ಚತುರ ನೇಕಾರ

ಚತುರ ನೇಕಾರ

ಕವನ

ಕಾಮನ ಬಿಲ್ಲಿನ ಬಣ್ಣಗಳೇಳನು

ಬಳಸಿದನೇನು ಕಲೆಗಾರ

ಎಂತಹ ಸುಂದರ ಗಣಪತಿ ಮೂರ್ತಿಯ

ಮಾಡಿದ ಚಂದದಿ ನೇಕಾರ

 

ಬಗೆ ಬಗೆ ಬಣ್ಣದ ದಾರವ ಬಳಸುತ

ಮಾಡಿದ ಗಣಪನ ಮೂರ್ತಿಯಿದು

ಮುಕುಟಕೆ ರತ್ನವ ಪೋಣಿಸಿದಂತಿದೆ

ಬೆಳಕಲಿ ಪಳ ಪಳ ಮಿಂಚುವುದು

 

ಆನೆಯ ಮೊಗದಲಿ ತ್ರಿಶೂಲ ತಿಲಕವು

ಸೊಂಡಿಲಿಗಿರಿಸಿದ ಪದಕವನು

ಚಾಮರ ಕರ್ಣಗೆ ಕರಗಳು ನಾಲ್ಕಿವೆ

ತೊಡಿಸಿದ ಸುಂದರ ಮಾಲೆಯನು

 

ಪಟ್ಟೆ ಪೀತಾಂಬರ ಉಡಿಸಿದ ಮೂರ್ತಿಗೆ

ಎಡಕರದಲ್ಲಿದೆ ಸಿಹಿ ಉಂಡೆ

ಅಭಯವ ತೋರುವ ಬಲಹಸ್ತವನು

ಕಾಣುತ ಮನದಲಿ ಮುದಗೊಂಡೆ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್