ಚಲ್ತಾ ಹೈ....ಬಿಡಿ ಸಾರ್ !

ಚಲ್ತಾ ಹೈ....ಬಿಡಿ ಸಾರ್ !

ಬರಹ

ಈಗೇನು ಇಂದಿನ ದಿನಗಳಲ್ಲಿ 'ಚಲ್ತಾ ಹೈ....ಬಿಡಿ ಸಾರ್ '! ಎನ್ನುವ ಮಾತು ಕೇಳಕ್ಕೇ ಬೇಜಾರು !
ಮೊನ್ನೆ, ಪೆನ್ಷನ್ ತೊಗೊಳಕ್ಕೆ ಎಸ್.ಬಿ.ಐ ಗೆ ಹೋಗಿದ್ದೆ. ಮಧ್ಯದಲ್ಲೇ ಕಂಪ್ಯೂಟರ್ ಕೈಕೊಡ್ತು. ಪಿ.ಪಿ.ಎಫ್ ಗೆ ಹಣ ಕಟ್ಟಬೇಕಿತ್ತು. 'ಬೇಗ ಏನಾದ್ರು ಮಾಡಿ', ಅಂದರೆ ಅಲ್ಲಿನ ಅಧಿಕಾರಿ ಹೇಳ್ತಾರೆ. ಚಲ್ತಾ ಹೈ....ಬಿಡಿ ಸಾರ್ !

ಕೆನರಾ ಬ್ಯಾಂಕ್ ನಲ್ಲಿ 'ಹೊಸವರ್ಷದ ಕ್ಯಾಲೆಂಡರ್ ಬಂತಾ', ಅಂತ ಕೇಳಿದ್ರೆ, 'ಹೌದು ಬಂತು, ನೋಡಿ ಈಗ್ತಾನೆ ಎಲ್ಲಾ ಖರ್ಛಾಗಿಹೋಯ್ತು' ! ಅರೆ, ಏನ್ಹೇಳೋದ್ ನೀವು, ನನಗೂ ಸಿಕ್ಕಿಲ್ಲ, ನೀವ್ ಎಲ್ಲ ಕಸ್ಟಮರ್ ಗೆ ಕೊಟ್ಟಿಲ್ಲ.. ಈಗ್ಲೆ ಹೇಗ್ಖರ್ಚಾಯ್ತು ? ಅಂದ್ರೆ.. ಇಲ್ಲೇ ಟೇಬಲ್ ಮೇಲಿಟ್ಟಿದ್ದೆ.ಒಬ್ಬೊಬ್ರೆ ತೊಗೊಂಡ್ ಹೋದ್ರು ನೋಡಿ' ಈ ಉತ್ತರ ಕೇಳಿ ಬೇಸ್ರ ಆಯ್ತು. ಮ್ಯಾನೇಜರ್ ಕೂಡ ಅದನ್ನೆ ಅನುಮೋದಿಸಿದರು. ಅಲ್ಲ ಸರ್...ನಿಮ್ಮ ಗಿರಾಕಿಗಳೆಷ್ಟು ? ಅಂತ ತಿಳ್ಕೊಂಡ್ ನೀವು ಇಷ್ಟ್ ಕಾಪಿ ಕಳ್ಸಿ ಅಂತ ಕೇಳಿರ್ಬೋದಲ್ವ ? ಮತ್ತೆ ಎಲ್ಲ ಗಿರಾಕಿಗಳಿಗೆ ಹೀಗೆ ಹೇಳ್ ಕಳಿಸ್ತೀರ ? ಈ ಗಾಗ್ಲೆ ಎಲ್ಲ ಜನ ಕೂಗಾಡ್ತಿದಾರೆ ! ಚಲ್ತಾ ಹೈ....ಬಿಡಿ ಸಾರ್ ! ಅಂದ್ರೆ ಜನ ಕೇಳ್ಬೇಕಲ್ಲ !

ಅದೇನೋ ಕ್ಯಾಲೆಂಡರ್ ಅಂದ್ರೆ ಜನ ಹುಚ್ಚರ್ ತರ್ಹ ಆಡ್ತಾರೆ ! ನಮ್ಮ ಡಾಕ್ಟ್ರು, ಫೋನ್ ನಲ್ಲಿ 'ದೆಖೊ ಚೆಕ್ ಬುಕ್ ಕೆ ಸಾಥ್, ಕ್ಯಾಲೆಂಡರ್ ಭೀ ಲಾನ; ಕೆನರಾ ಬ್ಯಾಂಕ್ ವಾಲ ಬೋಲಾ ಹೈ ಆಜ್ ಕ್ಯಾಲೆಂಡರ್ ಆನೇವಾಲ ಕರ್ಕೆ' ಅಂತ ಹೆಳ್ತಿದ್ರು !

೩ ದಿನ ರಜ ಪಡೆದು ಅರಾಮಾಗಿದ್ದ ನನ್ನ ಮಗ, ಮಂಗಳವಾರ ಬೆಳಿಗ್ಯೆ ಏಳಲು ತಕರಾರು ಮಾಡ್ತಾನೆ ! 'ಚಲ್ತಾ ಹೈ....ಬಿಡಿ ಅಪ್ಪ' !

ಹೀಗೆ ಆದ್ರೆ ನಮ್ದೇಶದ್ ಗತಿ ?

ಚಲ್ತಾ ಹೈ....ಬಿಡಿ ಸಾರ್ ! ಅನ್ನಕ್ಕೆ ಆಗುತ್ತಾ... ರಾಮ ರಾಮ....