ಚಂಡ ಚಿತ್ರದ ಬಗ್ಗೆ ಒಂದೆರಡು ಮಾತುಗಳು- ರಘೋತ್ತಮ್ ಕೊಪ್ಪರ

ಚಂಡ ಚಿತ್ರದ ಬಗ್ಗೆ ಒಂದೆರಡು ಮಾತುಗಳು- ರಘೋತ್ತಮ್ ಕೊಪ್ಪರ

ಬರಹ

ಚಂಡ ಚಿತ್ರದ ಬಗ್ಗೆ ಒಂದೆರಡು ಮಾತುಗಳು- ರಘೋತ್ತಮ್ ಕೊಪ್ಪರ

ಎಸ್. ನಾರಾಯಣ್ ಅವರು ಚಿತ್ರವನ್ನು ಚೆನ್ನಾಗಿ ಮಾಡಿದ್ದಾರೆ. ಚಿತ್ರಕಥೆ, ಸಂಭಾಷಣೆ ಎಲ್ಲ ಚೆನ್ನಾಗಿ ಮೂಡಿಬಂದಿದೆ. ಆದರೆ ದುನಿಯಾ ಚಿತ್ರದ ಛಾಪು ಇಲ್ಲಿದೆ. ದುನಿಯಾ ಚಿತ್ರದ ಬಂಡೆ ಒಡೆಯುವ ಹುಡುಗ ಇಲ್ಲಿ ಮೀನು ಹಿಡಿಯುವವನಾಗಿದ್ದಾನೆ. ಎಲ್ಲ ಫೈಟ್ ಗಳು ಚೆನ್ನಾಗಿವೆ. ನಾಯಕಿಯೂ ಇನ್ನೂ ಸ್ವಲ್ಪ ಚೆನ್ನಾಗಿ ಅಭಿನಯಿಸಬಹುದಿತ್ತೇನೊ ಅನ್ನಿಸುತ್ತೆ. ಕೋಮಲ್ ಮಾತ್ರ ಎಂದಿನಂತೆ ಒಳ್ಳೆಯ ಅಭಿನಯ ನೀಡಿದ್ದಾರೆ. ವಿಜಯ್ ಧ್ವನಿ ಮಾತ್ರ ಇಲ್ಲದಿರುವುದು ಚಿತ್ರದಲ್ಲಿ ಮೈನಸ್ ಪಾಯಿಂಟ್. ಆದರೂ ಕಂಠದಾನ ಕಲಾವಿದರಾದ ಸುದರ್ಶನ್, ವಿಜಯ್ ತರಹನೇ ಮಾತಾಡಿದ್ದಾರೆ. ಹಿನ್ನಲೆ ಸಂಗೀತವೂ ಮನಮುಟ್ಟುವಂತಿದೆ. ಕೊನೆಯ ಹಾಡಂತೂ ಗುನುಗುನಿಸುವಂತಿದೆ. ಕ್ಯಾಮೆರಾ ಬಗ್ಗೆ ಎರಡು ಮಾತಿಲ್ಲ. ಮೊದಲಾರ್ಧದಲ್ಲಿ ಚಿತ್ರಕಥೆ ನಿಧಾನವಾಗಿ ತೆವಳುತ್ತದೆ. ಬೇರೆ ಪಾತ್ರಗಳಿಗೆ ಹೆಚ್ಚು ಮಹತ್ವ ಕೊಟ್ಟಿಲ್ಲವಾದರೂ ಎಲ್ಲರೂ ಚೆನ್ನಾಗಿ ಅಭಿನಯಿಸಿದ್ದಾರೆ. ಸಂಭಾಷಣೆಯಲ್ಲಿ ಉಪೇಂದ್ರನ ಛಾಪು ಅಲ್ಲಲ್ಲಿ ಕಾಣುತ್ತದೆ. ಮುಕ್ತಾಯ ಕೂಡಾ ಚೆನ್ನಾಗಿದೆ. ಒಮ್ಮೆ ನೋಡಿ ಬನ್ನಿ ಚಂಡನ ಆರ್ಭಟವನ್ನು.