ಗೋಡೆಗಳು ಮಾತಾಡುತ್ತವೆ!

ಗೋಡೆಗಳು ಮಾತಾಡುತ್ತವೆ!

 

 ಹೌದು ನನ್ನ ಕೋಣೆಯ ಗೋಡೆಗಳಿಗೊಂದು ವಿಶಿಷ್ಟ ಶಕ್ತಿಯಿದೆ. ಕಾಲ್ಪನಿಕ ಪ್ರಭೆಯ ಕತ್ತಲಲ್ಲಿ ಕಂಡರೆ ಬೆಳ್ಳಂಬೆಳಕಿನಲ್ಲಿ ಸೃಜನಶೀಲತೆ ಮೈವೆತ್ತಂತೆ ಕಾಣುತ್ತವೆ. ಯಾವುದೇ ಚಿತ್ತಾರಗಳಿಲ್ಲದ, ಕನ್ನಡಿಯಿಲ್ಲದ ಮೂರು ಗೋಡೆಗಳು ಮತ್ತು ತನ್ನ ಅರ್ಧದಷ್ಟು ಪುಸ್ತಕಗಳನ್ನು ಒಡಲಿನಲ್ಲಿಟ್ಟುಕೊಂಡಿರುವ ಮತ್ತೊಂದು ಗೋಡೆ.
 
ಎಲ್ಲಾ ಕತೆಗಾರರ ಕತೆಗಳಲ್ಲಿ ನಾಯಕನ, ಕಥಾವಸ್ತುವಿನ ವಿಚಾರ, ವಿಶ್ಲೇಷಣೆ ಮಂಥನದ ಭರಾಟೆಯಲ್ಲಿ ಕಳೆದು ಹೋಗುವ ನಿಸ್ತೇಜ ನಿಜರ್ೀವ ವಸ್ತುಗಳಿಗೆ ಜೀವ ತುಂಬಲಾರರು ಆದರೆ ನನ್ನ ಕೋಣೆಯ ಗೋಡೆಗಳ ಮೇಲೆ ನನಗೆ ಸದಾ ಅನುಮಾನ ನಾನು ಇಲ್ಲದ ವೇಳೆಯಲ್ಲಿ ಅವು ಮಾತಾಡುತ್ತವೆ. ನಾನು ಸಾಕಷ್ಠು ಬಾರಿ ವಿಚಲಿತಗೊಂಡೆ, ಭಯಗೊಂಡೆ ವಿಚಿತ್ರ ಕ್ಷುದ್ರ ಶಕ್ತಿಗಳು ಗೋಡೆಗಳಲ್ಲಿ ಆವಾಹನೆಗೊಂಡಿವೆಯೇನೋ ಎಂದು.
 
ನನ್ನ ಭಯದ ನೆರಳು ಕೆಲವೇ ದಿನ ಕಾಡಿತ್ತು. ಯಾಕೆಂದರೇ ಅವು ಗಟ್ಟಿಯಾಗಿ ಮಾತನಾಡುತ್ತಿದ್ದವೇ ವಿನಃ ವಿಚಿತ್ರ ಸದ್ದುಗಳಿಂದ ಧೃತಿಗೆಡಿಸುತ್ತಿರಲಿಲ್ಲ. ಒಮ್ಮೆ ಒಂದು ಗೋಡೆ ಆಡಿದ ಮಾತು ಇಂದಿಗೂ ನನ್ನನ್ನು ದಿಗ್ಮೂಢನನ್ನಾಗಿಸಿತ್ತು. ಅದು ಹೀಗೆ ಅಂದಿತ್ತು, "ಕೆಲವು ಮಾತುಗಳಿಗೆ ಮಾತುಗಳೇ ಅರ್ಥ ನೀಡುತ್ತವೆ. ಕೆಲವು ಮಾತುಗಳಿಗೆ ಸನ್ನಿವೇಶಗಳು ಅರ್ಥ ನೀಡುತ್ತವೆ. ಕೆಲವೊಮ್ಮೆ ಸನ್ನಿವೇಶಗಳೇ ಮಾತುಗಳೂ ಆಗುತ್ತವೆ." 

Comments