......ಗೆ

......ಗೆ

ಕವನ

 

......ಗೆ 

ಅಮೆ ರಾತ್ರಿಯ ಅಂಬರದ 

ಅಮಿತ ತಾರ ಲೋಕ ತಲದಿ 
ಸುಮ ಕೋಮಲೆ ನಿನ್ನ ಕರವ 
ಪಿಡಿಯ ಬಯಸುವೆ!
ಕಮಲದೆಸಳ ನಿನ್ನ ತುಟಿಯ 
ಸವಿಯ ಬಯಸುವೆ!
 
ದುಃಖ ದುಮ್ಮಾನವಿರದ 
ಸುಖವೊಂದೇ ಮೆರೆಯುತಿರುವ 
ನಾಕ ಸಮ ಲೋಕದಲ್ಲಿ 
ಬಾಳ ಬಯಸುವೆ!
ಸಖಿ ಅಲ್ಲಿ, ನಿನ್ನೊಳ ರಾಜ್ಯವ-
ನಾಳ ಬಯಸುವೆ!
-ಮಾಲು