ಗೌಡಪ್ಪನ ಉರ್ದು ಕಲಿಯುವಿಕೆ...
ಬರಹ
ಸಂಜೆ ಸುಬ್ಬ, ಕಿಸ್ನ, ಸೀನ, ಸೀತು ಕೋಮಲ್ ಎಲ್ರೂ ನಿಂಗನ್ ಚಾ ಅಂಗಡಿ ತಾವ ಕೂತ್ಕೊಂಡು ಆ ನಿಂಗ ಕೊಟ್ಟ ಕಲಗಚ್ಚು ಕುಡ್ಕೊಂಡು ಎಲ್ರಲಾ ನಮ್ ಗೌಡ ನಾಪತ್ತೆ ಆಗ್ಬಿಟ್ಟವನೇ..ಆ ಪುನೀತ್ ಕೈಲಿ ಒದೆ ತಿಂದ ಮ್ಯಾಕೆ ಈ ಕಡೆ ಕಾಣಿಸ್ತಾನೆ ಇಲ್ಲ....ದೂರದಲ್ಲಿ ಯಾವುದೊ ಒಂದು ಬಿಳಿ ಆಕೃತಿ ಕಂಡು ಏ ಓಡ್ರಲಾ ಮೋಹಿನಿ ಬಂದ್ ಬಿಟ್ಟಿದೆ ಊರ್ಗೆ..ಲೇ ನಿಲ್ರಲಾ ನಾನು ಕಣ್ರಲಾ ಗೌಡ ಅಂತಿದ್ರು ಬಡ್ಡೆತಾವು ಓಡ್ತಾನೆ ಇದ್ವು...ಆಮೇಲೆ ವಾಸನೆ ಬಂದ್ ಮ್ಯಾಕೆ ಹೌದು ಕಲಾ ಇದು ನಮ್ ಗೌಡಪ್ಪನೆ ಅಂತ ನಿಂತುಕೊಂಡರು..ರೀ ಏನ್ರಿ ಇದು ನಿಮ್ ಅವತಾರ...ಲೇ ದುಬೈ ಹೋಗ್ತಿದಿವಲ್ಲ ಅದಕ್ಕೆ ಅಲ್ಲಿ ಅದೆಂತದೋ ಸೇಕ್ ಇರ್ತಾರನ್ತಲ್ಲ ಅವ್ರು ಇದೆ ರೀತಿ ಗೆಟಪ್ಪು ಕಲಾ...ರೀ ನಿಮ್ಗೆಲ್ರಿ ಸಿಕ್ತು ಈ ಡ್ರೆಸ್ಸು..ನೋಡ್ಲಾ ಈ ನೈಟಿ ನಮ್ ಹೆಂಡ್ರುದು ಕಲಾ..ತಲೆ ಮ್ಯಾಕೆ ಹಾಕಿರೋ ಈ ಬಟ್ಟೆ ಆ ಸೂಟಿಂಗ್ ಅವ್ರು ನಮ್ ಮನ್ಯಾಕೆ ಮಲ್ಗಿದ್ರಲ್ಲ ಅವಾಗ ಬಿಟ್ಟೋಗಿದ್ರು ಕಲಾ...ಮತ್ತೆ ಆ ತಲೆ ಮ್ಯಾಕೆ ರಿಂಗ್ ಏನ್ರಿ ...ಅದಾ ಮನೇಲಿ ಹಳೆ ಕುಕ್ಕರ್ ದು ರಬ್ಬರ್ ಇತ್ತು ಕಲಾ ಅದು ಕನ್ಲಾ...ರೀ ನೈಟಿ ಒಗೆದು ಎಷ್ಟು ದಿನ ಆಗಿತ್ರಿ...ಯಾಕ್ಲಾ...ಕೊಳೆತು ಹೋಗಿರೋ ಹಸಿ ಮೀನಿನ ವಾಸನೆ ಬರ್ತಾ ಇದೆ ಅದಕ್ಕೆ....ಇನ್ಮೇಲಿಂದ ದುಬೈಗೆ ಹೋಗಿ ಬರೋ ಗಂಟ ಇದೆ ಗೆಟಪ್ಪು ಕಲಾ...
ಸರಿ ಕಲಾ ಈಗ ನೋಡ್ರಲಾ ನಾನು ಉರ್ದು ಮಾತಾಡ್ತೀನಿ...ಸಲಾಂ ಅಲೆಕುಂ..ಏನ್ರಿ ಹಂಗಂದ್ರೆ...ನಮಸ್ಕಾರ ಅಂತ ಕಲಾ...ಏ ನಿಂಗ ತುಮಕೋ ಏಕ ಛಾಯಾ ಲಾವೊರೆ...ಯಾರ್ರಿ ಅದು ಛಾಯ ನಂಗೆ ಗೊತ್ತಿಲ್ಲ ಅಂತು ನಿಂಗ...ಲೇ ನಂಗೆ ಒಂದು ಚಾ ಕೊಡು ಅಂದೇ ಕಲಾ...ಓ ಅಂಗಾ...ಲೇ ನೀವು ಬಿರ್ರನೆ ಕಲೀರಲಾ...ಇಲ್ಲಾಂದ್ರೆ ಬೊ ಕಷ್ಟ ಆಗ್ತದೆ...ಅದೇ ಟೇಮ್ ಗೆ ಅಲ್ಲಿ ಇಸ್ಮಾಯಿಲ್ ದು ಬೀವಿ ಶಂಷಾ ಬೇಗಂ ಬರ್ತಾ ಇತ್ತು...ರೀ ಗೌಡ್ರೆ ನಮ್ಮತ್ರ ಅಲ್ಲ ಅಲ್ಲಿ ನೋಡಿ ಅಲ್ಲಿ ಇಸ್ಮಾಯಿಲ್ ದು ಬೀವಿ ಬರ್ತಾ ಇದೆ ಅವ್ರ ಹತ್ರ ಹೋಗಿ ಉರ್ದು ಮಾತಾಡಿ ಅಂತು ಕೋಮಲ್...ಅಷ್ಟೇನೆನ್ಲಾ ಅಂದು ಹೊಂಟ ಗೌಡ...ಕತ್ಲೆನಾಗೆ ಈ ವಯ್ಯನ್ ಗೆಟಪ್ ನೋಡಿ ಆ ವಮ್ಮ ಬೇಜಾನ್ ಹೆದರ್ಕೊಂತು...
ಆಮ್ಯಾಕೆ ಗೌಡ ಅಂದ್ ಮ್ಯಾಕೆ ಸುಮ್ನಾತು..."ಕ್ಯಾ ಅಂತು ಶಂಷಾ...ಈ ಗೌಡಪ್ಪ ದೇಖೋ ತುಂ ಮೇರೆ ಬೀವಿ ಜೈಸ ...ಮೇ ತುಮಕೋ ಸಲಾಂ ಕೆರೆತವ ಅಂದ್ ಬಿಟ್ಟ...ಇದೇನ್ಲಾ ಕೆರೆತಾವ ಅಂತವ್ನೆ ಅಂದ ಕಿಸ್ನ...ಅಷ್ಟರಲ್ಲಿ ಆ ವಮ್ಮ ಕ್ಯಾ ಮೇ ತೇರ ಬೀವಿ ಜೈಸ ಕ್ಯಾ ಅಂದ್ ಬಿಟ್ಟು ಕೆರ ತಗೊಂಡು ಬೇಜಾನ್ ಕೊಡ್ತು....ಗೌಡಪ್ಪನ್ ಮುಖ ವಿಜಯದಶಮಿ ಗೆ ಒಡೆದ ಅರ್ಧ ಕುಂಬಳಕಾಯಿ ಆದಂಗೆ ಆಗಿತ್ತು...ಹಚ್ಹ್ರಲಾ ಅರಿಸಿನ ಅಂತಿದ್ದಂಗೆ ಅಲ್ಲೇ ನಿಂಗನ ಅಂಗಡಿಲಿ ಅರಿಸಿನ ತಗೊಂಡು ಹಚ್ಚಿದ್ವಿ...
ಅಷ್ಟರಲ್ಲಿ ಇಸ್ಮಯಿಲ್ಲು ಬಂತು...ಕ್ಯಾರೆ ಗೌಡ ಹಮಾರ ಬೀವಿ ತೇರ ಬೀವಿ ಜೈಸ ಕ್ಯಾ ಅಂತ ಅವ್ನು ಒಂದು ಕೊಟ್ಟ...ನಮ್ ಬೀವಿಗೆ ಕೆರೆತಾವ ಕರೀತೀರ ಅಂತ ಇನ್ನೊಂದು ಬಿಟ್ಟ...ಲೇ ನಿಲ್ಸಲಾ ನಾನು ಏನ್ಲಾ ಅಂದೇ ಅಂತಾ ಅಂಗೆ ಹೊಡಿತ ಇದ್ದೀಯ ...ಏನ್ರಿ ಗೌಡ್ರೆ ನನ್ ಹೆಂಡ್ರು ನಿಮಗೆ ಹೆಂಡ್ರು ಇದ್ದಂಗಾ...ಲೇ ನಾನು ಅನ್ಗಲ್ಲ ಕಲಾ ಹೇಳಿದ್ದು...ನಾನು ಹೇಳಿದ್ದು ನೀವು ನನ್ನ ಅತ್ತಿಗೆ ಇದ್ದಂಗೆ ನಿಮಗೆ ನಮಸ್ಕಾರ ಅಂದೇ ಕಲಾ...."ರೀ ಅದು ಆಪ್ ಮೇರೆ ಭಾಬಿ ಜೈಸ...ಮೇ ಆಪಕೋ ಸಲಾಂ ಕರ್ತಾ ಹೂ ಅನ್ಬೇಕು" ಅದೇ ಕಲಾ ನಾನು ಅಂದಿದ್ದು...ರೀ ಅದು ಬೀವಿ ಅಂದ್ರೆ ಹೆಂಡತಿ ಭಾಬಿ ಅಂದ್ರೆ ಅತ್ತಿಗೆ ಅಂದಿದ್ದಕ್ಕೆ ಓ ಹೌದೇನ್ಲಾ...ಸರಿ ಬುಡ್ಲ ಇನ್ ಮ್ಯಾಕೆ ಯಾವ ಹೆಣ್ಣು ಐಕ್ಲು ಹತ್ರನೂ ಉರ್ದು ಮಾತಾಡಕ್ಕಿಲ್ಲ ಅಂದ ಗೌಡ...
ಮೊದಲನೇ ಕಂತು http://sampada.net/article/28600