ಗೊಂದಲ

ಗೊಂದಲ

            ನಾನು ಆಶಾ, ಬ್ಯಾಂಗಲೋರ್ ನಿವಾಸಿ , ಅಶೋಕ್ ಧರ್ಮ ಪತ್ನಿ. ನಾನು ಇರುವುದು ಹೆಚ್ ಏ ಯಲ್ ಹತ್ತೀರ. ನಾನು ಗೃಹಿಣಿ. ನನ್ನ ಯೆಜಮಾನರು ಸಾಫ್ಟ್ವೇರ್ ಇಂಜಿನಿಯರ್. ದಿನ ನಿತ್ಯದ ಜೀವನ ಯಾವುದೇ ತೊಂದರೆ ಇಲ್ಲದೆ ಸಾಗುತೀದೆ. ನಮ್ಮ ಮನೆ ಮುಂದೆ ಅಷ್ಟೊಂದು ವಿಶಾಲವಾದ ರಸ್ತೆ ಇಲ್ಲ.

ಒಂದು ದಿನ ನಾನು ಎಲ್ಲೋ ಹೊರಗೆ ಹೋಗಿ ಮನೆಗೆ ಬರುವಾಗ ಆಗಲೇ ಸಂಜೆ ೭ ಘಂಟೆ ಆಗಿತು. ನಮ್ಮ ಮನೆ ಮುಂದೆ ಯಾವುದೊ ಆಟೋ ನಿಂತ್ತಿತು. ನಾನು ಯಾರೋ ಮನೆಗೆ ಬಂದು ಇರಬಹುದು ಅಂತ ಮನೆಗೆ ಹೋದೆ. ಅಲ್ಲಿ ಯಾರು ಇರಲ್ಲಿಲ. ಪಕ್ಕದ ಮನೆಗೆ ಬಂದಿರ ಬೇಕು ಅಂತ ಸುಮ್ಮನೆ ಆದೆ. ಅಶೋಕ್ ಕೂಡ ಊರಿನಲ್ಲಿ ಇರಲ್ಲಿಲ. ಮರೆನೆಯ ದಿನ ಬೆಳ್ಳಿಗೆ ನೋಡಿದರು ಆಟೋ ಅಲ್ಲೇ ನಿಂತ್ತಿತು, ನನಗೆ ಗಾಬರಿ ಆಯಿತು. ಏನು ಮಾಡಲು ತೊಚ್ಚಲ್ಲಿಲ. ಅಷ್ಟ್ರಲ್ಲಿ ಯಾರೋ ಯುವಕ ಬಂದು ಆಟೋ ಸ್ಟಾರ್ಟ್ ಮಾಡಿದ, ನಾನು ಅವನನ ತಡೆದು ರಿಕ್ವೆಸ್ಟ್ ಮಾಡಿದೆ,

"ಸಾರ್ , ದಯಾ ಮಾಡಿ ಇಲ್ಲಿ ಆಟೋ ನಿಲಿಸಬೇಡಿ , ನಮ್ಮಗೆ ಹೋಗಿ ಬರೋಕ್ಕೆ ತೊಂದರೆ ಆಗುತೆ , ಪ್ಲೀಸ್ "

ಇದನ ಕೇಳಿಸಿಕೊಂಡು ಯುವಕ ನನ್ನ ಒಮ್ಮೆ ಉಡಾಫೆ ಇಂದ ನೋಡಿ ಆಟೋ ತೆಗೆದು ಕೊಂಡು ಹೊರಟು ಹೋದ. ಮತ್ತೆ ಸಾಯಂಕಾಲ ಆಟೋ ತಂದು ಅಲ್ಲಿ ನಿಲ್ಲಿಸಿ ಹೋದ. ನನಗೆ ಏನು ಮಾಡಬೇಕು ಅಂತ ತಿಳಿಯಲ್ಲಿಲ. ಎರಡು ಮೂರು ದಿನ ವಾದರೂ ಆಟೋ ಅಲ್ಲಿ ಇತ್ತು. ಊರಿಂದ ಅಶೋಕ್ ಮತ್ತೆ ನನ್ನ ಹಾಗು ಅಶೋಕ್ ಇಬ್ಬರ ಮಿತ್ರ ಹರೀಶ್ ಮನೆಗೆ ಬಂದರು. ಆಟೋ ಬಗೆ ಕೇಳಿದರು. ನಾನು ಎಲ್ಲ ಹೇಳಿದೆ, ಅದಕ್ಕೆ ಹರೀಶ್

"ನೋಡು ಆಶಾ , ಎರಡು ಮೂರ ದಿನದಿಂದ ಆಟೋ ಇಲ್ಲೇ ಇದೆ ಅಂದರೆ ಪೋಲೀಸ್ ಗೆ ದೂರು ಕೊಡೋದು ಒಳ್ಳೆಯದು , ಅಕಸ್ಮಾತ್ ಆಟೋ ಯಾವುದೊ ಕಳತನ್ಕ್ಕೊ , ಇಲ್ಲ ಬೇರೆ ಯಾವುದಾದರು ಸಾಮಜೀಕ ದ್ರೋಹ ಕಾರ್ಯಕ್ಕೆ ಬಳಕ್ಕೆ ಆಗಿದರೆ ಕಷ್ಟ, ಬೆಟರ್ ಪೋಲಿಸ್ ಕಂಪ್ಲೇಂಟ್ ಕೊಡೋದು"

"ಸರಿ ಹಾಗೆ ಮಾಡೋಣ ಕಣೋ , ನೀನು ಹೇಳೋದು ಸರಿ , ನೀನು ಅಶೋಕ್ ಹೋಗಿ ಕಂಪ್ಲೇಂಟ್ ಕೊಡಿ"

ಅಶೋಕ್ ಮತ್ತೆ ಹರೀಶ ಹೋಗಿ ಕಂಪ್ಲೇಂಟ್ ಕೊಟ್ಟು ಬಂದರು. ಮಾರನೆಯ ದಿನ ಪೋಲಿಸ್ ಬಂದು ನನ್ನ ಹೇಳಿಕ್ಕೆ ತಗೊಂಡು , ಆಟೋ ನ ಟೈಗರ್ ವಾಹನದ ಸಹಾಯದಿಂದ ತೆಗೆದು ಕೊಂಡು ಹೋದರು. ಅವತ್ತೇ ಸಾಯಂಕಾಲ ಯಾರೋ ಮಧ್ಯ ವಯಸಿನವರು ಆಟೋ ಹುಡುಕಿ ಕೊಂಡು ಬಂದರು. ಅವರು ರಸ್ತೆ ಅಲ್ಲಿ ನಿಂತು ಆಟೋ ಬಗೆ ವಿಚಾರಿಸುತ್ತಾ ಇದರು. ಇದನ ಕೇಳಿ ನಾನು ಅವರಿಗೆ ಪೋಲಿಸ್ ನವರು ಆಟೋ ತೆಗೆದು ಹೊಗಿದರ ಬಗೆ ಹೇಳಿದೆ. ಅದನ ಕೇಳಿದ ಅವರ ಕಣ್ಣು ತೇವ ಆಯಿತು. ನಾನು ಅವರಿಗೆ ಏನು ಆಯಿತು ಅಂತ ಕೇಳಿದೆ , ಅದಕ್ಕೆ

"ತಂಗ್ಯವ , ಏನು ಅಂತ ಹೇಳಲ್ಲಿ ತಾಯಿ , ಆಟೋ ನಂದೆಯ , ಮೊನ್ನೆ ಅದನ ನನ್ನ ಅಣ್ಣನ ಮಗ ತೆಗೆದು ಕೊಂಡು ಹೋಗಿದ , ಇಲ್ಲಿ ತಂದು ನಿಲಿಸಿದಿನಿ ಅಂತ ಹೇಳಿ ಊರಿಗೆ ಹೋದ , ನನ್ನ ಹೆಂಡತಿ ಗೆ ಹುಷಾರು ಇರಲ್ಲಿಲ , ಅದಕ್ಕೆ ಅವಳನ ಆಸ್ಪತ್ರೆ ಗೆ ಕರ್ಕೊಂಡು ಹೋಗಿದೆ , ಇರೋ ಬಾರೋ ದುಡ್ಡೆಲ್ಲ ಅವಳಿಗೆ ಖರ್ಚು ಆಯಿತು , ಆ ಆಟೋ ಸಾಲದಲ್ಲಿ ತೆಗೆದು ಕೊಂಡು ಇರೋದು , ಮೂರು ತಿಂಗಳಿಂದ ಬಡ್ಡಿ ಕಟ್ಟಿಲ , ಮನೆ ಮುಂದೆ ಆಟೋ ನಿಲಿಸಿದರೆ ಏಜನ್ಸಿ ನವರು ತೆಗೆದು ಹೊರಟು ಹೋಗುತ್ತಾರೆ , ಆಟೋ ಬಿಟ್ಟರೆ ದಿನದ ಊಟ ಕೂಡ ಮನೆಲ್ಲಿ ನಡೆಯೋಕ್ಕೆ ಇಲ್ಲ , ಬಡತನಕ್ಕೆ ಮ್ಕಳು ಜಾಸ್ತಿ ಅನ್ನೋ ಹಾಗೆ , ನನ್ನಗೆ ಮನೆ ತುಂಬಾ ಮಕ್ಕಳು , ಅದಕ್ಕೆಯ ಆಟೋ ಇಲ್ಲಿ ನಿಲಿಸಿದೆ , ಮೂರು ದಿನದಿಂದ ಮಕ್ಕಳು ಒಪ್ಪತು ಇದ್ದಾರೆ , ಇವತ್ತನ ಆಟೋ ಓಡಿಸಿ ಬಂದಿದ ದುಡ್ಡಿನಲ್ಲಿ ಮಕ್ಕಳಿಗೆ ಹೊಟ್ಟೆ ತುಂಬಾ ಊಟ ಹಾಕೋಣ ಅಂತ ಬಂದೆ , ಆದರೆ ಇವಾಗ , ಹೆಂಡತಿ ಮಾಂಗಲ್ಯ ನಾದರು ಅಡ ಇಟ್ಟು ಆಟೋ ಬಿಡಿಸಿಕೊಂಡು ಬರಬೇಕು , ತಾಯಿ , ಯಾವ ಸ್ಟೇಷನ್ ಅಂತ ಏನಾದರು ಗೊತ್ತ "

"ಇಲ್ಲ ಸಾರ್"

"ಸರಿ ಬಿಡವ , ನಾನು ಇನ್ನು ಬತ್ತಿನಿ" ಅಂತ ಹೇಳಿ ಆ ವ್ಯಕ್ತಿ ಅಲ್ಲಿಂದ ಹೊರಟು ಹೋದರು. ಅವರ ಹೋದ ಮೇಲೆ ನನ್ನ ಮನಸಿನಲ್ಲಿ ನೂರು ಪ್ರಶ್ನೆ ಗಳು ಮೂಡಿದವು.

ನಾನು ಮಾಡಿದು ಸರಿನ ? , ಅವರ ಊಟ ಕಿತ್ತುಕೊಂಡು ಬಿಟ್ಟೆ ನಾನು ? , ಇಲ್ಲ ಹರೀಶ ಹೇಳಿದು ಸರೀನಾ? , ಈ ಪಾಪ ನನ್ನಗೆ ತಟ್ದೆ ಬಿಡುತ್ತಾ ?, ಇಲ್ಲ ಈ ವ್ಯಕ್ತಿ ಹೇಳಿದು ಎಷ್ಟು ಸತ್ಯ ? , ಅಕಸ್ಮಾತ್ ಹರೀಶ ಹೇಳಿದ ಹಾಗೆ ಆಗಿದಿದ್ದರೆ ನಾನು ಮಾಡಿದು ಸರಿ ಇರುತ್ತಾ ಇತ್ತ ? , ಹೋಗಿ ಆ ವ್ಯಕ್ತಿ ಗೆ ಸಹಾಯ ಮಾಡಲ್ಲ ? , ದುಡ್ಡು ಕೊಟ್ಟು ಅವನ ಕಷ್ಟ ಸ್ವಲ್ಪನಾದರು ಕಡಿಮೆ ಮಾಡಲ ? , ಅಯ್ಯೋ ದೇವರೇ , ತಲೆ ಕೆಟ್ಟು ಹೊಗುತ ಇದೆ , ಏನು ಮಾಡಲ್ಲಿ ?

                              
         ಬರೆದ ಬಡಪಾಯಿ,
                                                ಹರೀಶ್ ಎಸ್ ಕೆ
 

Comments

Submitted by kavinagaraj Sat, 06/28/2014 - 09:09

ಆ ಆಟೋ ಓಡಿಸುತ್ತಿದ್ದ ತರುಣನ ಉಡಾಫೆಯ ವರ್ತನೆ ಇದಕ್ಕೆ ಮೂಲವಾಗಿದೆ.