ಚಂದನ ಮತ್ತು ಸಾವು

ಚಂದನ ಮತ್ತು ಸಾವು

ಬರಹ

ನಾನಾಗ ಒಂಬತ್ತನೆ ಇಯತ್ತಿನಲ್ಲಿದ್ದೆ, (ಆಗ ದೇಹ ಬೆಳ್ದಿತ್ತಷ್ಟೆ ಬುದ್ದಿ ಬೆಳ್ದಿರ್ಲಿಲ್ಲ ಅಂತ ಈಗನ್ಸುತ್ತೆ.) ಚಂದನ ಅಂತ ಒಬ್ಬಳು ಹೊಸ ಹುಡುಗಿ ನಮ್ಮ ಶಾಲೆಗೆ ನಮ್ಮ ವಿಭಾಗಕ್ಕೆ ಸೇರಿದಳು ನಾವೆಲ್ಲ ಬೇಗ ಸ್ನೇಹಿತರಾದೆವು..........ಆದರೆ ಅವಳ ಸ್ನೇಹಿತರ ಗುಂಪು ಮಾತು ಕಥೆ ಬೇರೆಯೆ ಆಗಿತ್ತು ಅವಳು ಕ್ರಿಶ್ಚಿಯನ್ ಪಂಗಡಕ್ಕೆ ಸೇರಿದವಳಾಗಿದ್ದಳು............ಆದರೆ ಎಲ್ಲರೊಂದಿಗು ಚೆನ್ನಾಗಿ ಬೆರೆಯುತಿದ್ದಳು....... ಅವಳಿಗೆ ತಾಯಿ ಇರಲಿಲ್ಲ ತಂದೆ ಮತ್ತು ಇಬ್ಬರು ಅಕ್ಕಂದಿರಿದ್ದರು ಮಾತ್ರ ಇರುವರೆಂದು ಅವರಿವರಿಂದ ತಿಳಿದಿತ್ತು . ಅಯ್ಯೋ ಪಾಪ ಎಂದು ಲೊಚಗುಟ್ಟಿದ್ದೆವು.........ನಮಗೆ ಆಂಗ್ಲ ಮಾಧ್ಯಮ ತೆಗೆದುಕೊಳ್ಳುತಿದ್ದ ಗುರುಗಳಿಗೆ ಅವರ ತಂದೆ ಪರಿಚಯವಿತ್ತಂತೆ ಅವರೆ ಒಂದು ಸಾರಿ ಪಾಠದ ನಡುವೆ ಚಂದನಳಿಗೆ ಓದಿನ ಬಗ್ಗೆ ಹೇಳುವಾಗ ( ಚಂದನ ಓದಿನಲ್ಲಿ ಅಷ್ಟೊಂದು ಬುದ್ದಿವಂತಳಾಗಿರಲಿಲ್ಲ) ಅವರ ತಂದೆ ಮತ್ತು ಅಕ್ಕಂದಿರು ಎಷ್ಟು ಬುದ್ದಿವಂತರು ನೀನು ಮಾತ್ರ ಅವರಿಗೆ ತಕ್ಕವಳಲ್ಲ ನಿಮ್ಮ ತಂದೆ ತಮ್ಮ ಮಕ್ಕಳಿಗೆ ಹೆಸರನ್ನು ಕೂಡ A( ಅನಿತ) B (ಬೀನ)C (ಚಂದನ) ಪ್ರಕಾರವೆ ಬರುವಂತೆ ಇಟ್ಟಿದ್ದರು.........ಹಾಗೆ ಹೀಗೆ ಎಂದು ಕೊರೆದಿದ್ದರು.........ಅದು ಮಾಮೂಲೆ ಬಿಡಿ ಈ ತರ ಮಂಗಳಾರತಿಗಳು ಎಲ್ಲರಿಗು ಅವಾಗವಾಗ ಆಗುತಿತ್ತು ( ನನಿಗು ಒಂದ್ಸಾರಿ ಆಗಿದೆ ಹ್ಹಿ ಹ್ಹೀ..)ಆದ್ರೆ ವಿಷಯ್ ಇದಲ್ಲ , ನಮ್ಮ ಕಿವಿಗೆ ಬಿದ್ದ ಉಹಾ ಪೋಹಗಳ ಪ್ರಕಾರ ಅವಳಿಗೆ ಗಂಡು ಮಕ್ಕಳ ಸ್ನೇಹವು ಇತ್ತೆಂದು...... ಅವರೆಲ್ಲ ಅವಳ ಮನೆಗು ಬರುತಾರೆಂದು ಹೀಗೆ ಎನೇನೊ............ಅಂತೆ ಕಂತೆಗಳು ಬೇಕಾದಷ್ತಿದ್ದವು.....ಹೀಗಿರುವಾಗ ಒಂದು ಬುದುವಾರ ಮಾಮೊಲಿನಂತೆ ನಾವೆಲ್ಲ ಶಾಲೆಗೆ ಬಂದೆವು ಆಗಲೆ ಶಾಲೆಯಲ್ಲಿ ಚಂದನ ಆತ್ಮಹತ್ಯೆ ಮಾಡೊಂಡಿದಾಳಂತೆ ಎಂದು ಗುಸು ಗುಸು ಪಿಸು ಪಿಸು ಶುರುವಾಗಿತ್ತು. ನಾವೆಲ್ಲ ನಮ್ಮ ಮನಸ್ಸಿನಲ್ಲಿರುವ ಕನಿಕರವನ್ನೆಲ್ಲ ಮುಖದಲ್ಲಿ ತಂದು ಕೊಂಡು ಅಯ್ಯೋ ಏನಾಯ್ತಂತೆ ಪಾಪ ಪಾಪ ಎಂದು ಮರುಗಿದ್ದೆ ಮರುಗಿದ್ದು.........ಶಾಲೆಗೆ ರಜೆಯನ್ನು ಘೋಷಿಸಿದರು...(.ಮನದ ಮೊಲೆಯಲ್ಲಿ ಇವತ್ತು ಶಾಲೆ ಇಲ್ಲ ಎಂದು ಮನಸ್ಸು ಕುಣಿದಾಡುತಿತ್ತು).......ಅವಳ ಬಾಡಿ ನಂಜಪ್ಪ ಆಸ್ಪತ್ರೆಯಲ್ಲಿದಿಯಂತೆ ,,.........ಬಾಡಿನ ಪೋಸ್ಟ್ ಮಾರ್ಟಮ್ಗೆ ದೊಡ್ಡಾಸ್ಪತ್ರೆಗೆ ( ಗವರ್ನಮೆಂಟು ಆಸ್ಪತ್ರೆ) ತಗೊಂಡೊಕ್ತಾರಂತೆ ಇವಾಗ ಬೇಕಾದ್ರೆ ಹೋಗಿ ನೋಡ್ಬೋದಂತೆ. ಹೀಗೆ ಏನೀನೊ..ಸರಿ ನಾವೆಲ್ಲರು ಅವಳ ಬಾಡಿಯನ್ನು ನೋಡಲು ಹೋದೆವು.........ಅದನ್ನು ನೋಡಿದ್ದು ಆಯ್ತು , ಅವಳ ಬಗ್ಗೆ ಇಲ್ಲ ಸಲ್ಲದ ಕಥೆಗಳನ್ನು ಕೇಳಿದ್ದು ಆಯ್ತು...........
ಆದರೆ ಇವತ್ತಿಗು ನನಿಗೆ ಅವಾಗವಾಗ ನಾ ನೋಡಿದ ಅವಳ ದೇಹ ಕಣ್ಮೊಂದೆ ಬರುತ್ತೆ ಅವಳು ಕಟ್ಟಿದ ಎರ‍ಡು ಜಡೆ ಅದಕ್ಕೆ ಹಾಕಿದ್ದ ಶಾಲೆಯ ಬಿಳಿ ಟೇಪು , ಅವಳು ತೊಟ್ಟಿದ್ದ ಪ್ರಾಕ್ ..ಮಲಗಿದ್ದಳೇನೊ ಮತ್ತೆ ಎದ್ದು ಬರುವಳೇನೊ ಎನ್ನು ವಂತಿದ್ದ ಅವಳ ಮುಖ ಹಾಗೆ ನೆನಪಿದೆ. ಅವಳು ಮಂಗಳವಾರ ಶಾಲೆಯಿಂದ ಹಿಂದಿರುಗಿದ ಮೇಲೆ ತನ್ನ ಶಾಲವಸ್ತ್ರವನ್ನು ಬದಲಾಯಿಸಿದ್ದಾಳೆ.......ತದ ನಂತರ ಮನೆಯಲ್ಲಿ ನಡೆದ ಕೆಲವು ಘಟನೆಗಳಿಂದ ಮನನೊಂದ ಅವಳು ಗುಲಾಬಿ ಗಿಡಗಳಿಗೆ ಹೊಡೆಯುವ ಔಷಧಿಯನ್ನು ಸೇವಿಸಿ ಆತ್ಮಹತ್ಯೆ ಕೈಗೊಂಡಳೆಂದು..........ಕಥೆ....ಆ ಘಟನೆ ನೆನೆಪಿಗೆ ಬಂದಾಗಲೆಲ್ಲ ನನಗೆ ಅರಿಯದೆ ನನ್ನ ಕಣ್ಣಂಚು ಒದ್ದೆಯಾಗುತ್ತದೆ..........
ಆದರೆ ನನ್ನ ಚಿಂತನೆ ಮತ್ತು ಪ್ರಶ್ನೆ? ..............ಕಾರಣ ಏನೆ ಇರ್ಬೊದು ಅಂದು ಆ ಪುಟ್ಟ ಹುಡುಗಿ ಸಾವನ್ನು ಬಯಸಿ ಬರಮಾಡಿಕೊಡಳು ಅಂದ್ರೆ ಅವಳ ಮನಸ್ಸು ಎಷ್ಟು ನೊಂದಿರ ಬೇಕು.ಅವಳ ಸುತ್ತ ಮುತ್ತ ಇರುವ ಜನ ಅವಳ ಸಾವಿಗೆ ಯಾವ ರೀತಿ ಕಾರಣರಾದರು.. ಅವಳ ತಂದೆ ಅವಳಿಗೆ ಸಾವನ್ನು ನೆನೆಯುವಂತೆ ಯಾಕೆ ಅವಕಾಶ ಮಾಡಿಕೊಟ್ಟರು.....ಅಕ್ಕಂದಿರು ಒಂದು ರೀತಿ ತಾಯಿಯಂತೆಯೆ ಅಲ್ವೆ ಅವರಿಗೆ ಇವಳ ಪರಿಸ್ಥಿತಿ,ನೋವು ಅರ್ಥ ಆಗ್ಲಿಲ್ವ........ಅಥವ ಸಾವು ಅವಳ ಅಂದಿನ ಪರಿಸ್ಥಿಗೆ ಪರಿಹಾರವಾಯ್ತ....ಸಾವು ಅವಳಿಗೆ ಅಷ್ಟೊಂದು ಸುಲುಭ ಆಯ್ತ.............ಇವೆಲ್ಲ ಪ್ರಶ್ನೆಗಳು ನನ್ನಲ್ಲಿ ಪ್ರಶ್ನೆ ಗಳಾಗಿಯೆ ಉಳಿದಿವೆ.......ಅವಳ ನಗು ಮುಖ ಮಾತ್ರ ಕಣ್ಮೊಂದೆ ಆಗಾಗ ತೇಲಿ ಬರುತ್ತದೆ.

" ಆ ದೇಹದಿಂದ ದೂರವಾದೆ ಏಕೆ ಆತ್ಮವೆ ಆ ಸಾವು ನ್ಯಾಯವೆ".....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet