ಗೌಡಪ್ಪನ ದುಬೈ ಟೂರ್...
ಮೊದಲ ಬಾರಿಗೆ ಕೋಮಲ್ ಅವರ ಕೂಸಾದ ಗೌಡಪ್ಪನ ಬಗ್ಗೆ ಬರೀತಾ ಇದ್ದೀನಿ..ಕೋಮಲ್ ಹಾಗೂ ಮಂಜಣ್ಣನ ಅಷ್ಟು ಹಾಸ್ಯ ಪ್ರಜ್ಞೆ ನನಗಿಲ್ಲ...ತಕ್ಕಮಟ್ಟಿಗೆ ಬರೆದು ಖೊಕ್
ಕೊಡುತ್ತಿದ್ದೇನೆ...ಮುಂದುವರೆಸುವ ಇಷ್ಟ ಇದ್ದರೆ ಯಾರಾದರೂ ಮುಂದುವರಿಸಬಹುದು...ಹಾಗೆ ಸಂಪದಿಗರ ಹೆಸರುಗಳನ್ನೂ ಬಳಸಿದ್ದೇನೆ..ಯಾರಿಗಾದರೂ ತಪ್ಪು
ಎನಿಸಿದಲ್ಲಿ ತೆಗೆದುಬಿದುತ್ತೇನೆ. ದಯವಿಟ್ಟು ತಿಳಿಸಿ
ಏ ಸುಬ್ಬ, ಸೀನ, ಸೀತು, ಕೋಮಲ್,ಕಿಸ್ನ ಇಸ್ಮಾಯಿಲ್ಲು ಎಲ್ರು ಸಾಯಂಕಾಲ ನಿಂಗನ್ ಚಾ ಅಂಗಡಿ ತಾವ ಬರ್ರಲಾ ಅಂದ ಗೌಡಪ್ಪ... ಯಾಕ್ರಿ ಅಂತ ಸುಬ್ಬ ಕೇಳಿದ್ದಕ್ಕೆ
ಏ ಥೂ ಬರ್ರಲಾ ನಿಮ್ ತಾವ ಒಂದು ವಿಸ್ಯ ಮಾತಾಡ್ಬೇಕು ಅಂದ. ಸರಿ ಸಂಜೆ ಎಲ್ರು ಸಂಜೆ ನಿಂಗನ್ ಅಂಗಡಿ ತಾವ ಸೇರಿದ್ರು..ಏ ನಿಂಗ ಟು ಬೈ ಸಿಕ್ಸ್ ಚಾ ಹಾಕಲ
ಅಂದ ಗೌಡಪ್ಪ...ನಿಮ್ ಮಕ್ಕೆ ಚಾ ಚಲ್ಟ ಹುಯ್ಯ ಅನ್ಕೊಂಡು ನಿಂಗ ಎಲ್ರಿಗೂ ಆ ಕಲಗಚ್ಚು ಕೊಟ್ಟ..ಗೌಡ್ರೆ ಈಗ ಹೇಳ್ರಿ ಅದೇನ್ ವಿಸ್ಯ ಅಂತ..
ಲೇ ನೋಡ್ರಲಾ ಹೋದ್ ದಪಾ ನಮ್ ದುಬೈ ಮಂಜಣ್ಣನ ಲೀಡರ್ಸಿಪ್ ನಾಗೆ ಎಲ್ಲ ದೇವಸ್ಥಾನ ದರ್ಸನ ಮಾಡ್ಕೊಂಡು ಬಂದ್ವಿ ಕಲಾ...ಈ ದಪಾ ಎಲ್ರೂ ದುಬೈಗೆ
ಓಗುಮಾ ಅಂತ ಅನ್ಕೊಂಡಿದೀನಿ..ದುಬೈನಾಗೆ ಚಿನ್ನ ಸಾನೆ ಚೀಪ್ ಅಂತೆ ಕಣ್ರಲಾ...ಅಲ್ಲಿ ಹೋಗಿ ನಮ್ ಹೆಂಡ್ರುಗೆ ಒಂದ್ ಕೆ.ಜಿ. ಬಿಸ್ಕತ್ ತಗೊಂಡು ಬರೋಣ ಅಂತಾ..
ಅಂಗೇ ನಮ್ ಮಂಜಣ್ಣನ ಜೊತೆ ದುಬೈ ಎಲ್ಲ ನೋಡ್ಕೊಂಡು ಬರೋಣ ಏನ್ರಲ..ಅಲ್ರೀ ಗೌಡ್ರೆ ಬಿಸ್ಕತ್ ಬೇಕಂದ್ರೆ ನನ್ ಅಂಗಡಿಲೇ ಇಲ್ವಾ ಅಂದ ನಿಂಗ..
ಏ ಥೂ ನಾನ್ ಹೇಳಿದ್ದು ತಿನ್ನೋ ಬಿಸ್ಕತ್ ಅಲ್ಲ ಕಲಾ...ಬಂಗಾರದ ಬಿಸ್ಕತ್ತು...ಏ ಕೋಮಲ್ ಎಷ್ಟಲಾ ಬೇಕಾಗತ್ತೆ ದುಬೈಗೆ ಹೋಗಕ್ಕೆ ಒಬ್ಬಬ್ಬರಿಗೆ ಒಂದೊಂದ್ ಸಾವಿರ
ಇದ್ರೆ ಸಾಕೆನ್ಲ.....ಅದೇನ್ ನಿಮ್ ಮೂರನೇ ಹೆಂಡ್ರು ಹಳ್ಳಿ ಅನ್ಕೊಂಡ್ರ ಸಾನೆ ದುಡ್ಡು ಖರ್ಚಾಗ್ತದೆ ಅಂತು ಕೋಮಲ್. ಅದು ಅಲ್ದೆ ಅಲ್ಲಿಗೆ ಹೋಗಕ್ಕೆ ಪಾಸ್ ಪೋರ್ಟ್
ಇರಬೇಕು ಅಂತು...ಇದೇನಲ ಈಟೊನ್ದೆಲ್ಲ ಬೇಕೆನ್ಲಾ...ಆತು ಬಿಡ್ಲಾ ಹೆಂಗೂ ಯಡೂರಪ್ಪ ಅವ್ರೆ, ನಮ್ ಸಿದ್ದು ಕೂಡ ಅವ್ರೆ ಯಾರ್ಗಾದ್ರು ಒಬ್ರಿಗೆ ಹೇಳಿ ಪಾಸ್ ಪೋರ್ಟ್
ಮಾಡಿಸುವ...ರೀ ಗೌಡ್ರೆ ಅಲ್ಲಿಗೆ ಹೋಗಕ್ಕೆ ದುಡ್ಡು ಯಾರು ನಿಮ್ಮಪ್ಪ ಕೊಡ್ತಾನ..ಏ ನಮ್ಮಪ್ಪನ್ ಹೆಸರು ಯಾಕ್ರಲಾ ನಾನೇ ಎಲ್ರುನು ಕರ್ಕೊಂಡು ಹೊಯ್ತೀನಿ ಕಲಾ ಅಂದ..
ತಕ್ಷಣ ಎಲ್ರು ಮೂರ್ಚೆ ಹೋಗ್ಬಿಟ್ರು...ಅಲ್ಲೇ ನಿಂಗನ ಅಂಗಡಿ ಚಾ ತಗೊಂಡು ಎಲ್ರು ಮಕದ್ ಮೇಲೆ ಹುಯ್ದ ಗೌಡಪ್ಪ..ಏ ಯಾಕ್ರಲ ಅಂದ ಗೌಡ.. ನನ್ ಅಂಗಡಿಲಿ ಚಾ ಕುಡಿದಿರೋ
ಬಾಕಿನೆ ಕೊಟ್ಟಿಲ್ಲ ಇವನ ಮಕ್ಕೆ ಅಂತು ನಿಂಗ.....ನೋಡ್ರಲ ಯಡೂರಪ್ಪನ ಹತ್ರ ಹೋಗಿ ಗ್ರಾಮಾಭಿವ್ರುದ್ದಿಗೆ ಅಂತ ಹೇಳಿ ದುಡ್ಡು ಇಸ್ಕೊಳೋಣ ಅದ್ರನಾಗೆ ಹೋದ್ರೆ ಆತು
ಬರ್ಬೇಕಾದ್ರೆ ದುಡ್ಡು ಸಾಲಿಲ್ಲ ಅಂದ್ರೆ ನಮ್ ಮಂಜಣ್ಣ ಇಲ್ವೆನ್ರಲಾ..ಆ ವಯ್ಯಂಗೆ ೨ ಪೆಗ್ಗು ಎಕ್ಷ್ತ್ರಾ ಬ್ಲಾಕ್ ಲೇಬಲ್ ಹಾಕ್ಸಿ ನಿಶಾಲಿ ಇರ್ಬೇಕಾದ್ರೆ ಆ ವಯ್ಯನ ಹತ್ರನೆ
ಸ್ವಲ್ಪ ದುಡ್ಡು ಇಸ್ಕೊಳೋಣ ಅಂದ..ತಂತಿ ಪಕಡು ಗೌಡಪ್ಪನ ಮಾತು ಕೇಳಿ ಪಿಟ್ಸ್ ಬಂದು ಅಂಗೆ ಕಿಸ್ಕಂಡಿದ್ದ...ಕಿಸ್ನ ಕೈಯಲ್ಲಿದ್ದ ಮಚ್ಚನ್ನು ಕೊಟ್ಟ ಮೇಲೆ ಸರಿ ಹೋದ..
ಲೇ ಕೋಮಲ್ಲು ಅಂಗೆ ನಿಮ್ ಸಂಪದ ಅವರನ್ನು ಕೇಳಲಾ ಯಾರಾದ್ರೂ ಬರ್ತಾರೇನೋ ಅಂತಾ...ಅವ್ರ ಹತ್ರನೂ ಸ್ವಲ್ಪ ದುಡ್ಡು ಇಸ್ಕೊಬೋದು ಕಲಾ...ಉಗೀರಿ ನಿಮ್ಮಕ್ಕೆ
ಅಂತು ಕೋಮಲ್....ನೋಡ್ಲಾ ಸುರೇಶ ಹೆಗ್ಡೆ ಅವ್ರು, ಮಿಲಿಟರಿ ಗೋಪಿನಾಥ್ ಅವ್ರು, ನಾವಡರು ಶರನ್ನವರಾತ್ರಿ ಬ್ಯುಸಿ ಇದ್ದೀನಿ ಅಂದಿದ್ರು ಅವ್ರು ಬರೋ ಹಂಗಿದ್ರೆ ಅವ್ರು.ಗಣೇಶಣ್ಣ
ಆಮ್ಯಾಕೆ ಪ್ರಸನ್ನ, ಜಯಂತ್,ಕುಂಬ್ಳೆ, ಇನ್ನು ಯಾರ್ಯಾರು ಬತ್ತಾರೋ ಕೇಳಲಾ...ಅಂಗೆ ಶಾನಕ್ಕ ಅವಮ್ಮಂಗೂ ಕೇಳಲಾ...ಆದ್ರೆ ಅವಮ್ಮ ಮತ್ತೆ ಸ್ನಾನ ಅಂದೇ ಇದ್ರೆ ಸರಿ.
ಅಲ್ರಿ ಗೌಡ್ರೆ ದುಬೈಗೆ ಹೋದ್ರೆ ಅಲ್ಲಿ ಬರಿ ಉರ್ದು ಮಾತಾಡೋದು ನಾವು ಏನು ಮಾತಾಡೋದು...ಲೇ ನಮ್ ಇಸ್ಮಯಿಲ್ಲು ಇಲ್ವೆನಲಾ..ಲೇ ಇಸ್ಮಯಿಲ್ಲು ಇವತ್ತಿಂದ ಎಲ್ರಿಗೂ
ಉರ್ದು ಹೇಳ್ಕೊಡಕ್ಕೆ ಶುರು ಮಾಡಲಾ..."ಜಾವ್ ಜಿ ಜಿ ..ಮುಜೆ ಕ್ಯಾ ಓ ಹೀಚ್ ಕಾಂ ಹೇ ಕ್ಯಾ..ಬಸ್ ಗೆ ಯಾರು ನಿಮಗೆ ಓಡಿಸ್ತದೆ..ತೀಸ್ ದಿನ್ ಮೇ ಉರ್ದು ಸೀಕೋ ಬುಕ್
ಸಿಗಲ್ಲ ಅದು ತಕೊಂಡು ಬಂದಿ ಓದ್ಕೋಳಿ" ಅಂತು ಇಸ್ಮಾಯಿಲ್ಲು...ನೋಡ್ರಲ ಈಗಲೇ ಆ ಬುಕ್ ತಗೊಂಡು ಬಂದು ಓದಕ್ಕೆ ಸುರು ಮಾಡ್ಕೊಳಿ ಇಲ್ಲ ಅಂದ್ರೆ ಅವಯ್ಯ
ಅದೇ ಮಂಜಣ್ಣ "ಇಲ ಕತು ಮಫಲಿಯ ಹಲಕಲಿಯ " ಅಂತ ಏನೇನೋ ಮಾತಾಡತ್ತೆ....ಸರಿ ನಡೀಲಾ ಕೋಮಲ್ಲು ಆ ಯಡೂರಪ್ಪನ್ ತಾವ ಹೋಗಿ ಅದೇನೋ ಏರ್ಪೋರ್ಟ್
ವಿಸ್ಯ ಮಾತಾಡೋವ...ರೀ ಅದು ಏರ್ಪೋರ್ಟ್ ಅಲ್ಲ ಕಣ್ರೀ ಪಾಸ್ ಪೋರ್ಟ್...ಹ ಅದೇ ಕಲಾ...ಇಬ್ರೂ ಯಡೂರಪ್ಪನ್ ಮನೆಗೆ ಹೋದರು..ಯಡೂರಪ್ಪ ಮತ್ತೆ ವಿಶ್ವಾಸ ಮತ
ಗೆದ್ದಿದ್ದಕ್ಕೆ ಪುಲ್ ಕುಸಿಲಿದ್ರು...ಏನ್ಲ ಗೌಡ ಈ ಕಡೆ...ಏನಿಲ್ಲ ಸಿವ ನೀವು ಮತ್ತೆ ವಿಸ್ವಾಸ ಮತ ಗೆದ್ರಲ್ಲ ಅದಕ್ಕೆ ಸುಭ ಕೋರಿ ಹೋಗೋಣ ಅಂತ ಬಂದೆ...ಅಂಗೆ ನಮ್ ಹಳ್ಳಿ ಅಭಿವೃದ್ದಿಗೆ
ಅಂತ ಒಸಿ ಧನ ಸಹಾಯ ಬೇಕಿತ್ತು ಸಿವ...ಆತು ಬಿಡ್ಲಾ ಕೊಡೋಣ ಅಂತು ಯಡೂರಪ್ಪ...ಸಿವಾ ಅಂಗೆ ಒಂದು ಆರು ಪಾಸ್ ಪೋರ್ಟ್ ಬೇಕಿತ್ತು ಸಿವಾ...ಲೇ ಪಾಸು ಪೋರ್ಟ್ ತೆಗ್ಯಕ್ಕೆ
ಇದೇನು ಸ್ಟುಡಿಯೋ ಏನ್ಲಾ...ಸಿವಾ ಪಾಸು ಪೋರ್ಟ್ ಫೋಟೋ ಅಲ್ಲ ಸಿವಾ ನಾವು ಹಳ್ಳಿಯಿಂದ ದುಬೈಗೆ ಹೋಗೋಣ ಅನ್ತಿದೀವಿ ಸಿವಾ...ಯಾಕ್ಲಾ ದುಬೈಗೆ ...ಲಾಸ್ಟ್ ಟೇಮ್ ನೀವು
"ಅಕ್ಕ" ಸಮ್ಮೇಳನಕ್ಕೆ ಹೋಗಿದ್ರಲ್ಲ ಸಿವಾ...ನಾವು ದುಬೈ ನಲ್ಲಿ "ಅಣ್ಣ" ಸಮ್ಮೇಳನ ಮಾಡೋಣ ಅಂತಿದಿವಿ ಸಿವ ಅಂದ...ಓ ಆತು ಕಲಾ ಒಂದ್ ತಿಂಗಳು ಬಿಟ್ ಬನ್ನಿ ಆಟೋತ್ತಿಗೆ
ರೆಡಿ ಮಾಡೋಣ ಅಂತು ಯಡೂರಪ್ಪ...