ಚಂಚಲ ಮನದ ದೊರೆ
ಬರಹ
ಕಡಿವಾಣವಿಲ್ಲದ ಕುದುರೆ
ಏರಿ ಬಂದ ನೋಡಿ
ಚಂಚಲ ಮನದ ದೊರೆ
ಮಾಡುವ ಏನ ಮೋಡಿ
ಚಂಗ ಚಂಗನೆ ಎಗರುವನೀತ
ಸಾವಿರ ಸುಳ್ಳು ಹೇಳುವನೀತ
ಸುಮ್ಮ ಸುಮ್ಮನೆ ನಗುತಿರುವ
ಚಕು ಬುಕು ರೈಲು ಬಿಡುತಿರುವ
ಸೂಟು ಬೂಟು ದರಿಸಿರುವ
ಕಣ್ಣಿಗೆ ಕನ್ನಡಕ ಇಟ್ಟಿರುವ
ಮರಳು ಮಾಡುವ ತಂತ್ರಗಾರ
ಇರುವನಿಲ್ಲಿ ಬಲು ಎಚ್ಚರ