸಲೇ ಬೇಕಲ್ಲವೆ ರಾಮ ಈ ಪರಿಪಾಠ


ಶುಭವಾಗಲಿ ರಾಮನ ಹೊಸ ಜೀವನಕೆ
ಗೃಹಸ್ಥಾಶ್ರಮದ ನವ ಸಾಗರದ ಪಯಣಕೆ.


- ತೇಜಸ್ವಿ .ಎ.ಸಿ