ಗೋಡಂಬಿ ಕೀರು
ಬೇಕಿರುವ ಸಾಮಗ್ರಿ
೧/೨ ಕಪ್ ಗೋಡಂಬಿ, ೧/೨ ಕಪ್ ಬಾದಾಮಿ, ೪ ಕಪ್ ಹಾಲು, ಏಲಕ್ಕಿ ಪುಡಿ ೧/೨ ಚಮಚ, ೩/೪ ಕಪ್ ಸಕ್ಕರೆ, ಕೇಸರಿ ಚಿಟಿಕೆ.
ತಯಾರಿಸುವ ವಿಧಾನ
ಬಾದಾಮಿ, ಗೋಡಂಬಿಯನ್ನು ೪ ಗಂಟೆ ಹಾಲಲ್ಲಿ ನೆನೆಸಿ ರುಬ್ಬಿ. ಪಾತ್ರೆ ಒಲೆಯ ಮೇಲಿಟ್ಟು ಹಾಲು ಹಾಕಿ. ಹಾಲು ಕುದಿಯಲು ಆರಂಭವಾದಾಗ ರುಬ್ಬಿದ ಮಿಶ್ರಣ ಹಾಕಿ, ಸಕ್ಕರೆ ಹಾಕಿ ಕಲಕಿ. ಸಕ್ಕರೆ ಕರಗಿ ಮಿಶ್ರಣ ದಪ್ಪ ಆದಾಗ ಏಲಕ್ಕಿ ಪುಡಿ ಹಾಕಿ ಒಲೆಯಿಂದ ಇಳಿಸಿ. ಈಗ ಗೋಡಂಬಿ ಕೀರು ಸವಿಯಲು ರೆಡಿ.
- ಸಹನಾ ಕಾಂತಬೈಲು, ಮಡಿಕೇರಿ