ಗೌಡ್ರ ಸೊಸೆಯ `ನೈಸ್' ಶೂಟ್..!

ಗೌಡ್ರ ಸೊಸೆಯ `ನೈಸ್' ಶೂಟ್..!

ಮಾವ ಹೋರಾಡೋ ರಸ್ತೆಯಲ್ಲಿ ಸೊಸೆಯ ನರ್ತನ. ತುಂಬಾ ಬೇರೆ ಥರದ ಸಾಲು ಅನಿಸಬಹುದು. ಇದು ನಿಜ ಕೂಡ. ಮಾವ ಯಾರು ಎಂಬುದು ಹೇಳಬೇಕು. ಅದು ನಮ್ಮ ಮಾಜಿ ಪ್ರಧಾನಿಗಳು ದೇವೇಗೌಡ್ರು. ಸೊಸೆ ಯಾರಪ್ಪ ಅದು ಅಂದುಕೊಳ್ಳೊ ಮೊದಲು ಒಂದು ಗೆಸ್ ಕಾಡುತ್ತದೆ. ಗೌಡರ ಮನೆಯಲ್ಲಿ ಬಣ್ಣ ಹಚ್ಚೋರು ಯಾರು..? ಅದು ಮಿಸ್ಟರ್ ಕುಮಾರ್ ಸ್ವಾಮಿ ಸೆಕೆಂಡ್ ವೈಫ್ ರಾಧಿಕಾರಿಂದ ಸಾಧ್ಯ. ಮೊದಲೇ ಸಿನಿಮಾ ಫೀಲ್ಡಿಂದ ಬಂದಿರೋರು ಅಲ್ಲವೇ...? ಆದ್ರೆ, ಮಾವ ಹೋರಾಡೋ ರಸ್ತೆ ಯಲ್ಲಿ ಸೊಸೆ ನರ್ತನ ಅನ್ನೋ ಕುತೂಹಲ ಸಹಜ...

ಹೌದು ಅಂತ ಹೇಳಬೇಕು. ಯಾಕೆಂದ್ರೆ, ಮಿಸ್ಟರ್ ಅಶೋಕ್ ಖೇಣಿ ನೈಸ್ ರಸ್ತೆಯ ಗಡಬಡ್ ಗೋಟಾಲ ವಿರೋಧಿಸಿ, ರೈತರಿಗಾಗಿ ದೇವೇಗೌಡ್ರು ಹೋರಾಡುತ್ತಿದ್ದಾರೆ. ಇದೇ ರಸ್ತೆಯಲ್ಲಿ ರಾಧಿಕಾ, ಕುಮಾರ ಸ್ವಾಮಿ ದುಡ್ಡಿನಲ್ಲಿ ತೆಗೀತಿರೋ `ಸ್ವೀಟಿ ನನ್ನ ಜೋಡಿ' ಸಿನಿಮಾದ ಶೂಟಿಂಗ್ ನಡೆಸುತ್ತಿದ್ದಾರೆ. ದುಬಾರಿ ವೆಚ್ಚದ ಬೈಕ್ ಗಳು ಚಿತ್ರೀಕರಣದಲ್ಲಿ ಬಳಸಲಾಗಿದೆ. ಮುಂಬೈನಿಂದ ರೇಸ್ ಗಾಡಿ ಹೊಡೆಯೋ ಮಂದಿ ಬಂದಿದ್ದಾರೆ. ಡ್ರಾಗ್  ರೇಸ್ ಮುಖಾಂತರವೇ ಚಿತ್ರದ ನಾಯಕ ಆದಿತ್ಯನ ಪರಿಚಯ ಮಾಡಲಾಗುತ್ತಿದೆ. ಅದಕ್ಕೆ ನೈಸ್ ಅಗಿರೋ ರೋಡ್ ಬೇಕೆ ಬೇಕು. ಊರಲ್ಲಿರೋ ರಸ್ತೆಯನ್ನ ಶೂಟಿಂಗ್ ಗೆ ಬಿಡೋರು ಯಾರು. ಬಿಟ್ಟರೂ ಜನರ ದಟ್ಟನಿ ಇರೋದಿಲ್ಲ ಅಂತ ಹೇಳೋಕೆ ಆಗೋದಿಲ್ಲ. ಆ ಕಾರಣಕ್ಕೆನೇ ನೈಸ್ ಮೊರೆ ಹೋಗಲಾಗಿದೆ.

ಮಾವ ದೇವೇಗೌಡ್ರಿಗೆ ಈ ವಿಷ್ಯ ಗೊತ್ತಿದೆಯೋ ಇಲ್ಲವೋ. ಅಂಜು-ಅಳುಕಿಲ್ಲದೇನೆ ನೈಸ್ ರೋಡ್ ನಲ್ಲಿ ಸ್ವೀಟಿ ಶೂಟಿಂಗ್ ನಡೆಯುತ್ತಿದೆ. ಇವತ್ತು ಆಗಿದ್ದು ಇನ್ನೂ ವಿಶೇಷವಾಗಿತ್ತು. ನಾಯಕನ ಪರಿಚಯದ ದೃಶ್ಯವನ್ನ ನಿರ್ದೇಶಕಿ ವಿಜಯ್ ಲಕ್ಷ್ಮೀ ತೆಗೆಯುತ್ತಿದ್ದರು. ಫೈಟರ್ ಮಾಸ್ಟರ್ ರವಿ ವರ್ಮ ಡ್ರಾಗ್ ರೇಸ್ ಗೆ ಬೇಕಿರೋ ತಾಕತ್ತನ್ನ ಸೀನ್ ನಲ್ಲಿ ತುಂಬುತ್ತಿದ್ದರು.

ಲಂಚ್ ಬ್ರೇಕ್ ಆಗಿ ಒಂದೆರಡು ಗಂಟೆ ಕಳೆದಿರಬಹುದು. ಇನ್ನೊಂದು ಕಡೆ ಫೋಟೋ ಶೂಟ್ ಎಂಬ ಸುದ್ದಿ, ಶೂಟಿಂಗ್ ಸ್ಪಾಟ್ ನಲ್ಲಿ ಕೇಳಿ ಬಂತು. ಅದಾಗಿ ಕೆಲವೇ ನಿಮಿಷ ಗಳಲ್ಲಿ ಆರ್ಟ್ ಡಿಪಾರ್ಮೆಂಟ್ ನ ಹುಡುಗರು ಫೋಟೋ ಶೂಟ್ ಗೆ ತಯಾರಿ ನಡೆಸಿದ್ದರು. ಎಲ್ಲವೂ ರೆಡಿ ಅಂದ್ಮೇಲೆ ಕಾಸ್ಟ್ಲಿ ವೈಟ್  ಕಾರ್ ನಲ್ಲಿ `ಬ್ಲ್ಯಾಕ್ ಅಂಡ್ ಬ್ಲ್ಯಾಕ್ ಟೈಟ್ ಡ್ರೆಸ್' ನಲ್ಲಿ ರಾಧಿಕಾ ಬಂದ್ರು. ಅದೆಲ್ಲೋ ನಿಲ್ಲಿಸಲಾಗಿದ್ದ ಕ್ಯಾರವಾನ್ ನಲ್ಲಿ ಮಗಳು ಕೂಡ ಅಮ್ಮನಿಗಾಗಿ ಕಾಯುತ್ತಿದ್ದಳು..

ಹಾಗೆ ಬಂದ ರಾಧಿಕಾ ಅಮ್ಮನ ಥರ ಕಾಣಲಿಲ್ಲ. ಆರಂಭದಲ್ಲಿ ಬಂದಾಗ  ಇದ್ದ,  ಅದೇ ರಾಧಿಕಾ ಮಾಡ್ರನ್ ಡ್ರೆಸ್ ತೊಟ್ಟು ಬಂದಂತಿತ್ತು. ಅಷ್ಟು ಕರಾರುವಕ್ಕಾಗಿಯೇ ಬಾಡಿನ ಮೆಂಟೇನ್ ಮಾಡಿಕೊಂಡ ರಾಧಿಕಾ, ಕಪ್ಪು ಮತ್ತು ಕಪ್ಪು ಡ್ರೆಸ್ ನಲ್ಲಿ ಚೆಂದಗೆ ಹೊಳೆಯುತ್ತಿದ್ದರು. ಸ್ಟಿಲ್ ಫೋಟೋಗ್ರಾಫರ್ ಮಹೇಂದರ್ ಸಿಂಹ ಪುಟ್ಟ ಕ್ಯಾಮರಾ ಹಿಡಿದುಕೊಂಡು ನೈಸ್ ರೋಡ್ ಮೇಲೆ ಮನಸೋಯಿಚ್ಚೆ ಮಲಗಿಕೊಂಡು, ರಾಧಿಕಾ ಫೋಟೋ ಹಿಡಿದ್ರು. ಅಕ್ಕ-ಪಕ್ಕ ಇದ್ದ  ದುಬಾರಿ ಬೈಕ್ ಗಳು ಓಡದೇನೆ ನಿಂತಲ್ಲಿಯೇ ಲೈಟ್ ಆನ್ ಮಾಡಿಕೊಂಡು ರಾಧಿಕಾ ಸೌಂದರ್ಯಕ್ಕೆ ಮೆರುಗು ಮತ್ತು ಬೆಳಕು ಎರಡನ್ನೂ ನೀಡುತ್ತಿದ್ದವು. ಒಂದು ರೀತಿ ನೈಸ್ ರೋಡ್ ನಲ್ಲಿ ನೈಸ್ ಬ್ಯೂಟಿ ದರುಶನದಂತೆ ಕಂಡ ದೃಶ್ಯ ಕಾವ್ಯವದು.

ಆ ಮೇಲೆ ಈ ಬ್ಯೂಟಿ ಸ್ಪಾಟ್ ಗೆ ಬಂದು ಸೇರಿದವ್ರು ಸಿನಿಮಾ ಹೀರೋ ಆದಿತ್ಯ. ಆಗ ಇಬ್ಬರ ಜೋಡಿ ನಿಜಕ್ಕೂ ಸ್ವೀಟ್ ಜೋಡಿ ಆಗಿಯೇ ಕಂಡಿತು. ಕಪ್ಪು ಬಣ್ಣದ ರೇಸ್ ಡ್ರೆಸ್ ನಲ್ಲಿ ಕಂಗೊಳಿಸಿದ್ರು. ಇದು ಸ್ವೀಟಿಯ ಸ್ವೀಟ್ ಶೂಟ್... ಇಲ್ಲಿ ಬರೆಯಬೇಕು. ಅನುಭವ ಹಂಚಿಕೊಳ್ಳಬೇಕು ಅನಿಸಿತು. ಬರೆದಿದ್ದೇನೆ.

-ರೇವನ್ ಪಿ.ಜೇವೂರ್

Comments

Submitted by kavinagaraj Wed, 12/26/2012 - 10:17

ಈ 'ನೈಸ್' ಟೌನ್ ಶಿಪ್ಪಿಗಾಗಿ ಅನಗತ್ಯ ಭೂಮಿ ಸ್ವಾಧೀನ ಮಾಡಿದ ಆರೋಪದ ಮೇಲೆ ಹಲವರ ಮೇಲೆ ಪ್ರಕರಣ ದಾಖಲಿಸಿರುವ ವಿಷಯ ನಿಮಗೆ ತಿಳಿದಿರಬೇಕು. ಆ ಹಲವರಲ್ಲಿ ಮೊದಲ ಆರೋಪಿ ಆಗಿರುವವರು ಇದೇ 'ಮಾವ'!