ಘಂಟನಾದದ ಉದ್ದೇಶವೇನು?

ಘಂಟನಾದದ ಉದ್ದೇಶವೇನು?

ಹಿಂದೂ ಸಂಪ್ರದಾಯದಲ್ಲಿ ಗಂಟೆನಾದ ಮಾಡದೆ ಯಾವುದೇ ಪೂಜೆ ಪ್ರಾರಂಭವಾಗುವದಿಲ್ಲ.’ನಾದಶಬ್ದ ಮಯಿಮ್ ಘಂಟಾಮ ಸರ್ವ ವಿಘ್ನನಾ ಪಹಾರಿಣಂ ಪೂಜಯೆದಸ್ತ್ರ ಮಂತ್ರೆಣ ದೇವಷ್ಯ ಪ್ರೀತಿ ಕಾರನಾತ’  ಎಂದು ಘಂಟೆ ತೂಗಿ ಪೂಜೆ ಆರಂಭಿಸಿದರೆ ಪೂಜೆಯ ವೇಳೆ ಬರಬಹುದಾದ ವಿಘ್ನಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ ಹಿಂದೆಲ್ಲ ಋಷಿ ಮುನಿಗಳು ಪೂಜೆ ಯಜ್ಞಗಳು ಮಾಡುವಾಗ ರಾಕ್ಷಸರು ಬಂದು ಅಡ್ಡಿಪಡಿಸುತಿದ್ದರಂತೆ. ಪೂಜೆಯ ಆರಂಭದಲ್ಲಿ ಘಂಟಾನಾದ ಮಾಡಿದರೆ ರಾಕ್ಷಸರು ಆ ಪ್ರದೇಶಕ್ಕೆ ಪ್ರವೇಶ ಮಾಡುವದು ಸಾಧ್ಯವಾಗುತ್ತರಲಿಲ್ಲ. ಘಂಟೆಯೇ ದೇವರು ಎಂಬ ನಂಬಿಕೆ ಹಿಂದೂ ಸಂಪ್ರದಾಯದಲ್ಲಿ ಇದೆ ಘಂಟನಾದ ಮಾಡುವ ಮೂಲಕ ಆ ದೇವರನ್ನು ಜಾಗ್ರತವಾಗಿರಿಸಿದರೆ ಪೂಜೆ ನೀರವಿಘ್ನವಾಗಿ ಮುಗಿಯುವಂತೆ ಆ ಶಕ್ತಿಯೇ ನೋಡಿಕೊಳ್ಳುತ್ತದೆ ಎಂದು ಅರ್ಥ.

ದೇವಸ್ಥಾನ ಗಳ ಜಗುಲಿಯಲ್ಲಿ ಘಂಟೆಗಳನ್ನು ನೇತು ಹಾಕಿರುತ್ತಾರೆ. ದರ್ಶನಕ್ಕೆ ಬರುವವರು ಘಂಟೆ ಬಾರಿಸಿದರೆ ಆ ಪ್ರದೇಶದಲ್ಲಿ ಇರುವ ಋಣಾತ್ಮಕ ಶಕ್ತಿಗಳು ಮಾಯವಾಗಿ ಧನಾತ್ಮಕ ಪ್ರಭಾವಯೊಂದು ನಮ್ಮನ್ನು ಆವರಿಸುತ್ತದೆ ಎಂದು ಹೇಳಲಾಗುತ್ತದೆ. ಗಂಟೆಯನ್ನು ಬಾರಿಸುವುದು ಒಳ್ಳೆಯದು. ಏಕೆಂದರೆ ಗಂಟೆಯೂ ಶಬ್ದ ಅನುರಣಿಸಿದಾಗ ಹುಟ್ಟುವ ಶಬ್ದದ ಅಲೆಗಳು ರೋಗ ಕ್ರಿಮಿಗಳನ್ನು ಕೊಲ್ಲಬಲ್ಲವು. ಶಬ್ದ ತರಂಗಗಳಿಗೆ ಅಪಾರವಾದ ಶಕ್ತಿಯಿದೆ ಇದು ವೈಜ್ಞಾನಿಕವಾಗಿ ರುಜುವಾತು ಆಗಿರುವ ಸತ್ಯ 

ಗಂಟೆ ಬಾರಿಸಿದಾಗ ಬರುವ ಶಬ್ದದಲ್ಲಿ ಓಂಕಾರ ಇರುವುದನ್ನು ಗಮನಿಸಿದ್ದೀರಾ?  ಓಂಕಾರಕ್ಕೆ ನಮ್ಮ ಮನಸ್ಸನ್ನು ಪ್ರಶಾಂತಗೊಳಿಸುವ ಶಕ್ತಿ ಇದೆ. ಘಂಟನಾದದ ಮೂಲಕ ಮನಸ್ಸನ್ನು ಪ್ರಶಾಂತವಾಗಿಸಿಕೊಂಡರೆ ದೇವರನ್ನು ಪ್ರಾರ್ಥಿಸಲು ಬೇಕಾದ ತತ್ಮಯತೆ ಹಾಗೂ ಏಕಾಗ್ರತೆ ಬರುತ್ತದೆ.

ದೇವಸ್ಥಾನದಲ್ಲಿ ಪೂಜೆಯ ವೇಳೆ ಘಂಟನಾದ ಮಾಡುವುದಕ್ಕೆ ಇನ್ನೊಂದು ಕಾರಣವೆಂದರೆ, ಪೂಜೆಯ ವೇಳೆಯಾಯಿತು ಎಲ್ಲರೂ ಬನ್ನಿ ಎಂದು ಭಕ್ತರನ್ನು ಕರೆಯುವುದು. ವಿವಿಧ ಉದ್ದೇಶಗಳಿಗಾಗಿ (ಸಮಯ, ಪೂಜೆ, ಮರಣ, ತುರ್ತು ಪರಿಸ್ಥಿತಿ ಇತ್ಯಾದಿ) ಚರ್ಚ್ ಗಳಲ್ಲೂ ಗಂಟೆಯನ್ನು ಬಾರಿಸುತ್ತಾರೆ. ಹಿತ್ತಾಳೆ ಅಥವಾ ಕಂಚಿನಿಂದ ತಯಾರಿಸಿದ ಒಳ್ಳೆಯ ಗಂಟೆಯಿಂದ ಬರುವ ಶಬ್ದ ನಿಜಕ್ಕೂ ಪವಿತ್ರ ಶಬ್ದವೇ ಆಗಿರುತ್ತದೆ ಆ ಶಬ್ದಕ್ಕೆ ನೆಗೆಟಿವ್ ಎನರ್ಜಿಯನ್ನು ದೂರಮಾಡಿ ಪಾಸಿಟಿವ್ ಎನರ್ಜಿಯನ್ನು ಸೆಳೆಯುವ  ಶಕ್ತಿ ಇದೆ ಎಂದು ಹೇಳಲಾಗುತ್ತದೆ.

(ಸಂಗ್ರಹ ಬರಹ)