ಗೋದಿ ಹಲ್ವಾ

ಗೋದಿ ಹಲ್ವಾ

ತಯಾರಿಸುವ ವಿಧಾನ

ಗೋದಿಯನ್ನು ಹಿಂದಿನ ರಾತ್ರಿಯೇ ನೆನೆಸಿಟ್ಟಿರಬೇಕು. ಬೆಳಿಗ್ಗೆ ಅದನ್ನು ಬಸಿದು ಮಿಕ್ಸಿಯಲ್ಲಿ ಸ್ವಲ್ಪ ನೀರು ಸೇರಿಸಿ ಅದರ ಹಾಲು ತೆಗೆದುಕೊಳ್ಳುವುದು. ಆ ಹಾಲಿನ ಜೊತೆಗೆ ಒಂದು ತೆಂಗಿನ ಕಾಯಿ ಹೋಳಿನ ಹಾಲನ್ನು ತೆಗೆದು ಬೆರೆಸಬೇಕು. ಅದರ ಜೊತೆಗೆ ೧/೨ ಲೇಟರ್ ಹಾಲು ಬೆರೆಸುವುದು. ಬೆಲ್ಲವನ್ನು ಕರಗಿಸಿ ಫಿಲ್ಟರ್ ಮಾಡಿ, ಯಾಲಕ್ಕಿ ಪುಡಿ ಸೇರಿಸಿ ಅದಕ್ಕೆ ಬೆರೆಸುವುದು. ಒಲೆಯ ಮೇಲೆ ಇಟ್ಟು ಕೈಯಾಡುತ್ತಿರಬೇಕು. ಪಾತ್ರೆ ತಳಬಿಟ್ಟು ಮುದ್ದೆಯಾಗಿ ಬರುವಾಗ ಅದನ್ನು ತುಪ್ಪ ಹಚ್ಚಿದ ತಟ್ಟೆಗೆ ಹಾಕಿ ಆರಿದ ನಂತರ ಅದನ್ನು ಬೇಕಾದ ಆಕಾರಕ್ಕೆ ಸ್ಲೈಸ್ ಮಾಡಿ ಹುರಿದ ದ್ರಾಕ್ಷಿ, ಗೊಡಂಬಿ ಹಾಗೂ ಗಸಗಸೆ ಉದುರಿಸುವುದು. ಸೂ: ೧) ತುಂಬಾ ನೀರಾಗಿ ಹಾಲು ತೆಗೆದರೆ ಪ್ರಿಪೇರ್ ಮಾಡುವ ಸಮಯ ದೀರ್ಘವಾಗುವುದು. ೨) ಗಸಿಯಿಲ್ಲದಂತೆ ಮೃದುವಾಗಿ ತೆಗೆದರೆ ಹಲ್ವ ಸ್ಮೂತಾಗಿ ಬರುವುದು. ೩) ಬೆಲ್ಲದಲ್ಲಿ ಕಲ್ಲಿರುವ ಸಾಧ್ಯತೆ ಇದ್ದರೆ ಸ್ವಲ್ಪ ನೀರು ಸೇರಿಸಿ ಕರುಗುತ್ತಲೂ ಫಿಲ್ಟರ್ ಮಾಡಬೇಕು. ೪) ಇದೇ ತಿನಿಸನ್ನು ಗೋದಿಯ ಬದಲು ರಾಗಿ ಬಳಸಿ ಮಾಡಬಹುದು.

ಸಾಂಪ್ರದಾಯಿಕ ತಿನಿಸು

೬ - ೧೦ ಜನ, ರೆಫ್ರಿಜರೇಟರಿನಲ್ಲಿಟ್ಟು ಎರಡು ದಿನ ಬಳಸಬಹುದು

60

ಗೋದಿಯಿಂದ ಮಾಡುವ ಬಹಳ ಮೃದುವಾದ ಸಿಹಿ ತಿನಿಸು.

೧/೨ ಕೆ ಜಿ ಗೋದಿ

ಬೆಲ್ಲ - ೩೦೦ ಗ್ರಾಮ್

ಹಾಲು - ೧/೨ ಲೀಟರ್

ದ್ರಾಕ್ಷಿ, ಗೋಡಂಬಿ ರುಚಿಗೆ ತಕ್ಕಂತೆ

ಗಸಗಸೆ - ೨೫ ಗ್ರಾಮ್

ಯಾಲಕ್ಕಿ - ಏಳೆಂಟು

ತೆಂಗಿನಕಾಯಿ - ಒಂದು ಹೋಳು

ತುಪ್ಪ - ನಾಲ್ಕು ಚಮ್ಮಚ

Comments