ಗೋಪಿ ಕಲಿಸಿದ ಪಾಠ
ಗೋಪಿ ಕಲಿಸಿದ ಪಾಠ
ನಾನು ಆಗ ೫ನೇ ತರಗತಿಯಲ್ಲಿ ಕಲಿಯುತ್ತಿದೆ. ನಾನು ಸ್ವಾಭಾವಿಕವಾಗಿ ತುಂಬ ಮಜಾ ಮಾಡುವ ಮನುಷ್ಯ.ನನ್ನ ತರಗತಿಯಲ್ಲಿ ನನ್ನದೊಂದು ದೊಡ್ಡ ಗೆಳೆಯರ ಬಳಗವೇ ಇತ್ತು,ಅದರಲ್ಲಿ ನನಗೆ ತುಂಬ ಕ್ಲೋಸ್ ಇದ್ದ ಗೆಳೆಯರೆಂದರೆ ಶೈಲೇಶ್,ನಾಗರಾಜ್ ಹಾಗು ಒನ್ ಅಂಡ್ ಓನ್ಲಿ "ಗೋಪಿ" ಈ ಕಥೆಯ ಕೇಂದ್ರ ಬಿಂದು ಗೋಪಿ.ಗೋಪಿ ಸ್ವಭಾವತಃ ಹುಡುಗಿಯರ ಸ್ವಭಾವ ಉಳ್ಳವನು,ಅವನ ನಡಿಗೆ,ಅವನ ನಗೆ,ಅವನ ಮಾತು ಥೇಟ್ ಹುಡುಗಿಯೇ.ನಾನು,ಶೈಲೇಶ್ ಹಾಗು ನಾಗರಾಜ್ ಪ್ರತಿದಿನ ಅವನನ್ನು ಗೊಳುಹೊಯ್ಕೊಲ್ಲುಥಿದ್ದೆವು.ಎಷ್ಟು ಪ್ರಯತ್ನಿಸಿದರು ಅವನ ನಡಿಗೆಯನ್ನು ಬದಲಾಯಿಸಲು ನಮ್ಮಿಂದ ಸಾಧ್ಯವಾಗಲಿಲ್ಲ,ಕೊನೆಗೆ ಅದಕ್ಕೆಂದೇ ನಾವು ಮೂವರು ಅನುಸರಿಸಿದ ಮಾರ್ಗ "ದಂಡಂ ದಶಗುಣಂ".ಮೂವರು ಬೆತ್ತ ತಗೊಂಡು ಅವನ ಕಾಲಿಗೆ ಮೆಲ್ಲನೆ ಹೊಡೆದು"ನಡಿ ಸರಿ ನಡಿ"ಎಂದು ಗೊಲಿಕ್ಕುತ್ತಿದ್ದೆವು ಆದರೆ ಏನು ಮಾಡುವುದು ನಮಗಂತು ಅವನ ನಡಿಗೆಯನ್ನು ಬದಲಾಯಿಸಲು ಸಾಧ್ಯವಾಗಲೇ ಇಲ್ಲ,ಆ ಬ್ರಹ್ಮ ಬಂದರು ಅವನ ಸ್ತ್ರಿ ನಡಿಗೆಯನ್ನು ಬದಲಾಯಿಸಲು ಸಾದ್ಯವಿಲ್ಲ ಎಂದುಕೊಂಡು ಸುಮ್ಮನಾದೆವು.
ಹೀಗೆ ಆ ದಿವಸ ಬಹಳ ನಿರಾಸೆಯಿಂದ ಕಳೆದು ಮನೆಗೆ ಹೊರಟೆವು.ಮರುದಿನ ನನಗೆ ಗ್ರಹಚಾರ ಕಾದಿತ್ತ್ಹೆಂದು ನಾನು ಊಹಿಸಿಯೂ ಇರಲಿಲ್ಲ.ನಮ್ಮ ಮೂವರ ಕೈಯಲ್ಲಿ ಪೆಟ್ಟು ತಿಂದ ಗೋಪಿ ಆಲಿಯಾಸ್ ಗೋಪಿಕೃಷ್ಣ ನನಗೊಂದು ಮುಹೂರ್ತ ಇಟ್ಟೇ ಆ ದಿವಸ ಶಾಲೆಗೇ ಬಂದಿದ್ದ.ತುಂಬು ನಗು ಮುಖದಿಂದ ತರಗತಿಗೆ ಪ್ರವೇಶ ಮಾಡಿದ ಗೋಪಿ ನನ್ನ ಬಳಿಗೆ ಬಂದು ನನ್ನಲ್ಲಿ ಪ್ರೀತಿಯಿಂದಲೇ ಮಾತನಾಡಿಸುವುದನ್ನು ಕಂಡು ನನಗೆ ತುಂಬ ಆಶ್ಚರ್ಯವಾಯಿತು ನನ್ನ ಆಶ್ಚರ್ಯಕ್ಕೆ ಕಾರಣವು ಇತು,ನಿನ್ನೆ ನಾವು ಮೂವರು ಬಡಿಗೆಯಲ್ಲಿ ಅಷ್ಟೊಂದು ಬಡೆದು(ನಾವು ಮೆಲ್ಲನೆ ಬಡೆದಿದ್ದೆವು ಯಾಕೆಂದರೆ ಅವನು ನಮ್ಮ ಗೆಳೆಯ ತಾನೆ?)ಅವನನ್ನು ಹಿಂಸಿಸಿದರು ಕೂಡ ಅವನಿಗೆ ನನ್ನ ಮೇಲೆ ಬೇಜರಾಗಲಿಲ್ಲವೇ?ಎಂಬುದೇ ನನ್ನ ಆಶ್ಚರ್ಯಕ್ಕೆ ಕಾರಣ.
ಹೀಗೆ ಬಂದವನೇ ನನ್ನನು ಹುದ್ದೆಶಿಸಿ "ಹೇಯ್ ಮಿಥುನ್ ಇವತ್ತು ನಮ್ಮ ಮನೆಯಲ್ಲ್ಲಿ ಪಾಯಸ ಮಾಡಿದ್ದಾರೆ ನಿಮ್ಮನ್ನು ಮೂವರನ್ನು ಅಮ್ಮ ಬರಲಿಕ್ಕೆ ಹೇಳಿದ್ದಾರೆ"ಎಂದುಬಿಟ್ಟ,ಶೈಲೇಶ್,ನಾಗರಜನಿಗೆ ಅವನ ತಾಯಿಯನ್ನು ಅಷ್ಟು ಪರಿಚವಿಲ್ಲದ ಕಾರಣ ಇಬ್ಬರು ಬರಲು ಒಪ್ಪಲಿಲ್ಲ ಆದರೆ ನನಗೆ ಅವನ ತಾಯಿಯ ಪರಿಚಯ ಸ್ವಲ್ಪಮಟ್ಟಿಗೆ ಇದ್ದ ಕಾರಣ ಮತ್ತು ಸ್ವಲ್ಪ ಪಾಯಸದ ಆಸೆಯಿಂದ ಹೊರಟೇಬಿಟ್ಟೆ.
ಕಟುಕನು ಕುರಿಯನ್ನು ದೇವಿಗೆ ಬಲಿ ಕೊಡುವ ರೀತಿಯಲ್ಲಿ ಗೋಪಿ ನನ್ನನ್ನು ಅವನ ತಾಯಿಯ ಬಳಿಗೆ ಕರೆದುಕೊಂಡು ಹೋದ.ಅಲ್ಲಿಗೆ ನನ್ನ ಗ್ರಹಚಾರದ ಸಮಯ ಹತ್ತಿರ ಬಂದೇಬಿಟ್ಟಿತು ನೋಡಿ ಮನೆಗೆ ಹೋದವನೇ "ಆಂಟಿ ಮತ್ತೆ ವಿಶೇಷ" ಎಂದೇ.
ಆಂಟಿ:ವಿಶೇಷ ತುಂಬ ಇದೆ ಹೇಳುತ್ಹೇನೆ ತಡಿ ಎಂದವರೇ ಅಡಿಗೆ ಕೋಣೆಗೆ ಹೊರಟರು.
ನಾನು:(ಮನದಲ್ಲಿ)ಆಂಟಿ ಅಡಿಗೆ ಕೋಣೆಗೆ ಹೋಗಿದ್ದಾರೆ ಬಹುಷಃ ಪಾಯಸ ತರಲಿಕ್ಕಿರಬೇಕೆಂದು ಎಂದುಕೊಂಡು ಬಾಯಲ್ಲಿ ಜೊಲ್ಲು ಸುರಿಸುತ್ತಾ ಕಾಯುತಿದ್ದೆ.
ಆಂಟಿ:(ಅಡಿಗೆ ಕೊನೆಯಿಂದ ಹೊರಗೆ ಬರುತ್ತ ಕೈಯಲ್ಲಿ ಏನನ್ನೋ ಬಚಿಟ್ಟಿದ್ದರು)ನಿನಗೆ ಸೆಮಿಗೆ ಪಾಯಸ ಇಷ್ಟವೋ ಇಲ್ಲ ಗೋದಿಯ ಪಾಯಸ ಇಷ್ಟವೋ.
ನಾನು:(ಸೊಬಗನಂತೆ ವರ್ತಿಸುತ್ತ)ಯಾವುದಾದರೂ ಹಾಗುತ್ತೆ ಆಂಟಿ(ಒಂದು ಮುಸಿ ನಗೆ)
ಆಂಟಿ:ಓಹೋ ನಿನಗೆ ಯಾವ ಪಾಯಸ ಕೊಟ್ಟರು ಹಾಗಬಹುದು ಹಾಗಾದರೆ ತಗೋ ನಾಗರ ಬೆತ್ತದ ಪಾಯಸ......(ಎಂದವರೇ ಮಹಾ ಮಾರಿಯಂತೆ ಎರಡು ಏಟು ಹೊಡೆದರು)
ಅಷ್ಟೊತ್ತಿಗಾಗಲೇ ನನಗೆ ನಾನು ಮಾಡಿದ ತಪ್ಪಿನ ಅರಿವಾಗಿತ್ತು ಮತ್ತು ಅವತ್ತೆ ನಿಶ್ಚಯ ಮಾಡಿದ್ದೆ ಇನ್ನು ಮುಂದಿಗೆ ಯಾರಿಗೂ ಹಿಂಸೆ ಕೊಡುವುದಿಲ್ಲವೆಂದು.ಮತ್ತೊಬ್ಬರ ತಪ್ಪನ್ನು ಕಂಡು ಹಿಡಿಯುವುದಕ್ಕಿಂತ ಮೊದಲು ತಮ್ಮ ತಪ್ಪನ್ನು ಕಂಡುಕೊಳ್ಳುವುದು ಉತ್ತಮ ಎಂಬುವುದನ್ನು ನನ್ನ ಸ್ನೇಹಿತ ಗೋಪಿಯಿಂದ ಕಲಿತೆ.ಥ್ಯಾಂಕ್ಸ್ ಗೋಪಿ.
Comments
ಉ: ಗೋಪಿ ಕಲಿಸಿದ ಪಾಠ