ಚಂದಿರನ ಪಯಣ
ಕವನ
ಕೊರಗಿ ಕೊರಗಿ ಮನದೆ ಶಶಿಯು
ಸೊರಗಿ ಸೊರಗಿ ಕೊಂಚ ಕೊಂಚ
ಕರಗಿ ಮುಗಿದು ಕೊನೆಯಲೊಮ್ಮೆ ಶೂನ್ಯ ತಲಪಿದ
ಮರುಗಿದಂಥ ಚುಕ್ಕಿ ತಾರೆ
ಕರೆದು ಶಶಿಯ ನೋವ ಕಳೆಯೆ
ಮೆರೆಯೆ ಮತ್ತೆ ಗುಂಡಗಾದ ಬೆಳಕು ಚೆಲ್ಲಿದ
ಇರುಳ ಲಾಂದ್ರ ಚುಕ್ಕಿ ಚಂದ್ರ
ಮರಳೆ ತನ್ನ ಕಾರ್ಯವೆಸಗೆ
ಧರಣಿಯಲ್ಲಿ ಮತ್ತೆ ಬಂತು ಸೆಳೆವ ಹುಣ್ಣಿಮೆ
ಮರೆಯನೇನು ಹಳೆಯ ಚಾಳಿ
ಕೊರಗಿನಲ್ಲಿ ಸವೆಯತೊಡಗಿ
ಕರಗಿ ಶೂನ್ಯವಾಗೊ ಚಟದ ಪುನರಾವರ್ತನೆ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಅಂತರ್ಜಾಲ
ಚಿತ್ರ್
