ಚಂದಿರನೇತಕೆ ಓಡಿದ!

ಚಂದಿರನೇತಕೆ ಓಡಿದ!

ಕವನ

ಆಗಾಗ ಮೋಡದ ಮರೆಯಿಂದ ಇಣುಕಿಣುಕಿ ನೋಡುವನು..
ಕತ್ತಲರಾಶಿಯಲಿ ತನ್ನವಳು ಎಲ್ಲಾದರೂ ಕಾಣುವಳೋ ಎಂದು???

ಕೆರೆಯಂಚಿನಲಿ ನಿಂದು, ಮಿಂದು ಮಡಿಯುಟ್ಟುಂಡು..
ಕವಳದ ರಸಕೆಂಪನ್ನು ತುಟಿಯಂಚಿನಲಿ ಮೆದ್ದು
ನಕ್ಷತ್ರಗಳ ಪಲ್ಲಂಗವನೇತಂದು....!
ಆಗಾಗ ಮೋಡದ ಮರೆಯಿಂದ ಇಣುಕಿಣುಕಿ ನೋಡುವನು..
ಕತ್ತಲರಾಶಿಯಲಿ ತನ್ನವಳು ಎಲ್ಲಾದರೂ ಕಾಣುವಳೋ ಎಂದು???

ಕಣ್ಣು ತೂಕಡಿಸದಿರಲೆಂದು.. ಆ ಕಣ್ಣಿನಲೇ ತನ್ನವಳಂದವ ತಂದು..
ಅಂದೂ.. ಇಂದೂ... ಎಂದೆಂದೂ.. ನಾ ಕಾದಿಹೆನೆಂದು...
ಅವಳ ಮನದೊಳಗೆ ತಾನಿಹೆನೋ ಎಂದು...!!?
ಆಗಾಗ ಮೋಡದ ಮರೆಯಿಂದ ಇಣುಕಿಣುಕಿ ನೋಡುವನು..
ಕತ್ತಲರಾಶಿಯಲಿ ತನ್ನವಳು ಎಲ್ಲಾದರೂ ಕಾಣುವಳೋ ಎಂದು???

ಕಾದು-ಕಾದು... ಕರಗಿ... ಸೊರಗಿ.... ಕತ್ತಲಕೂಪದಲ್ಲಡಗಿಂದು...
ಅವಳ ಕಾಲ್ಗೆಜ್ಜೆಯ ದನಿಯಕೇಳಿ... ತಲೆ ತೂಗುವೆನೆಂದು..
ತನ್ನ ಶ್ವೇತವನೇ.. ಕಳಿಸಿ, ತರಿಸಲೆಂದು!!
ಆಗಾಗ ಮೋಡದ ಮರೆಯಿಂದ ಇಣುಕಿಣುಕಿ ನೋಡುವನು..
ಕತ್ತಲರಾಶಿಯಲಿ ತನ್ನವಳು ಎಲ್ಲಾದರೂ ಕಾಣುವಳೋ ಎಂದು???

ಆತನಿಗೂ ಗೊತ್ತವಳು.. ರವಿಯ ಸಂಗಾತಿಯಾಗಿಹಳೆಂದು....
ಅವಳೇ... ಅವನಾಗಿ ಹಗಲನ್ನು ಬೆಳಗಿಸುವಳೆಂದು!!
ಆದರೂ.. ನೋಡುವನು.. ಅವಳೆಡೆಗೆ ಆಗಾಗ...
ಅವಳ ಏಕತಾನದ ದೃಷ್ಟಿತನ್ನ ಮೇಲೆ ಬಿದ್ದು... ತಾ ಬೆಳಗಲೆಂದು..
ಕತ್ತಲನ್ನಾ ಓಡಿಸೆಲೆಂದು..... ನಿಶಾಳ ಮನ ತಣಿಸಲೆಂದು!!!