"ಗೋಧ್ರಾ ಇನ್ನೆಷ್ಟು ದೂರ?" ಕಥಾಸಂಕಲನದ ಬಿಡುಗಡೆ
ಆತ್ಮೀಯರೇ, ನನ್ನ ಹೊಸ ಕಥಾಸಂಕಲನ "ಗೋಧ್ರಾ ಇನ್ನೆಷ್ಟು ದೂರ ಶನಿವಾರ, ಜನವರಿ ೧೯, ೨೦೧೩ರಂದು ಉಡುಪಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ. ಕಾರ್ಯಕ್ರಮದ ವಿವರಗಳು ಇಂತಿವೆ: ಕೃತಿ ಲೋಕಾರ್ಪಣೆ: ಡಾ. ಹೆಚ್. ಮಾಧವ ಭಟ್ (ಪ್ರಾಂಶುಪಾಲರು, ವಿವೇಕಾನಂದ ಕಾಲೇಜು, ಪುತ್ತೂರು) ಕೃತಿ ಅವಲೋಕನ: ಶ್ರೀ ಜಯದೇವ ಪ್ರಸಾದ್ ಮೊಳೆಯಾರ್, ("ಕಾಸು ಕುಡಿಕೆ" ಅಂಕಣಕಾರರು) ಸಮಾರಂಭದ ಅಧ್ಯಕ್ಷತೆ: ಶ್ರೀ ಉಪ್ಪುಂದ ಚಂದ್ರಶೇಖರ ಹೊಳ್ಳ (ಜಿಲ್ಲಾಧ್ಯಕ್ಷರು, ಕರ್ನಾಟಕ ಜಾನಪದ ಪರಿಷತ್ತು) ಸಮಾರಂಭದ ಆಯೋಜಕರು: ಸುಹಾಸಂ, ಉಡುಪಿ ಮತ್ತು ಪುಸ್ತಕಯಾನ, ಮೈಸೂರು ಸಮಯ: ಸಂಜೆ ನಾಲ್ಕು ಘಂಟೆ ದಿನಾಂಕ: ಶನಿವಾರ, ಜನವರಿ ೧೯, ೨೦೧೩ ಸ್ಥಳ: ಹೋಟೆಲ್ ಕಿದಿಯೂರು, ತುದಿಮಾಳಿಗೆ ಸಭಾಂಗಣ ಬಿಡುವು ಮಾಡಿಕೊಂಡು ಬನ್ನಿ. ಒಂದಷ್ಟು ಹೊತ್ತು ಒಟ್ಟಾಗಿ ಕಳೆಯೋಣ.