ಗೋಧಿ ಹುಡಿ ಉಂಡೆ
ಬೇಕಿರುವ ಸಾಮಗ್ರಿ
ಸಕ್ಕರೆ ಮುಕ್ಕಾಲು ಕಪ್, ಗೋಧಿ ಹುಡಿ ೧ ಕಪ್, ಸ್ವಲ್ಪ ಗೋಡಂಬಿ, ಒಣ ದ್ರಾಕ್ಷಿ, ಬಾದಾಮಿ ಚೂರುಗಳು, ತುಪ್ಪ.
ತಯಾರಿಸುವ ವಿಧಾನ
ಸಕ್ಕರೆಯನ್ನು ನಯವಾಗಿ ಹುಡಿ ಮಾಡಿ. ಗೋಧಿಹುಡಿಯನ್ನು ಘಂ ಎಂದು ಪರಿಮಳ ಬರುವಲ್ಲಿವರೆಗೆ ಹುರಿಯಬೇಕು. ಸ್ವಲ್ಪ ಗೋಡಂಬಿ(ಹುರಿದು) ಒಣದ್ರಾಕ್ಷಿ, ಬಾದಾಮಿಯನ್ನು ಸ್ವಲ್ಪ ತರಿತರಿಯಾಗಿ ಹುಡಿ ಮಾಡಬೇಕು. ಸಕ್ಕರೆ ಪುಡಿಯೊಟ್ಟಿಗೆ ಎಲ್ಲವನ್ನೂ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ, ಹುಡಿಗೆ ಸ್ವಲ್ಪ ಸ್ವಲ್ಪವೇ ತುಪ್ಪ ಸೇರಿಸಿ, ಕೈಗೆ ತುಪ್ಪ ಸವರಿ ಉಂಡೆ ಕಟ್ಟಬೇಕು. ಹತ್ತು ನಿಮಿಷ ಇಟ್ಟು, ನಂತರ ತಿನ್ನಬಹುದು. ತುಂಬಾ ರುಚಿಕರ.
-ರತ್ನಾ ಭಟ್ ತಲಂಜೇರಿ