ಗೌರವಿಸು ಅನುದಿನವು...

ಗೌರವಿಸು ಅನುದಿನವು...

ಕವನ

ಸರ್ ಎಂದರೇ ಶುಭವು

ಸರ್ ಎಂದರೇ ಕೀರ್ತಿ

ಸರ್ ಎನುತ ಸ್ಪಂದಿಸಿದರೆ ಪ್ರೀತಿ ಒಲವು

ಮೇಡಂ ಎಂದರೇ ಖುಷಿಯು

ಮೇಡಂ ಎಂದರೇ ನಲಿವು

ಮೇಡಂ ಎನುತ ಹೇಳಿದರೆ ಜೀವ ಗೆಲುವು

 

ಅಣ್ಣಾ ಎಂದರೆ ಬಲವು

ಅಣ್ಣಾ ಎಂದರೆ ಸವಿಯು

ಅಣ್ಣಾ ಎನುತ ಸಾಗು ಆಶೀರ್ವಾದದ ಜಯವು

ಅಕ್ಕಾ ಎಂದರೆ ಮಮತೆ

ಅಕ್ಕಾ ಎಂದರೆ ಸಮತೆ

ಅಕ್ಕಾ ಎನುತ ಹೇಳು ಭವವೆಂದೂ ಸೋಲವು

***

ಗಝಲ್

ನಾನು ಭಿಕಾರಿಯಲ್ಲ ಆದರೂ ತಿರುಗುತ್ತಿದ್ದೇನೆ

ನಾನು ಸಂಸಾರಿಯಲ್ಲ ಆದರೂ ತಿರುಗುತ್ತಿದ್ದೇನೆ

 

ನಾನು ವಿವೇಕಿಯಲ್ಲ ಆದರೂ  ತಿರುಗುತ್ತಿದ್ದೇನೆ

ನಾನು ಸೇವಕಿಯಲ್ಲ ಆದರೂ ತಿರುಗುತ್ತಿದ್ದೇನೆ

 

ನಾನು ಸಿಡುಕಿಯಲ್ಲ ಆದರೂ ತಿರುಗುತ್ತಿದ್ದೇನೆ

ನಾನು ದುಂಬಿಯಲ್ಲ ಆದರೂ ತಿರುಗುತ್ತಿದ್ದೇನೆ

 

ನಾನು ಕವಿತೆಯಲ್ಲ ಆದರೂ ತಿರುಗುತ್ತಿದ್ದೇನೆ

ನಾನು ತಿಗಣೆಯಲ್ಲ ಆದರೂ ತಿರುಗುತ್ತಿದ್ದೇನೆ

 

ನಾನು ಬುವಿಯಲ್ಲ ಆದರೂ ತಿರುಗುತ್ತಿದ್ದೇನೆ

ನಾನು ಹುಲಿಯಲ್ಲ ಆದರೂ ತಿರುಗುತ್ತಿದ್ದೇನೆ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್