ಗ್ರಾಮದ ಗಾಥೆ

ಗ್ರಾಮದ ಗಾಥೆ

ಕವನ

ಹಳ್ಳಿ ದೇಶದ ದೆಹಲಿ 

ಸಾರವಡಗಿದೆ ಈ ಮಣ್ಣಲಿ

ನೊಗ ಹೊತ್ತ ರೈತನಲಿ 

ಅಡಗಿದೆ ಬಲ ತೋಳಲಿ.

 

ಮೂಡಣದಿ ರವಿಯ ರಂಗ

ಜೊತೆಯಾಗಿ ದುಡಿವರು ಸಂಗ

ಪಡುವಣದಿ ಕಡಲು ಭೃಂಗ

ಏರಿಳಿಯುವರು ಶರಧಿಯ ಅಂಗ.

 

ಕೂಡಿ ಎಳೆಯಲು ತೇರು

ಗ್ರಾಮದಿ ಸಂಭ್ರಮ ಜೋರು

ಇನ್ನೇಕೆ ಕುಲಗಳ ಕಾರುಬಾರು 

ಬೇಧಗಳ ತೊರೆಯುವ ನೂರು.

 

-ನಿರಂಜನ ಕೇಶವ ನಾಯಕ, ಶಿಕ್ಷಕ, ಮಂಗಳೂರು.

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್