ಗೆ, ಕಲ್ಪನೆಯ ಗೆಳತಿ ,೨ ನೆ ಕವಾಟ, ಅಪಧಮನಿ, ಊರು : ಪ್ರಿತ್ಸೋ ಹೃದಯ.

ಗೆ, ಕಲ್ಪನೆಯ ಗೆಳತಿ ,೨ ನೆ ಕವಾಟ, ಅಪಧಮನಿ, ಊರು : ಪ್ರಿತ್ಸೋ ಹೃದಯ.

ಕವನ

 ಓ ನಲ್ಮೆಯ ಗೆಳತಿ ,

ನೀನೇ ನನ್ನ ಹೃದಯದ ಒಡತಿ ,
ಪ್ರೇಮಪಾಶ ಬಚ್ಚಿಟ್ಟು ,ಇನ್ನೆಷ್ಟು ದಿನ ಕಾಯುತಿ ?
ಬಿಡು ನಿನ್ನ ತಂದೆಯ ಭೀತಿ ,
ಹೀಗೆ ಹೆದರಿದರೆ ಜಯಗಳಿಸೀತೆ ನಮ್ಮ ಪ್ರೀತಿ ?
 
ಮನಬಿಚ್ಚಿ ಹೇಳು ನಮ್ಮಿಬ್ಬರ ಸಂಗತಿ,
ಒಪ್ಪುತಾರೆ ಅನ್ನೊ ಭರವಸೆ ನನಗೈತಿ ,
ಮನೆಯಲಿ ಕೇಳಿದರೆ ಹುಡುಗನ ಆಸ್ತಿ ,
ಹೇಳು ನೀ ಅವನ ಆಸ್ತಿ, ನಿಮಗಿಂತ ಕೊಂಚ ಜಾಸ್ತಿ !!!!
 
ನೆನಪಿಸಿಕೊ , ಅಂದು ನೀ ಸ್ಪಂದಿಸಿದ್ದೆ ನನ್ನ "ಭಾವನೆ" ಗೆ,
ಚಿತ್ತಾರ ಬರೆದಿದ್ದೆ ನನ್ನ ಸುಂದರ "ಕಲ್ಪನೆ" ಗೆ, 
ನಾಯಕಿ ನೀನಾಗಿದ್ದೆ,  ನನ್ನ ಇರುಳಿನ "ಕನಸಿ"ಗೆ 
ಇವಿಷ್ಟು ಸಾಕೇ ?? ನಮ್ಮ ಪ್ರೇಮದ ಗುರುತಿಗೆ.. 
 
ಈ ಹೃದಯದ ವೇದನೆ ಇನ್ನು ಬೇಡ ನನಗೆ,
ಶಪತ ಮಾಡಿರುವೆ ಎಂದೋ, ನಾ ಬಾಳಿದರೆ ಅದು ನಿನ್ನ ಜೊತೆಗೆ ,
ಅಗ್ನಿ ಸಾಕ್ಷಿಯಾಗಿ , ಕೈ ಹಿಡಿದು ಬಾ ಮನೆಗೆ ,
ಮುಂದಿನ ಜೀವನ ಕಳೆಯೋಣ ಜೊತೆ ಜೊತೆಗೆ ...

Comments