ಗ್ರಹವೀಕ್ಷಣೆಯಲ್ಲಿ ಆಸಕ್ತಿದಾಯಕವಾದ ತಿಣುಕಾಟಗಳು

ಗ್ರಹವೀಕ್ಷಣೆಯಲ್ಲಿ ಆಸಕ್ತಿದಾಯಕವಾದ ತಿಣುಕಾಟಗಳು

ಬರಹ

ಗ್ರಹವೀಕ್ಷಣೆ ಕೆಲವರಿಗೆ ಆಸಕ್ತಿದಾಯಕ ವಿಷಯ. ಮೊದಲಿಗೆ ಗ್ರಹಗಳನ್ನು ನಕ್ಷತ್ರಗಳನ್ನು ಸರಿಯಾಗಿ ಗುಱುತಿಸುವುದು ಹೇಗೆ? ಗ್ರಹಗಳು ಸೌರವ್ಯೂಹದಲ್ಲೇ ಇರುವುದಱಿಂದ ಅವುಗಳಿಂದ ಬಂದ ಬೆಳಕು ಬಹುಶಃ ತನ್ನ ಅಥವಾ ಭೂಮಿಯ ವಾಯುಮಂಡಲವನ್ನು ಬಿಟ್ಟು ಬೇಱೆ ವಾಯುಮಂಡಲವನ್ನು ಪ್ರವೇಶಿಸುವ ಸಾಧ್ಯತೆ ಕಡಿಮೆಯಿರುವುದಱಿಂದ ಬೆಳಕಿನ ವಕ್ರೀಭವನ ಹಾಗೂ ಅದಱಿಂದಾದ ಬೆಳಕಿನ ವರ್ಣವಿಭಜನೆಗೆ ಅವಕಾಶವಿಲ್ಲದಿರುವುದಱಿಂದ ನಕ್ಷತ್ರಗಳಂತೆ ಮಿನುಗುವುದು ಹಾಗೂ ಬಣ್ಣ ಬದಲಾಯಿಸುವುದು ಸಾಧ್ಯವಿಲ್ಲ. ಹಾಗಾಗಿ ಗ್ರಹಗಳು ಮಿನುಗುವುದಿಲ್ಲ. ಆದರೂ ಬುಧ ಮತ್ತು ಶನಿಯನ್ನು ನಕ್ಷತ್ರವೆಂದು ತಪ್ಪಾಗಿ ಭಾವಿಸುವ ಸಾಧ್ಯತೆಯಿದೆ. ಶನಿ ಮತ್ತು ಬುಧರನ್ನು ಗುಱುತಿಸುವುದು ಒಂದು ತಿಣುಕಾಟ.
ಬುಧ ಸೂರ್ಯನಿಗೆ ಸಮೀಪವಿರುವ ಗ್ರಹವಾದುದಱಿಂದ ಅದನ್ನು ಸೂರ್ಯೋದಯಕ್ಕೆ ಮುನ್ನ ಅಥವಾ ಕೆಲವು ವೇಳೆ ಸೂರ್ಯಾಸ್ತದ ನಂತರ ಒಂದು ಗಂಟೆಗೊಳಗಾಗಿ ಬುಧನನ್ನು ಗುಱುತಿಸುವುದು ಒಂದು ತಿಣುಕಾಟ. ಶುಕ್ರ ಪ್ರಖರಗ್ರಹವಾಗಿರುವುದಱಿಂದ ಸೂರ್ಯನಿನ್ನ್ನೂ ಪಡುವಣ ಅಥವಾ ಮೂಡಣ ದಿಕ್ಕಿನಲ್ಲಿ ಗೋಚರಿಸುತ್ತಿರುವಾಗಲೇ ಗುಱುತಿಸುವುದು ಇನ್ನೊಂದು ತಿಣುಕಾಟ. ಅಮಾವಾಸ್ಯೆಗೆ ಮುನ್ನ ಒಂದೆರಡು ದಿನದಲ್ಲಿ ಪೂರ್ವ ದಿಕ್ಕಿನಲ್ಲಿ ಚಂದ್ರನನ್ನು ಹಾಗೂ ಅಮಾವಾಸ್ಯೆಯ ನಂತರ ಒಂದೆರಡು ದಿನಗಳಲ್ಲಿ ಚಂದ್ರನ ಕಾಣುವ ಭಾಗ ಉಗುರಿನಷ್ಟಿರುವುದಱಿಂದ ಈ ಎರಡೂ ಸಂದರ್ಭಗಳಲ್ಲಿ ಚಂದ್ರನನ್ನು ಗುಱುತಿಸುವುದು ಇನ್ನೊಂದು ತಿಣುಕಾಟ. ಯುರೇನಸ್ ಕೂಡ ಕಣ್ಣಿಗೆ ಕಾಣುತ್ತದಂತೆ (ನಾನಂತೂ ಗುಱುತಿಸಿಲ್ಲ). ಅದನ್ನು ಗುಱುತಿಸುವುದು ಮತ್ತೊಂದು ತಿಣುಕಾಟ. ಆದರೆ ಈ ತಿಣುಕಾಟಗಳೆಲ್ಲ ಆಸಕ್ತಿ ಹೆಚ್ಚಿಸುವ ತಿಣುಕಾಟಗಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet