ಚಟುವಟಿಕೆ

ಚಟುವಟಿಕೆ

ನಂಗೊತ್ತು. ಇಲ್ಲಿ ಬರೆದದ್ದನ್ನೆಲ್ಲಾ ಅನುಕರಣೆ ಮಾಡಲು ಆಗುವದಿಲ್ಲ. ಆದರೆ ಕೆಲವೊಂದು ವಿಷಯವನ್ನು ಹೇಳಲೇ ಬೇಕು. ಅನುಕರಣೆ ಮಾಡಲೇಬೇಕು.



೧. ದಯವಿಟ್ಟು ನಿಮ್ಮ ಮನೆಯ ಕಿಟಕಿಯಲ್ಲಿ ಒಂದು ಚಿಕ್ಕ ಪಾತ್ರೆ ಇಟ್ಟು ಅದರಲ್ಲಿ ನೀರು ಹಾಕಿ ಇಡಿ. ಪ್ರತಿನಿತ್ಯವೂ ನೀರನ್ನು ಬದಲಾಯಿಸಿ. ಕೇವಲ ಒಂದು ನಿಮಿಷದ ಕೆಲಸ. ನಿಮ್ಮ ಈ ಒಂದು ನಿಮಿಷ ಕೆಲವು ಪಕ್ಷಿಗಳ ಜೀವ ಉಳಿಸಲು ಕಾರಣವಾಗಬಹುದು. ಏಕೆಂದರೆ, ನಂಗೆ ತಿಳಿದ ವರದಿಯ ಪ್ರಕಾರ ಹಲವಾರು ಹಕ್ಕಿಗಳು ಈ ಉರಿ ಬಿಸಿಲಿನಲ್ಲಿ ನೀರು ಸಿಗದೆ ಸಾಯುತ್ತಿವೆಯಂತೆ.



೨. ಇನ್ನೊಂದು ತಿಂಗಳಿನಲ್ಲಿ ಮಳೆಗಾಲ ಬರುತ್ತದೆ. ಈಗಾಗಲೆ ನಮ್ಮ ಭೂಮಿಯ ಅಂತರ್ಜಲ ಖಾಲಿಯಾಗುತ್ತಾ ಬಂದಿದೆ. ಬರುವ ಮಳೆಯಲ್ಲಿ ಅದು ಮತ್ತೆ ಭರ್ತಿ ಆಗುವಂತೆ ಮಾಡುವ ಜವಾಬ್ದಾರಿ ನಮ್ಮದು. ಆದ್ದರಿಂದ, ದಯವಿಟ್ಟು ನಿಮ್ಮ ನಿಮ್ಮ ಮನೆಯ ಎದುರು ಸ್ವಲ್ಪ ಜಾಗವಿದ್ದಲ್ಲಿ, ಸ್ವಲ್ಪ ಆಳವಾದ ಗುಂಡಿ ತೋಡಿ ಬಿದ್ದ ಮಳೆನೀರು ಅದ್ರಒಳಕ್ಕೆ ಹೋಗುವಂತೆ ಮಾಡಿ. ಬಾಡಿಗೆ ಮನೆಯಲ್ಲಿ ಇರುವವರು ಮನೆಯ ಒಡೆಯರನ್ನು ಕೇಳಿ ಮಾಡಿಸಿ.



೩. ಜೊತೆಗೆ ಒಂದು ಚಿಕ್ಕ ಗಿಡವನ್ನು ಮಲೆಗಾಲದಲ್ಲಿ ನೆಡಿ. ನೀವು ನೆಟ್ಟ ದಿನವೇ ವನಮಹೋತ್ಸವ ಆಗಿರುತ್ತದೆ. ನಾವು ಪರಿಸರದಿಂದ ಎಷ್ಟಲ್ಲ ಪಡೆದಿದ್ದೇವೆ. ನಮ್ಮಿಂದ ಪರಿಸರಕ್ಕೆ ಸ್ವಲ್ಪ ಕಳೆ ಬರಲಿ.


ಸ್ವಲ್ಪ ಓವರ್ ಆಯ್ತಲ್ವಾ. ಸರಿ ಬಿಡಿ.



ಧನ್ಯವಾದಗಳೊಂದಿಗೆ,
ದತ್ತಾತ್ರೇಯ.