ಗೊರವನಹಳ್ಳಿ ಶ್ರೀಕ್ಷೇತ್ರ - ಬನ್ನಿರೆಲ್ಲ ತೇರನೆಳೆಯುವ

ಗೊರವನಹಳ್ಳಿ ಶ್ರೀಕ್ಷೇತ್ರ - ಬನ್ನಿರೆಲ್ಲ ತೇರನೆಳೆಯುವ

ಕವನ

ಬನ್ನಿರೆಲ್ಲ  ನಮ್ಮ ಗೊರವನಹಳ್ಳಿಗೆ

ತಾಯಿ ಮಹಾಲಕ್ಷ್ಮಿ ಮಹಾಕ್ಷೇತ್ರಕೆ 

ತನ್ನಿರೆಲ್ಲ ಭಕ್ತಿ ಭಾವದಿ ಹೂವುಗಳ

ಮಿಂದು ಮೊರೆಯುವ ಭಕ್ತಿಕಡಲಲಿ 

 

ಭಾವ ಸಂಗಮ ಜಯಮಂಗಲಿ

ನದಿ ತಟದಿ ಕಂಗೊಳಿಪ ಶ್ರೀಕ್ಷೇತ್ರ

ಸುತ್ತೆಲ್ಲ ಹಸಿರು ಉಸಿರಾದ ನೇಸರ 

ಅಲ್ಲಿ ನೆಲೆಸಿಹಳು ತಾಯಿ ಶ್ರೀಲಕ್ಷ್ಮಿ

 

 ಬನ್ನಿ ನೀವು ಕ್ಷೇತ್ರಕೆ ಸೇರಿ ನಲಿಯುವ

ಸಪ್ತದಿನದಲು ದರುಶನ ಪಡೆಯುತ 

ಕಾಯುವಳು ಅನುದಿನವು ಬಿಡದಲೆ 

ಕೇಳಿದ್ದು ಕರುಣಿಸುತ ಮಹಾಲಕ್ಷ್ಮಿಯು 

 

 ಮನದಲಿ ಅಡಗಿಹ ಕಷ್ಟದುಃಖ 

ನೋವ ಭಾವನೆಲ್ಲ ಅಳಿಸಿ ಹಾಕಿ 

ತಾಯಿ ಬೆಳಕು ಚೆಲ್ಲಿ ತೃಪ್ತಿಯಲಿ 

ಮಾಡುವಳು  ಜೀವನ ಪಾವನ 

 

ನಮ್ಮ ಗೊರವನಹಳ್ಳಿ ಕ್ಷೇತ್ರಕೆ 

ಬನ್ನಿರೈ ಬನ್ನಿರೆಲ್ಲ ಬಂಧುಗಳೇ 

ಬನ್ನಿ ಜೊತೆಯೆ ತೇರನೆಳೆಯುವ

ತಾಯಿ ಲಕುಮಿಯ ಸೇವೆಯಲಿ 

 

-ಬಂದ್ರಳ್ಳಿ ಚಂದ್ರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್